ಪವನ್ ಕಲ್ಯಾಣ್ ಕಂಬ್ಯಾಕ್ ಗೆ ಭಾರಿ ಸಂಭಾವನೆ ಜೊತೆ ಷರತ್ತು!
ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯದಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಪಿಂಕ್ ಚಿತ್ರದ ತೆಲುಗು ರೀಮೇಕ್ ನಲ್ಲಿ ಪವರ್ ಸ್ಟಾರ್ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸುವುದಕ್ಕಾಗಿ ಬಹುದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಈಗ ಟಾಲಿವುಡ್ ನಲ್ಲಿ ಸದ್ದು ಮಾಡ್ತಿದೆ.
ಟಿ-ಟೌನ್ ನಲ್ಲಿ ಗಿರಿಗಿಟ್ಲೆ ಹೊಡೆಯುತ್ತಿರುವ ಸುದ್ದಿಯ ಪ್ರಕಾರ, ಪವನ್ ಕಲ್ಯಾಣ್ 'ಪಿಂಕ್' ರೀಮೇಕ್ ಮಾಡಲು ಸುಮಾರು 40 ಕೋಟಿ ಚಾರ್ಜ್ ಮಾಡ್ತಿದ್ದಾರಂತೆ.
40 ಕೋಟಿಯ ಜೊತೆಗೆ ನಿರ್ಮಾಪಕರೊಂದಿಗೆ ಲಾಭದಲ್ಲಿ 25% ನೀಡಿ ಎಂದು ಬೇಡಿಕೆಯಿಟ್ಟಿದ್ದಾರಂತೆ. ವೇಣು ಶ್ರೀರಾಮ್ ಈ ಚಿತ್ರ ನಿರ್ದೇಶಿಸುತ್ತಿದ್ದು, ದಿಲ್ ರಾಜು ಮತ್ತು ಬೋನಿ ಕಪೂರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರಂತೆ.

ಅಮಿತಾಭ್ ಬಚ್ಚನ್, ತಾಪ್ಸಿ ಪೆನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾವನ್ನ ತಮಿಳಿನಲ್ಲಿ ಅಜಿತ್ ರೀಮೇಕ್ ಮಾಡಿದ್ದರು. ಈಗ ತೆಲುಗಿಗೆ ಹೋಗುತ್ತಿದ್ದು, ಕುತೂಹಲ ಮೂಡಿಸಿದೆ.


Click it and Unblock the Notifications