»   » ಸಪ್ನ ಚಿತ್ರಮಂದಿರದ ಸ್ಲಾಟು : ಸದ್ಯಕ್ಕೆ ಭರಣಾಗರ್ಧ, ಪಾಟೀಲರಿಗರ್ಧ

ಸಪ್ನ ಚಿತ್ರಮಂದಿರದ ಸ್ಲಾಟು : ಸದ್ಯಕ್ಕೆ ಭರಣಾಗರ್ಧ, ಪಾಟೀಲರಿಗರ್ಧ

Subscribe to Filmibeat Kannada

ಮೌನ ಪ್ರದರ್ಶನ ಮಾತಿನ ಚಕಮಕಿಗೆ ತಿರುಗಿತು. ನಾಗಾಭರಣ ಬೊಂಬಡಾ ಬಜಾಯಿಸುತ್ತಿದ್ದರು. ಬಿ.ಸಿ.ಪಾಟೀಲರು ಪೊಲೀಸ್‌ ಗತ್ತಿನಲ್ಲೇ ಪ್ರತಿಪಾದನೆಗೆ ಇಳಿದಿದ್ದರು. ವಿಜಯದಶಮಿಯಂದು ಮನೆಯಲ್ಲಿ ಹಬ್ಬದೂಟ ಮಾಡುವ ಬದಲು ಇಬ್ಬರೂ ಸಪ್ನ ಚಿತ್ರಮಂದಿರದ ಮುಂದೆ ಮುಫತ್‌ ಮನರಂಜನೆ ಕೊಡುತ್ತಿದ್ದರು. ಪೊಲೀಸರು ಮಧ್ಯೆ ಪ್ರವೇಶಿಸಿ ಕಾಜಿ ನ್ಯಾಯ ಮಾಡಿದರು. ಪಾಟೀಲರ ಶಿವಪ್ಪ ನಾಯಕನಿಗೆ ಎರಡು, ಭರಣಾರ ನೀಲಾಗೂ ಪ್ರತಿ ದಿನ ಎರಡು ಪ್ರದರ್ಶನಗಳು. ಪುಟ್ಟ ಚಿತ್ರಮಂದಿರದ ಪ್ರದರ್ಶನಗಳೂ ಇಬ್ಬರಿಗೂ ಸಮಾನವಾಗಿ ಹಂಚಿಹೋದವು.

ಸಪ್ನ ಚಿತ್ರಮಂದಿರದ ಮುಂದೆ ಗುರುವಾರ ಸೂರ್ಯ ನೆತ್ತಿಗೆ ಬರುವ ಮುನ್ನವೇ ಶುರುವಾದ ಭರಣಾ ನೇತ್ತುತ್ವದ ನೀಲಾ ಚಿತ್ರ ತಂಡದ ಮೌನ ಪ್ರತಿಭಟನೆಯ ಅಭಿಯಾನ ಸಂಜೆ ಹೊತ್ತಿಗೆ ಚಲನ ಚಿತ್ರ ವಾಣಿಜ್ಯ ಮಂಡಳಿ ಎದುರು ನಿಂತಿತು. ಅಲ್ಲೂ ಭರಣಾ ಮಾತಾಡಲಿಲ್ಲ ; ಅವರು ಹಿಡಕೊಂಡಿದ್ದ ಬೋರ್ಡು ಮಾತಾಡಿತು.


