ಎಲ್ಲರೂ ಮರೆತು ಹೋಗಿದ್ದ 4 ಚಿತ್ರಗಳು 6 ವರ್ಷಗಳ ಬಳಿಕ ನೇರವಾಗಿ ಓಟಿಟಿಗೆ ಎಂಟ್ರಿ!

ಒಂದು ಸಿನಿಮಾ ನಿರ್ಮಾಣ ಮಾಡೋದು, ಅದನ್ನು ರಿಲೀಸ್ ಮಾಡೋದು ಅಷ್ಟು ಸುಲಭದ ಮಾತಲ್ಲ. ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳೇ ಶುರುವಾಗಿ ನಿಂತು ಹೋಗಿರುವ ಸಾಕಷ್ಟು ಉದಾಹರಣೆಗಳಿವೆ. ಇನ್ನು ಬಿಡುಗಡೆಗೆ ಸಿದ್ಧವಾಗಿ ಡಬ್ಬಾದಲ್ಲೇ ಉಳಿದಿರುವ ಸಿನಿಮಾಗಳ ಲಿಸ್ಟ್ ಕೂಡ ದೊಡ್ಡದಿದೆ.

ಕಾರಣಾಂತರಗಳಿಂದ ಕೆಲ ಸಿನಿಮಾಗಳು ಅರ್ಧಕ್ಕೆ ನಿಂತರೆ ಮತ್ತೆ ಕೆಲವು ಕಂಪ್ಲೀಟ್ ಆಗಿದ್ದರೂ ತೆರೆಗೆ ಬರಲ್ಲ. 6 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸೂಪರ್ ಸ್ಟಾರ್ ಸಿನಿಮಾ ರೀಮೆಕ್ ಇದೀಗ ನೇರವಾಗಿ ಓಟಿಟಿಗೆ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಅದು ಒಂದು ಸಿನಿಮಾ ಅಲ್ಲ. ಒಂದೇ ಕಥೆಯ 4 ಬೇರೆ ಬೇರೆ ಸಿನಿಮಾಗಳು ಅನ್ನೋದು ವಿಶೇಷ.

Parul Yadav, Kajal Aggarwal and Tamannahs Remakes of Queen direct OTT release

ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗುವುದಕ್ಕೂ ಮುನ್ನ ಒಂದೇ ಕಥೆ ಆಧರಿಸಿ 4 ಭಾಷೆಗಳಲ್ಲಿ ಬೇರೆ ಬೇರೆ ನಟಿಯರನ್ನು ಬಳಸಿಕೊಂಡು ಬಾಲಿವುಡ್ 'ಕ್ವೀನ್' ಚಿತ್ರವನ್ನು ರೀಮೆಕ್ ಮಾಡಲಾಗಿತ್ತು. ಹಿಂದಿಯಲ್ಲಿ ಕಂಗನಾ ರಾಣಾವತ್ ನಟನೆಯ ಈ ಕಾಮಿಡಿ ಡ್ರಾಮಾ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿ ಪಾರುಲ್ ಯಾದವ್ ನಾಯಕಿಯಾಗಿ ನಟಿಸಿದರೆ ತೆಲುಗಿನಲ್ಲಿ ತಮನ್ನಾ ಮಹಾಲಕ್ಷ್ಮಿ ಆಗಿದ್ದರು. ಇನ್ನು ತಮಿಳಿನಲ್ಲಿ ಕಾಜಲ್, ಮಲಯಾಳಂನಲ್ಲಿ ಮಂಜಿಮಾ ಮೋಹನ್ ಮಿಂಚಿದ್ದರು.

ವಿಕಾಸ್ ಬೇಹ್ಲ್ ನಿರ್ದೇಶನದ 'ಕ್ವೀನ್' ಸಿನಿಮಾ 2014ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ದಕ್ಷಿಣದ 4 ಭಾಷೆಗಳಿಗೆ ರೀಮೆಕ್ ಮಾಡುವ ಪ್ರಯತ್ನ ನಡೀತು. ಕನ್ನಡ ಮತ್ತು ತಮಿಳಿನಲ್ಲಿ ರಮೇಶ್ ಅರವಿಂದ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮಲಯಾಳಂನಲ್ಲಿ ನೀಲಕಂಠ ರೆಡ್ಡಿ ಹಾಗೂ ತೆಲುಗಿನಲ್ಲಿ ಪ್ರಶಾಂತ್ ವರ್ಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. 2017ರಲ್ಲಿ ಚಿತ್ರೀಕರಣ ಆರಂಭವಾಯಿತು. ವಿದೇಶಗಳಲ್ಲೂ ಸಿನಿಮಾ ಚಿತ್ರೀಕರಣ ನಡೀತು.

