ನನ್ನನ್ನು ಹಾಸಿಗೆಗೆ ಆಹ್ವಾನಿಸಿದವರೇ ಹೆಚ್ಚು, ಗಾಯಕಿ

ಅರುವತ್ತಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಹಾಡಿದ್ದಾರೆ. ಇತ್ತೀಚೆಗೆ ಈಕೆ ನಿಯತಕಾಲಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ದುಃಖ ದುಮ್ಮಾನಗಳನ್ನು ತೋಡಿಕೊಂಡಿದ್ದಾರೆ. ತಾನು ಸ್ಟುಡಿಯೋ ಒಳಗೆ ಹಾಡಲು ಹೋದಾಗ ಅಲ್ಲಿ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುವವರೆ ಹೆಚ್ಚಾಗಿರುತ್ತಿದ್ದರು.
ಅವರ ಉದ್ದೇಶ ನನ್ನನ್ನು ಹಾಸಿಗೆಗೆ ಆಹ್ವಾನಿಸುವುದಾಗಿತ್ತು. ಹಾಸಿಗೆ ಹಂಚಿಕೊಂಡವರ ಬಗ್ಗೆ ಮಾತನಾಡುತ್ತಾ ತಮ್ಮನ್ನು ಅವರು ಅದೇ ದೃಷ್ಟಿಯಲ್ಲಿ ನೋಡುತ್ತಿದ್ದರು ಎಂದಿದ್ದಾರೆ. ಆದರೆ ತಾವು ಧೃತಿಗೆಡಲಿಲ್ಲ. ಈ ರೀತಿಯ ಎಷ್ಟೇ ತೊಡಕುಗಳು ಎದುರಾದರೂ ತಾವು ಸಂಗೀತವನ್ನು ದೇವರಂತೆ ಆರಾಧಿಸಿದೆ.
ಈಗ ಹೇಮಾ ಅವರಿಗೆ ಹೆಚ್ಚಾಗಿ ಆಹ್ವಾನಗಳು ಬರುತ್ತಿಲ್ಲ. ಯಾಕೆ ಎಂದು ಕೇಳಲಾಗಿ, ತಮ್ಮ ಅಗತ್ಯ ಇದ್ದರೆ ಅವರೇ ಕರೆಯುತ್ತಾರೆ. ನಾನೇ ಏಕೆ ಹೋಗಿ ಅಂಗಲಾಚಿ ಬೇಡಿಕೊಳ್ಳಲಿ. ತಾವು ಹಲವಾರು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿದ್ದೇನೆ. ಈಗಲೂ ತಮ್ಮ ಹಾಡುಗಳಿಗೆ ಡಿಮ್ಯಾಂಡ್ ಇದೆ. ಆದರೆ ನಾನಾಗಿಯೇ ಅವಕಾಶ ಕೇಳುವುದಿಲ್ಲ ಎಂದಿದ್ದಾರೆ ಹೇಮಾ.
ಬೀವಿ ನಂಬರ್ ಒನ್, ಗರಂ ಮಸಾಲಾ, ಜೋಶ್, ಜಮೀನ್, ಬಾಗ್ ಬನ್, ಕೈಯಾಮತ್, ಅಸಂಭವ್, ಮನ್, ಯಾದೇ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಹೇಮಾ ಸರದೇಸಾಯಿ ಹಾಡಿದ್ದಾರೆ. ಗಾಯಕಿಯೊಬ್ಬರು ಇಷ್ಟೆಲ್ಲಾ ಲೈಂಗಿಕ ಕಿರುಕುಳ ಅನುಭವಿಸಬೇಕಾಗುತ್ತದೆ ಎಂಬ ಸತ್ಯವನ್ನು ಅವರು ಹೊರಗೆಡವಿದ್ದಾರೆ.


Click it and Unblock the Notifications











