ಪವನ್ ಕಲ್ಯಾಣ್ ಗೆ 30 ಕೋಟಿ ಆಫರ್ ನೀಡಿದ ನಿರ್ಮಾಪಕ

2018ರಲ್ಲಿ ಬಿಡುಗಡೆಯಾಗಿದ್ದ ಅಜ್ಞಾತವಾಸಿ ಸಿನಿಮಾದ ನಂತರ ಪವನ್ ಕಲ್ಯಾಣ್ ಬೇರೆ ಯಾವ ಚಿತ್ರವನ್ನ ಮಾಡಿಲ್ಲ. ಚಿತ್ರರಂಗಕ್ಕೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಧುಮುಕಿದ್ದ ಪವರ್ ಸ್ಟಾರ್ ಆಂಧ್ರ ಪ್ರದೇಶದಲ್ಲಿ ಚುಕ್ಕಾಣಿ ಹಿಡಿಯಲು ಮುಂದಾದರು.

ಇದೀಗ, ಚುನಾವಣೆ ಮುಗಿದಿದೆ. ಫಲಿತಾಂಶ ಪ್ರಕಟ ಬಾಕಿಯಿದೆ. ಈ ನಡುವೆ ಪವನ್ ಕಲ್ಯಾಣ್ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಗಬ್ಬರ್ ಸಿಂಗ್ ನಾಯಕ ಕಂಬ್ಯಾಕ್ ಚಿತ್ರಕ್ಕಾಗಿ ಸುಮಾರು 30 ಕೋಟಿ ಆಫರ್ ನೀಡಲಾಗಿದ್ಯಂತೆ.

ಹೌದು, ಪವನ್ ಕಲ್ಯಾಣ್ ಅವರ ಕಂಬ್ಯಾಕ್ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದು, ಇದು 2019ರ ಅಂತ್ಯದಲ್ಲಿ ಆರಂಭವಾಗಲಿದೆಯಂತೆ. ಈ ಚಿತ್ರಕ್ಕಾಗಿ ಪವನ್ ಕಲ್ಯಾಣ್ ಅವರಿಗೆ 30 ಕೋಟಿ ಸಂಭಾವನೆ ನೀಡಲು ನಿರ್ಮಾಪಕರು ತೀರ್ಮಾನಿಸಿದ್ದಾರಂತೆ.

Pawan kalyan next movie remuneration 30 cr

ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಈಗಾಗಲೇ ತೆಲುಗು ಪವರ್ ಸ್ಟಾರ್ ಬಳಿ ಅಡ್ವಾನ್ಸ್ ನೀಡಿ ಕಾಲ್ ಶೀಟ್ ಕೂಡ ಪಡೆದುಕೊಂಡಿದ್ದಾರಂತೆ. ಅಂದ್ಹಾಗೆ, ಪವನ್ ಕಲ್ಯಾಣ್ ಈ ಚಿತ್ರಕ್ಕಾಗಿ ಒಟ್ಟಾರೆ 40 ದಿನ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಈಗ ಟಾಲಿವುಡ್ ಚಿತ್ತ ಮೇ 23ರ ಮೇಲೆ ನಿಂತಿದೆ. ಲೋಕಸಭೆ ಮತ್ತು ಆಂಧ್ರದ ವಿಧಾನಸಭೆ ಚುನಾವಣೆಯ ಫಲಿತಾಂಶ ಅಂದು ನಿರ್ಧರವಾಗಲಿದ್ದು, ಪವನ್ ಕಲ್ಯಾಣ್ ಕಂಬ್ಯಾಕ್ ಚಿತ್ರದ ಬಗ್ಗೆಯೂ ಆ ದಿನ ಸ್ಪಷ್ಟ ಉತ್ತರ ಸಿಗಲಿದೆ.

More from Filmibeat

English summary
Telugu superstar pawan kalyan charges 30 crores for his comeback movie under the mythri movie makers production.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X