ಶುಕ್ರವಾರ ವಿಜಯದಶಮಿಯ ಎಣ್ಣೆಸ್ನಾನವನ್ನೂ ಮಾಡದೆ ಭರಣಾ ನೀಲಾ ಎತ್ತಂಗಡಿ ತಡೆಯಲು ಥಿಯೇಟರ್‌ ಮುಂದೆ ನಿಂತರು. ಬಿ.ಸಿ.ಪಾಟೀಲರೂ ಬಂದರು. ದಾರದ ಕನ್ನಡಕವನ್ನು ಇಳಿಬಿಟ್ಟ ಭರಣಾ, ಪ್ಲೇ ಬಾಯ್‌ ಥರಾ ಟೀ ಶರ್ಟ್‌ ಹಾಕಿದ್ದ ಮಾಜಿ ಪೊಲೀಸ್‌ ಪಾಟೀಲ್‌ ಮಾತಿಗಿಳಿದರು. ತ್ರಿವೇಣಿ ಥಿಯೇಟರ್‌ನಲ್ಲೇ ಶೇ.20ರಷ್ಟು ಷೇರು ಹುಟ್ಟುತ್ತಿತ್ತು. ವಾಣಿಜ್ಯ ಮಂಡಳಿ ಅನುಮತಿ ಕೊಟ್ಟಿದೆಯೆಂದು ನಿರ್ಮಾಪಕರ ಸಂಘ ಪತ್ರ ಬರೆದ ಕಾರಣ ಸಪ್ನ ಥಿಯೇಟರ್‌ಗೆ ನನ್ನ ಚಿತ್ರ ವರ್ಗಾಯಿಸಲು ಒಪ್ಪಿದೆ ಅಂದರು ಪಾಟೀಲ್‌. ನೀಲಾ ಗಳಿಕೆ ನಿರೀಕ್ಷೆಗಿಂತ ಈಗ 6 ಸಾವಿರ ರುಪಾಯಿ ಕಡಿಮೆ ಇದೆ ನಿಜ. ಇನ್ನೊಂದೆರಡು ವಾರ ನೋಡಿ. ಸಿನಿಮಾ ಹೇಗೆ ಓಡುತ್ತೇ ಅಂತ. ಅಷ್ಟರಲ್ಲೇ ರಿಲೀಸ್‌ ಆಗಿ ಎರಡು ವಾರ ಆಗಿರುವ ಚಿತ್ರಕ್ಕಾಗಿ ನೀಲಾ ಖಾಲಿ ಮಾಡಿ ಅನ್ನೋದನ್ನ ನಾನು ಒಪ್ಪೋದಿಲ್ಲ ಅಂದರು ಭರಣಾ.

ಭರಣಾ ಮೌನ ಪ್ರತಿಭಟನೆಗೆ ಎರಡು ದಿನ ಮುಂಚೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್‌.ಚಂದ್ರು ಸಭೆ ಕರೆದಿದ್ದರು. ಪಾಟೀಲರನ್ನು ಹೊರಗೇ ಕೂರಿಸಿ, ಭರಣಾ ಜೊತೆ ಬರೋಬ್ಬರಿ ಒಂದು ತಾಸು ಮಾತಾಡಿದರು. ಚಂದರು ಭರಣಾಗೆ ಏನು ಹೇಳಿದರೋ ಅದು ಪಾಟೀಲರಿಗೆ ಗೊತ್ತಿಲ್ಲ. ಪಾಟೀಲರ ಶಿವಪ್ಪ ನಾಯಕ ಸಪ್ನಗೆ ವರ್ಗಾವಣೆಯಾದ ವಿಚಾರ ಭರಣಾ ಕಿವಿಗೆ ಬಿದ್ದದ್ದೇ ತಡ ಬೀದಿಗಿಳಿದರು. ಕೆಸಿಎನ್‌ ಸಭೆಯ ಉದ್ದಿಶ್ಯ ಸಂಪೂರ್ಣ ವಿಫಲವಾಗಿದೆ ಅನ್ನುವುದಕ್ಕೆ ಇದೇ ಸಾಕ್ಷಿ.

ಪ್ರಾಯಶಃ ಭರಣ ನೀಲಾವನ್ನು ಡಬ್ಬಕ್ಕೆ ತುಂಬಿಸಿಕೊಂಡು ಕೆಲ ತಿಂಗಳು ಇದಕ್ಕಾಗೇ ಕಾದಿದ್ದರು. ಕಲ್ಪನಾ ಚಿತ್ರಮಂದಿರದಲ್ಲಿ ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada