»   » ಆಮೀರ್ ಖಾನ್ ಜಾಗ ತುಂಬುತ್ತಾರಾ ಪವನ್ ಕಲ್ಯಾಣ್?

ಆಮೀರ್ ಖಾನ್ ಜಾಗ ತುಂಬುತ್ತಾರಾ ಪವನ್ ಕಲ್ಯಾಣ್?

Posted By:
Subscribe to Filmibeat Kannada

ಕ್ಲಾಸ್ ಗೂ ಮಾಸ್ ಗೂ ಪಕ್ಕಾ ಬಾಸ್...ಪವರ್ ಸ್ಟಾರ್ ಪವನ್ ಕಲ್ಯಾಣ್! ಭಿನ್ನವಿಭಿನ್ನ ಪಾತ್ರಗಳಿಂದ ತೆರೆಮೇಲೆ ಎಲ್ಲಾ ಪ್ರೇಕ್ಷಕರನ್ನ ರಂಜಿಸುತ್ತಲೇ ಬಂದಿರುವ ಪವನ್ ಕಲ್ಯಾಣ್, ಯಾವುದೇ ಪಾತ್ರ ಕೊಟ್ಟರೂ, ಅದನ್ನ ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸುವುದರಲ್ಲಿ ನಿಸ್ಸೀಮ.

ಎಲ್ಲಾ ಪಾತ್ರಗಳಲ್ಲೂ ಸ್ಟೈಲ್ ಮೇನ್ಟೇನ್ ಮಾಡುವ ಪವನ್ ಕಲ್ಯಾಣ್, 'ಪಿಕೆ' ಯಂತಹ ಪಾತ್ರದಲ್ಲಿ ಕಾಣಿಸಿಕೊಂಡರೆ ಹೇಗೆ? ಈ ಐಡಿಯಾ ಸದ್ಯ ಟಾಲಿವುಡ್ ನ ಅನೇಕ ನಿರ್ಮಾಪಕರಿಗೆ ಹೊಳೆದಿದೆ. ಎಲ್ಲೆಡೆ 'ಪಿಕೆ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ 'ಪಿಕೆ'ಯನ್ನ ಟಾಲಿವುಡ್ ಗೆ ತರುವುದಕ್ಕೆ ಅನೇಕ ನಿರ್ಮಾಪಕರು ಕ್ಯೂ ನಿಂತಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಅಂತಹ ನಿರ್ಮಾಪಕರಲ್ಲಿ ಪವನ್ ಕಲ್ಯಾಣ್ ಅಭಿನಯದ 'ಗೋಪಾಲ ಗೋಪಾಲ' ಚಿತ್ರದ ಪ್ರೊಡ್ಯೂಸರ್ ಶರತ್ ಮರಾರ್ ಕೂಡ ಒಬ್ಬರು. ಆಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರವನ್ನು ತೆಲುಗಿನಲ್ಲಿ ರೀಮೇಕ್ ಮಾಡುವುದಕ್ಕೆ ಶರತ್ ಉತ್ಸುಕರಾಗಿದ್ದಾರೆ. ಈಗಾಗ್ಲೇ ಸಂಬಂಧ ಪಟ್ಟವರ ಜೊತೆ ಶರತ್ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರಂತೆ.

pawan-aamir

ಖುದ್ದು ಪವನ್ ಕಲ್ಯಾಣ್ ರ ದೊಡ್ಡ ಅಭಿಮಾನಿಯಾಗಿರುವ ಶರತ್, 'ಪಿಕೆ' ಚಿತ್ರದ ತೆಲುಗು ರೀಮೇಕ್ ವರ್ಷನ್ ನಲ್ಲಿ ಪವನ್ ಕಲ್ಯಾಣ್ ನಟಿಸಿದರೆ ಚಂದ ಅಂದುಕೊಂಡಿದ್ದಾರಂತೆ. ಆದ್ರೆ ಪವರ್ ಸ್ಟಾರ್ ಮಾತ್ರ 'ಪಿಕೆ' ರೀಮೇಕ್ ಬಗ್ಗೆ ತುಟಿಕ್ ಪಿಟಿಕ್ ಅಂದಿಲ್ಲ.

ಸದ್ಯಕ್ಕೆ 'ಗೋವಿಂದಾ ಗೋವಿಂದಾ' ಚಿತ್ರದಲ್ಲಿ ಬಿಜಿಯಾಗಿರುವ ಪವನ್, ನಂತ್ರ ಗಬ್ಬರ್ ಸಿಂಗ್ 2 ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ. ಅದು ಮುಗಿಯುವವರೆಗೂ ಪವನ್ ಯಾವುದೇ ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. [ಪವನ್ ಕಲ್ಯಾಣ್ ಗೆ ಸಿಕ್ಕ ಅತ್ಯಮೂಲ್ಯ ಗಿಫ್ಟ್ ಯಾವ್ದು?]

ಅಷ್ಟರೊಳಗೆ ಶರತ್ ಗೆ 'ಪಿಕೆ' ರೀಮೇಕ್ ರೈಟ್ಸ್ ಸಿಕ್ಕರೆ, ಪವನ್ ನ ಒಪ್ಪಿಸುವುದು ದೊಡ್ಡ ಕೆಲಸ ಅಲ್ಲವೇ ಅಲ್ಲ. ಒಂದ್ವೇಳೆ, ಪವನ್ ಒಪ್ಪಿಕೊಂಡ್ರೆ, 'ಪಿಕೆ' ಆಗಿ ಹೇಗಿರ್ತಾರೆ ಅಂತ ಒಮ್ಮೆ ನೀವೇ ಊಹಿಸಿಕೊಳ್ಳಿ...(ಏಜೆನ್ಸೀಸ್)

English summary
Latest buzz in Tollywood is that Aamir Khan's recently-released PK might be remade in Tollywood. Pawan Kalyan is said to be the front-runner to reprise Aamir's role in the Telugu Version.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada