ಪ್ರಭಾಸ್ ಅಭಿಮಾನಿಗಳಿಗೆ ಹೊಂಬಾಳೆ ಫಿಲ್ಮ್ಸ್ ಗುಡ್ ನ್ಯೂಸ್; ಗೆಟ್ ರೆಡಿ ಡಾರ್ಲಿಂಗ್ಸ್!

ಕಳೆದ ಕೆಲ ಗಂಟೆಗಳಿಂದ ಟ್ವಿಟ್ಟರ್‌ನಲ್ಲಿ 'ಸಲಾರ್' ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆ ಇನ್ನೆರಡು ದಿನಗಳಲ್ಲಿ ಏನೋ ದೊಡ್ಡದಾಗಿ ಪ್ಲ್ಯಾನ್ ಮಾಡಿದೆ ಅಂತ ಪ್ರಭಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಡಾರ್ಲಿಂಗ್ಸ್‌ ಕಾಯ್ತಿದ್ದ ಆ ಟೈಮ್ ಬಂದೇ ಬಿಡ್ತು ಅಂತ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಶುರುವಾಗಿದೆ.

ಬಾಹುಬಲಿ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಸಲಾರ್'. 'ಕೆಜಿಎಫ್' ಮಾಸ್ಟರ್‌ ಮೈಂಡ್ ಪ್ರಶಾಂತ್ ನೀಲ್ ನಿರ್ದೇಶನದ ಹೈವೋಲ್ಟೇಜ್ ಎಂಟರ್‌ಟೈನರ್ ಸಿನಿಮಾ ಯಾವಾಗ ಬರುತ್ತೋ ಎಂದು ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಕೊನೆ ಪಕ್ಷ ಒಂದು ಟೀಸರ್ ಆದರೂ ರಿಲೀಸ್ ಮಾಡುವಂತೆ ಕೇಳುತ್ತಲೇ ಇದ್ದಾರೆ. 'ಸಲಾರ್' ಫಸ್ಟ್ ಗ್ಲಿಂಪ್ಸ್ ರಿಲೀಸ್‌ಗೆ ಇದೀಗ ಮುಹೂರ್ತ ಫಿಕ್ಸ್ ಆಗಿದೆ ಅನ್ನುವ ಗುಸುಗುಸು ಶುರುವಾಗಿದೆ.

'ಕೆಜಿಎಫ್' ಸರಣಿ ನಂತರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾ ಇದು. ಬಹುಕೋಟಿ ವೆಚ್ಚದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗುತ್ತಿದೆ. ಕೊರೊನಾ ಹಾವಳಿಯಿಂದ 'ಸಲಾರ್' ರಿಲೀಸ್ ತಡವಾಗುತ್ತಿದೆ. ಪ್ರಭಾಸ್ ನಟನೆಯ 'ಆದಿಪುರುಷ್' ನಂತರ ಮುಂದಿನ ವರ್ಷ ಮಾಫಿಯಾ ಡಾನ್ ಅವತಾರದಲ್ಲಿ ಸಿಲ್ವರ್‌ ಸ್ಕ್ರೀನ್‌ಗೆ ಯಂಗ್ ರೆಬಲ್ ಸ್ಟಾರ್ ಎಂಟ್ರಿ ಕೊಡಲಿದ್ದಾರೆ.

 ಸ್ವಾತಂತ್ರ್ಯ ದಿನಾಚರಣೆ ಟೀಸರ್

ಸ್ವಾತಂತ್ರ್ಯ ದಿನಾಚರಣೆ ಟೀಸರ್

ಹೌದು, ಇಂತಹದೊಂದು ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ 'ಸಲಾರ್' ಸಿನಿಮಾ ಫಸ್ಟ್ ವಿಡಿಯೋ ಝಲಕ್ ರಿವೀಲ್ ಆಗುವ ನಿರೀಕ್ಷೆಇದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್' ಪ್ರಭಾಸ್ ಆರ್ಭಟ ಹೇಗಿರುತ್ತದೆ ಅನ್ನುವುದರ ಸ್ಯಾಂಪಲ್ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.

