3ನೇ ಪತ್ನಿಯಿಂದಲೂ ದೂರಾದ್ರಾ ತೆಲುಗು ನಟ ಪವನ್ ಕಲ್ಯಾಣ್?
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಒಂದ್ಕಡೆ ಸಿನಿಮಾಗಳಲ್ಲಿ ನಟಿಸೋದ್ರ ಜೊತೆಗೆ ಮತ್ತೊಂದು ಕಡೆ ರಾಜಕೀಯರಂಗದಲ್ಲಿ ಸಕ್ರಿಯರಾಗಿದ್ದಾರೆ. ಮುಂದಿನ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಜನಸೇನಾ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಹಗಳಿರುಳು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಪಾಲಿಟಿಕ್ಸ್‌ನಲ್ಲಿ ಬ್ಯುಸಿಯಾಗಿದ್ದರೂ ಜನಸೇನಾನಿ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನೂರಾರು ಕೋಟಿ ಸಂಭಾವನೆ ಎಣಿಸುತ್ತಿದ್ದಾರೆ.
ಅಣ್ಣ ಚಿರಂಜೀವಿ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದ ಪವನ್ ಕಲ್ಯಾಣ್ ತಮ್ಮದೇ ಪರಿಶ್ರಮದಿಂದ ನೆಲೆ ಕಂಡುಕೊಂಡರು. ಮೆಗಾಸ್ಟಾರ್ ಪ್ರಭಾವಳಿಯಿಂದ ಹೊರ ಬಂದು ಪವರ್ ಸ್ಟಾರ್ ಆಗಿ ಮೆರೆದರು. 20- 25 ಸಿನಿಮಾಗಳಲ್ಲಿ ನಟಿಸಿ ದೊಡ್ಡ ಸ್ಟಾರ್‌ಡಮ್ ಸಂಪಾದಿಸಿದ್ದಾರೆ. ತಾನಾಯ್ತು ಸಿನಿಮಾ ಆಯ್ತು ಎಂದುಕೊಂಡಿದ್ದ ಪವರ್ ಸ್ಟಾರ್ ಜನಸೇನಾ ಪಕ್ಷ ಸ್ಥಾಪಿಸಿ ಚುನಾವಣೆ ಕಣಕ್ಕೆ ಧುಮುಕಿದರು. ಕಳೆದ ಚುನಾವಣೆಯಲ್ಲಿ ಸ್ವತಃ ಪವನ್ ಕಲ್ಯಾಣ್ ಸೇರಿದಂತೆ ಇಡೀ ಪಕ್ಷ ಹೀನಾಯವಾಗಿ ಸೋತಿತ್ತು.

ಚುನಾವಣೆಯಲ್ಲಿ ಸೋತರೂ ಪಟ್ಟುಬಿಡದ ಜನಸೇನಾನಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಅದಕ್ಕಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇನ್ನು ಪವನ್ ಸಿನಿಮಾ, ಪಾಲಿಟಿಕ್ಸ್ ಬಿಟ್ಟರೆ ವೈಯಕ್ತಿಕ ವಿಚಾರಗಳು ಪದೇ ಪದೇ ಚರ್ಚೆ ಗ್ರಾಸವಾಗುತ್ತಿರುತ್ತದೆ. ಚಿರು ಸಹೋದರ ಒಂದಲ್ಲ ಎರಡಲ್ಲ ಮೂರು ಮದುವೆ ಆಗಿದ್ದಾರೆ. ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿಸಿಕೊಂಡು ಪವನ್ ಮೇಲೆ ವಾಗ್ದಾಳಿ ನಡೆಸುತ್ತಿರುತ್ತಾರೆ.
ಪವನ್ ಕಲ್ಯಾಣ್ 3 ಮದುವೆ
ಪವನ್ ಕಲ್ಯಾಣ್ 1997ರಲ್ಲಿ ನಂದಿನಿ ಎಂಬುವವರನ್ನು ಮದುವೆ ಆಗಿದ್ದರು. 2007ರಲ್ಲಿ ಆಕೆಗೆ ಡಿವೋರ್ಸ್ ನೀಡಿದ್ದರು. 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು ದಂಪತಿ ಒಂದು ಗಂಡು, ಒಂದು ಹೆಣ್ಣು ಮಗುವಾಗಿತ್ತು. 2012ರಲ್ಲಿ ರೇಣುಗೆ ಡಿವೋರ್ಸ್ ನೀಡಿ 2013ರಲ್ಲಿ ಅನ್ನಾ ಲೆಜ್ನೆವಾ ಎಂಬಾಕೆಯ ಕೈ ಹಿಡಿದರು. ರಷ್ಯಾ ಮೂಲದ ಆಕೆಯನ್ನು ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು.

