For Quick Alerts
  ALLOW NOTIFICATIONS  
  For Daily Alerts

  ಮೆಗಾ ಫ್ಯಾನ್ಸ್‌ಗಾಗಿ ಮೆಗಾ ಈವೆಂಟ್: ಒಂದೇ ವೇದಿಕೆಯಲ್ಲಿ ಚಿರಂಜೀವಿ, ಪವನ್ ಕಲ್ಯಾಣ್

  |

  ಮೆಗಾಸ್ಟಾರ್ ಚಿರಂಜೀವಿ ಟಾಲಿವುಡ್‌ನ ಸೂಪರ್ ಹೀರೊ. ಹಲವು ದಶಕಗಳ ಕಾಲ ಚಿರಂಜೀವಿ ತೆಲುಗು ಟಾಪ್ ಹೀರೊಗಳ ಪಟ್ಟಿಯಲ್ಲಿದ್ದಾರೆ. ಹೆಚ್ಚು ಕಡಿಮೆ ನಾಲ್ಕು ದಶಕಗಳ ಕಾಲ ತಮ್ಮದೇ ಸ್ಟೈಲ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಈ ಮಧ್ಯೆ ರಾಜಕೀಯದ ಕಡೆಗೆ ಮುಖ ಮಾಡಿದ್ದರೂ, ಅಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ಈ ಕಾರಣಕ್ಕೆ ತಪ್ಪನ್ನು ತಿದ್ದಿಕೊಳ್ಳಲು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಮೆಗಾಸ್ಟಾರ್ ಈಗಾಗಲೇ 'ಖೈದಿ ನಂ 150', 'ಸೈರಾ: ನರಸಿಂಹ ರೆಡ್ಡಿ' ಹಾಗೂ 'ಆಚಾರ್ಯ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, 'ಸೈರಾ ನರಸಿಂಹ ರೆಡ್ಡಿ' ಹಾಗೂ 'ಆಚಾರ್ಯ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಲೇ ಇಲ್ಲ. ಹೀಗಾಗಿ ಮತ್ತೆ ಮೆಗಾ ಹಿಟ್ ಕೊಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

  ಚಿರಂಜೀವಿ ಹುಟ್ಟುಹಬ್ಬಕ್ಕೆ 'ಗಾಡ್ ಫಾದರ್': ಸಲ್ಲು ಬ್ರದರ್ ಜೊತೆ ಬಂದ ಮೆಗಾಸ್ಟಾರ್!ಚಿರಂಜೀವಿ ಹುಟ್ಟುಹಬ್ಬಕ್ಕೆ 'ಗಾಡ್ ಫಾದರ್': ಸಲ್ಲು ಬ್ರದರ್ ಜೊತೆ ಬಂದ ಮೆಗಾಸ್ಟಾರ್!

  'ಗಾಡ್ ಫಾದರ್' ರಿಲೀಸ್‌ಗೆ ರೆಡಿ

  'ಗಾಡ್ ಫಾದರ್' ರಿಲೀಸ್‌ಗೆ ರೆಡಿ

  ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರೋ ಸಿನಿಮಾಗಳಲ್ಲಿ 'ಗಾಡ್ ಫಾದರ್' ಕೂಡ ಒಂದು. ಮಲಯಾಳಂನ ಸೂಪರ್‌ ಹಿಟ್ ಸಿನಿಮಾ 'ಲೂಸಿಫರ್' ರಿಮೇಕ್ ಅನ್ನೋದು ಈಗಾಗಲೇ ಗೊತ್ತಿರೋ ವಿಷಯವೇ. ಆದರೂ, ಈ ಸಿನಿಮಾ ಹಲವು ಕಾರಣಗಳಿಗೆ ಕುತೂಹಲವನ್ನು ಕೆರಳಿಸಿದೆ. ಮೋಹನ್ ಲಾಲ್ ನಟಿಸಿದ್ದ ಪಾತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿದ್ದಾರೆ. ಕಾಲಿವುಡ್ ನಿರ್ದೇಶಕ ಮೋಹನ್ ರಾಜಾ ನಿರ್ದೇಶನ ಮಾಡುತ್ತಿದ್ದು, ಸದ್ಯ ಶೂಟಿಂಗ್ ಮುಗಿದಿದೆ. ಬಹಳ ಹಿಂದೆನೇ ಈ ಸಿನಿಮಾದ ಶೂಟಿಂಗ್ ಮುಗೀಬೇಕಿತ್ತು. ಆದರೆ ಕೆಲವು ಸಮಸ್ಯೆಗಳಿಂದ ಶೂಟಿಂಗ್‌ ಮುಗಿಯಲಿಲ್ಲ. ಹೀಗಾಗಿ ರಿಲೀಸ್‌ ಡೇಟ್‌ ಅನ್ನು ಮುಂದೂಡಿತ್ತು. ಈಗ 'ಗಾಡ್ ಫಾದರ್' ಸಿನಿಮಾವನ್ನು ರಿಲೀಸ್ ಮಾಡೋಕೆ ಸಜ್ಜಾಗಿ ನಿಂತಿದೆ.

  30 ಲಕ್ಷ ರೂ.ಗೆ ಖರೀದಿಸಿದ್ದ ಆಸ್ತಿಯನ್ನು 70 ಕೋಟಿ ರೂ.ಗೆ ಮಾರಿದ ಚಿರು: ಕಾರಣ ಏನು?30 ಲಕ್ಷ ರೂ.ಗೆ ಖರೀದಿಸಿದ್ದ ಆಸ್ತಿಯನ್ನು 70 ಕೋಟಿ ರೂ.ಗೆ ಮಾರಿದ ಚಿರು: ಕಾರಣ ಏನು?

  ಸಲ್ಮಾನ್ ಖಾನ್, ನಯನತಾರಾ ಸಿನಿಮಾ

  ಸಲ್ಮಾನ್ ಖಾನ್, ನಯನತಾರಾ ಸಿನಿಮಾ

  ರಿಮೇಕ್ ಆಗಿದ್ದರೂ, 'ಗಾಡ್ ಫಾದರ್' ಸಿನಿಮಾ ಸೆಳೆಯುವುದಕ್ಕೆ ಕಾರಣವಿದೆ. ಚಿರಂಜೀವಿ ಹೊರತಾಗಿ ಇಲ್ಲೊಂದು ಕ್ರೇಜಿ ಕಾಂಬಿನೇಷನ್ ಇದೆ. ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹಾಗೂ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಿದ್ದಾರೆ. ಹೀಗಾಗಿ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್‌ ನೋಡುವುದಕ್ಕೆ ಮೆಗಾ ಫ್ಯಾನ್ಸ್ ಹಾಗೂ ಸಲ್ಮಾನ್ ಅಭಿಮಾನಿಗಳು ಕಾದು ಕೂತಿದ್ದಾರೆ.

  ಪವನ್ ಕಲ್ಯಾಣ್ ಬಲ

  ಪವನ್ ಕಲ್ಯಾಣ್ ಬಲ

  ಚಿರಂಜೀವಿಗೆ ಸಹೋದರ ಪವನ್ ಕಲ್ಯಾಣ್ ಸಾಥ್ ನೀಡಲಿದ್ದಾರೆ. 'ಗಾಡ್‌ಫಾದರ್' ಸಿನಿಮಾ ಅಕ್ಟೋಬರ್ 5 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಹೀಗಾಗಿ ನಿಧಾನವಾಗಿ ಸಿನಿಮಾ ಪ್ರಚಾರವನ್ನು ಆರಂಭಿಸಿದೆ. ಟಾಲಿವುಡ್ ಮೂಲಗಳ ಪ್ರಕಾರ, ಸೆಪ್ಟೆಂಬರ್ ಕೊನೆಯ ವಾರದಲ್ಲಿ 'ಗಾಡ್ ಫಾದರ್' ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನಡೆಯಲಿದೆ. ಇದೇ ಕಾರ್ಯಕ್ರಮಕ್ಕೆ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಟಾಲಿವುಡ್ ಮೆಗಾ ಈವೆಂಟ್‌ಗೆ ಸಜ್ಜಾಗುತ್ತಿದೆ.

  ಇದೊಂದು ಪೊಲಿಟಿಕಲ್ ಸಿನಿಮಾ

  ಇದೊಂದು ಪೊಲಿಟಿಕಲ್ ಸಿನಿಮಾ

  'ಗಾಡ್ ಫಾದರ್' ಇದೊಂದು ಪೊಲಿಟಿಕಲ್ ಬ್ಯಾಕ್‌ಡ್ರಾಪ್ ಸಿನಿಮಾ. ಈಗಾಗಲೇ ಬಿಡುಗಡೆಯಾಗಿರೋ ಟ್ರೈಲರ್ ಹಾಗೂ ಟೀಸರ್‌ನಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅಲ್ಲದೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದ್ದು, ಈಗಾಗಲೇ ಕೆಲವು ದಾಖಲೆಗಳನ್ನು ಮುರಿದಿದೆ. ಟಾಲಿವುಡ್‌ನ ಯಂಗ್ ಟಿಪಿಕಲ್ ಹೀರೊ ಸತ್ಯದೇವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮನ್ ಸಂಗೀತ ನೀಡಿದ್ದಾರೆ.

  English summary
  Pawan Kalyan Chief Guest For Chiranjevvi Starrer God Father Pre Release Event, Know More.
  Friday, September 9, 2022, 8:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X