 ಡಾರ್ಲಿಂಗ್ಸ್ ಟ್ವಿಟ್ಟರ್ ಟ್ರೆಂಡ್

ಡಾರ್ಲಿಂಗ್ಸ್ ಟ್ವಿಟ್ಟರ್ ಟ್ರೆಂಡ್

ತಮ್ಮ ಅಭಿಮಾನಿಗಳನ್ನು ಪ್ರಭಾಸ್ ಡಾರ್ಲಿಂಗ್ಸ್ ಎಂದು ಕರೆಯುತ್ತಾರೆ. ಇನ್ನೆರಡು ದಿನಗಳಲ್ಲಿ 'ಸಲಾರ್' ಸಿನಿಮಾ ಅಪ್‌ಡೇಟ್ ಬರುತ್ತದೆ ಎಂದು ಡಾರ್ಲಿಂಗ್ಸ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ಟ್ವೀಟ್ ಮಾಡಿ ಸದ್ದು ಮಾಡುತ್ತಿದ್ದಾರೆ. ಟ್ವಿಟ್ಟರ್‌ ಸದ್ಯ 'ಸಲಾರ್'ಮಯವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಟೀಸರ್ ಗ್ಯಾರೆಂಟಿ ಎಂದು ಫಿಕ್ಸ್ ಆಗಿಬಿಟ್ಟಿದ್ದಾರೆ.

 ಡೆಡ್ಲಿ ಕಾಂಬಿನೇಷನ್ ಪ್ರಾಜೆಕ್ಟ್

ಡೆಡ್ಲಿ ಕಾಂಬಿನೇಷನ್ ಪ್ರಾಜೆಕ್ಟ್

ಬಾಹುಬಲಿ ಸರಣಿ ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ ಪ್ರಭಾಸ್. 'ಕೆಜಿಎಫ್' ಸರಣಿ ಸಿನಿಮಾಗಳಿಂದ ನ್ಯಾಷನಲ್‌ವೈಡ್ ಸೆನ್ಸೇಷನ್ ಕ್ರಿಯೇಟ್ ಮಾಡಿದ ಪ್ರಶಾಂತ್ ನೀಲ್. ಇವರಿಬ್ಬರ ಕಾಂಬಿನೇಷನ್‌ ಸಿನಿಮಾ ಅಂದರೆ ಕೇಳಬೇಕಾ? ಇದೇ ಕಾರಣಕ್ಕೆ 'ಸಲಾರ್' ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. 500 ಕೋಟಿ ರೂ. ಬಜೆಟ್ 'ಆದಿಪುರುಷ್' ಚಿತ್ರಕ್ಕಿಂತಲೂ 'ಸಲಾರ್' ಸಿನಿಮಾ ಹೆಚ್ಚು ಕುತೂಹಲ ಕೆರಳಿಸಿದೆ.

 ಘಟಾನುಘಟಿಗಳ ಸಿನಿಮಾ 'ಸಲಾರ್'

ಘಟಾನುಘಟಿಗಳ ಸಿನಿಮಾ 'ಸಲಾರ್'

'ಕೆಜಿಎಫ್' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ 'ಸಲಾರ್' ಚಿತ್ರಕ್ಕೂ ತನು ಮನ ಅರ್ಪಿಸಿ ಕೆಲಸ ಮಾಡುತ್ತಿದೆ. ಭುವನ್ ಗೌಡ ಸಿನಿಮಾಟೋಗ್ರಫಿ, ರವಿಬಸ್ರೂರು ಮ್ಯೂಸಿಕ್, ಶಿವಕುಮಾರ್ ಆರ್ಟ್ ಡೈರೆಕ್ಷನ್ ಈ ಚಿತ್ರಕ್ಕಿದೆ. ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಜಗಪತಿ ಬಾಬು, ಈಶ್ವರಿರಾವ್, ಮಧು ಗುರುಸ್ವಾಮಿರಂತಹ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸಹ 'ಸಲಾರ್' ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.

More from Filmibeat

English summary
Pan India Star Prabhas And Prashanth Neel's Massive project Salaar Update in 2 days. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X