'ಕ್ವೀನ್' ಚಿತ್ರದಲ್ಲಿ ಪಂಜಾಬಿ ಹುಡುಗಿ ರಾಣಿ ಮೆಹ್ರಾ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಮೊದುವೆಯ ಹೊಸ್ತಿಲಲ್ಲಿ ವರ ಕೈಕೊಟ್ಟಾಗ ರಾಣಿ, ತನ್ನ ದುಃಖ ಕಳೆಯಲು ಒಬ್ಬೊಂಟಿಯಾಗಿ ಹನಿಮೂನ್‌ಗೆ ಹೊರಡುತ್ತಾಳೆ. ಈ ಹಾದಿಯಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥೆ. 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 90 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆ ಕಾಲಕ್ಕೆ ಇದು ಸೂಪರ್ ಹಿಟ್ ಎನಿಸಿಕೊಂಡಿತ್ತು.

ಇದೇ ಕಥೆಯನ್ನು ದಕ್ಷಿಣದ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಂಡು 4 ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಆಗಲೇಯಿಲ್ಲ. ಎರಡು ಬಾರಿ ರಿಲೀಸ್ ಡೇಟ್ ಘೋಷಣೆ ಆದರೂ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿಲ್ಲ. ಬಳಿಕ ಕೋವಿಡ್ ಸಂಕಷ್ಟ ಎದುರಾಗಿ ಜನ ಚಿತ್ರವನ್ನು ಮರೆತುಬಿಟ್ಟಿದ್ದರು.

Parul Yadav, Kajal Aggarwal and Tamannahs Remakes of Queen direct OTT release

ಸದ್ಯ ಈಗ ಓಟಿಟಿ ಟ್ರೆಂಡ್ ನಡೀತಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸಿನಿಮಾಗಳು 40 ದಿನಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತವೆ. ಕೆಲವೊಮ್ಮೆ ನೇರವಾಗಿ ಓಟಿಟಿಗೆ ಕೆಲ ಸಿನಿಮಾಗಳು ಬರುತ್ತವೆ. ಇನ್ನು ಡಿಜಿಟಲ್‌ ರಿಲೀಸ್‌ಗಂತ್ಲೇ ಕೆಲವರು ಸಿನಿಮಾಗಳನ್ನು ಕಟ್ಟಿಕೊಡುತ್ತಾರೆ. ಇದೀಗ 'ಕ್ವೀನ್' ಸೌತ್ ರೀಮೆಕ್‌ಗಳು ನೇರವಾಗಿ ಓಟಿಟಿಗೆ ಬರುತ್ತೆ ಎನ್ನುವ ಗುಸುಗುಸು ಶುರುವಾಗಿದೆ.

ಕನ್ನಡದ 'ಬಟರ್‌ಫ್ಲೈ', ತೆಲುಗಿನ 'ದಟ್ ಈಸ್ ಮಹಾಲಕ್ಷ್ಮಿ', ತಮಿಳು 'ಪ್ಯಾರಿಸ್ ಪ್ಯಾರಿಸ್' ಹಾಗೂ ಮಲಯಾಳಂ 'ಜಾಮ್ ಜಾಮ್' ಸಿನಿಮಾಗಳು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ಗೆ ಎಂಟ್ರಿ ಕೊಡುತ್ತದೆ ಎನ್ನುವ ಚರ್ಚೆ ಶುರುವಾಗಿದೆ. 10 ವರ್ಷಗಳ ಹಿಂದೆ ಗೆದ್ದ ಸಿನಿಮಾ ಕಥೆಯನ್ನು ಈಗ ಜನ ಥಿಯೇಟರ್‌ನಲ್ಲಿ ನೋಡುತ್ತಾರಾ? ಇಲ್ವಾ? ಎನ್ನುವ ಅನುಮಾನವೂ ಇದೆ. ಅದೇ ಕಾರಣಕ್ಕೆ ಓಟಿಟಿ ರಿಲೀಸ್ ಬೆಸ್ಟ್ ಎನ್ನುವ ಮಾತುಗಳು ಕೇಳಿಬರ್ತಿದೆ.

More from Filmibeat

English summary
Southern remakes of Queen planning for direct OTT release;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X