ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಚಿರಂಜೀವಿ ಸಿನಿಮಾ ಹೆಸರು!
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯಿಸಿರುವ 'ವಕೀಲ್ ಸಾಬ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಎರಡು ವರ್ಷದ ಬಳಿಕ ಪವನ್ ಚಿತ್ರವೂ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರಮಂದಿರಗಳು ಯಥಾಸ್ಥಿತಿಗೆ ಬಂದ ನಂತರ ಈ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ.
'ವಕೀಲ್ ಸಾಬ್' ಸಿನಿಮಾ ನಂತರ 27ನೇ ಚಿತ್ರಕ್ಕೂ ಪಿಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. 'ಗೌತಮಪುತ್ರ ಶಾತಕರ್ಣಿ' ನಿರ್ದೇಶಕ ಕ್ರಿಶ್ ಈ ಚಿತ್ರ ನಿರ್ದೇಶಿಸಲಿದ್ದಾರೆ. ಇದು ಮೆಗಾ ಬಜೆಟ್‌ಬಲ್ಲಿ ತಯಾರಾಗಲಿದ್ದು, ಪೌರಾಣಿಕ ಸಿನಿಮಾ ಎಂದು ಹೇಳಲಾಗುತ್ತಿದೆ.
ಇದೀಗ, ಮಲಯಾಳಂ ಹಿಟ್ ಸಿನಿಮಾ 'ಅಯ್ಯಪ್ಪನುಮ್ ಕೋಶಿಯುಮ್' ತೆಲುಗಿನಲ್ಲಿ ರೀಮೇಕ್ ಮಾಡುತ್ತಿದ್ದು, ಈ ಚಿತ್ರದಲ್ಲಿ ಪವನ್ ಕಲ್ಯಾಣ್ ನಾಯಕನಾಗಿ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಲಯಾಳಂ ಸಿನಿಮಾದ ರೀಮೇಕ್ ಚಿತ್ರಕ್ಕೆ ತೆಲುಗಿನಲ್ಲಿ 'ಬಿಲ್ಲಾ ರಂಗ' ಎಂದು ಹೆಸರಿಡಲು ನಿರ್ಧರಿಸಲಾಗಿದೆಯಂತೆ. 'ಬಿಲ್ಲಾ ರಂಗ' 1982ರಲ್ಲಿ ತೆರೆಕಂಡಿದ್ದ ಚಿತ್ರ. ಚಿರಂಜೀವಿ ಮತ್ತು ಮೋಹನ್ ಬಾಬು ಈ ಸಿನಿಮಾದಲ್ಲಿ ನಟಿಸಿದ್ದರು.
'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.


Click it and Unblock the Notifications