3ನೇ ಪತ್ನಿಯಿಂದಲೂ ದೂರಾದ್ರಾ?
ರಷ್ಯಾ ಪೌರತ್ವ ಹೊಂದಿರುವ ಅನ್ನಾ ಲೆಜ್ನೆವಾ ಹೈದರಾಬಾದ್‌ಗೆ ಶಿಫ್ಟ್ ಆಗಿದ್ದರು. ಪವನ್ ಕಲ್ಯಾಣ್ ಜೊತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದರು. ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಚೆಗೆ ಪವನ್- ಅನ್ನಾ ಎಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲೂ ಆಕೆಯ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಇದೇ ಕಾರಣಕ್ಕೆ ಇಬ್ಬರು ದೂರಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
ಟಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ
ಇತ್ತೀಚೆಗೆ ನಡೆದ ವರುಣ್- ಲಾವಣ್ಯ ನಿಶ್ಚಿತಾರ್ಥಕ್ಕೂ ಪವನ್ ಒಬ್ಬೊಂಟಿಯಾಗಿ ಬಂದಿದ್ದರು. ವಾರಾಹಿ ಯಾತ್ರೆ ಆರಂಭಿಸಿದ್ದ ಜನಸೇನಾನಿ ಯಾಗ ನಡೆಸಿದ್ದರು. ಸಾಮಾನ್ಯವಾಗಿ ಯಾಗಗಳಲ್ಲಿ ಪತಿ-ಪತ್ನಿ ಒಟ್ಟಿಗೆ ಭಾಗವಹಿಸಬೇಕು. ಆದರೂ ಅನ್ನಾ ಲೆಜ್ನೆವಾ ಪಾಲ್ಗೊಳ್ಳಲಿಲ್ಲ. ರಾಮ್‌ಚರಣ್- ಉಪಾಸನಾ ಮಗಳ ತೊಟ್ಟಿಲು ಶಾಸ್ತ್ರಕ್ಕೂ ಅನ್ನಾ ಗೈರಾಗಿದ್ದರು. ಇದೇ ಕಾರಣಕ್ಕೆ ಇದೀಗ ಪವನ್- ಅನ್ನಾ ದೂರಾಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇಬ್ಬರು ಕಾನೂನುಬದ್ಧವಾಗಿ ಅಲ್ಲದಿದ್ದರೂ ಸಾಮಾಜಿಕವಾಗಿ ಬೇರ್ಪಟ್ಟಿದ್ದಾರೆ ಎನ್ನುವ ಚರ್ಚೆ ಈಗ ಶುರುವಾಗಿದೆ. 6 ತಿಂಗಳ ಹಿಂದೆ ಕೂಡ ಇಂತದ್ದೇ ಗುಸುಗುಸು ಕೇಳಿಬಂದಿತ್ತು.
ಅನ್ನಾ ಲೆಜ್ನೆವಾ ಈಗ ಎಲ್ಲಿದ್ದಾರೆ?
ಪವನ್ 3ನೇ ಪತ್ನಿ ಸದ್ಯ ಸಿಂಗಾಪುರ ಅಥವಾ ದುಬೈನಲ್ಲಿ ಇದ್ದಾರೆ ಎನ್ನುವ ವದಂತಿ ಹರಡಿದೆ. ಇನ್ನು ಮಕ್ಕಳೊಟ್ಟಿಗೆ ರಷ್ಯಾಗೆ ವಾಪಸ್ ಆಗಿದ್ದಾರೆ ಎನ್ನುವ ಊಹಾಪೋಹ ಕೂಡ ಇದೆ. ಪವನ್ ಕಲ್ಯಾಣ್ ಆಗಾಗ್ಗೆ ತನ್ನ ಮಕ್ಕಳೊಂದಿಗೆ ವೀಡಿಯೊ ಚಾಟ್‌ಗಳ ಮೂಲಕ ಮಾತನಾಡುತ್ತಾರೆ ಎಂದು ತೆಲುಗು ವೆಬ್‌ಸೈಟ್‌ಗಳಲ್ಲಿ ವರದಿ ಆಗುತ್ತಿದೆ. ಇದೇ ರೀತಿಯ ಪೋಸ್ಟ್‌ವೊಂದನ್ನು ಶೇರ್ ಮಾಡಿರುವ ನಿರ್ಮಾಪಕ, ಪವನ್ ಆಪ್ತ ಬಂಡ್ಲ ಗಣೇಶ್ ನಿಮಗ್ಯಾರು ಹೇಳಿದ್ದು? ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











