'ಪೊನ್ನಿಯಿನ್ ಸೆಲ್ವನ್ 2' ಬಿಡುಗಡೆ ದಿನಾಂಕ ಬಹಿರಂಗ!

ಮಣಿರತ್ನಂ ನಿರ್ದೇಶನದ ಬಹುತಾರಾಗಣ ಬಿಗ್‌ ಬಜೆಟ್ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಮೊದಲ ಭಾಗ 1 ನಿನ್ನೆ (ಸೆಪ್ಟೆಂಬರ್ 30) ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಸಿನಿಮಾದಲ್ಲಿ ವಿಕ್ರಂ, ಐಶ್ವರ್ಯಾ ರೈ, ಕಾರ್ತಿ, ಜಯಂ ರವಿ, ತ್ರಿಶಾ, ಶೋಭಿತಾ ಧುಲಿಪಾಲ ಇನ್ನೂ ಹಲವು ನಟರು ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಆಗಿ ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಯಶಸ್ಸು ಗಳಿಸಿದೆ. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಸಹ ಬರುತ್ತಿವೆ. ಮೊದಲ ಭಾಗವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿರುವ ಜನರು ಸಹ ಸಿನಿಮಾದ ಎರಡನೇ ಭಾಗ ಯಾವಾಗ ಬಿಡುಗಡೆ ಆಗಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.

ಮೊದಲ ದಿನ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಖುಷಿಯಾಗಿರುವ ಚಿತ್ರತಂಡಕ್ಕೆ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಗೆಲ್ಲುವುದು ಖಚಿತವಾಗಿದೆ. ಅದರ ಜೊತೆಗೆ ಸಿನಿಮಾದ ಎರಡನೇ ಭಾಗ ಬಿಡುಗಡೆ ಯಾವಾಗ ಆಗಲಿದೆ ಎಂಬ ವಿಷಯ ಬಹಿರಂಗಗೊಂಡಿದೆ.

ಚಿತ್ರತಂಡ ಈಗಾಗಲೇ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿರುವಂತೆ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಎರಡೂ ಭಾಗದ ಚಿತ್ರೀಕರಣವನ್ನು ಚಿತ್ರತಂಡ ಈಗಾಗಲೇ ಮಾಡಿ ಮುಗಿಸಿದೆ. ಎರಡೂ ಭಾಗದ ಚಿತ್ರೀಕರಣ ಮುಗಿಸಲು ಬರೋಬ್ಬರಿ 155 ದಿನ ಹಿಡಿದಿವೆ. ಎರಡನೇ ಭಾಗದ ಡಬ್ಬಿಂಗ್ ಸಹ ಆಗಿದೆ. ಕೆಲವೇ ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ಮುಗಿದರೆ ಸಿನಿಮಾ ಮುಗಿದಂತೆಯೇ.

Ponniyin Selvan 2 Movie Release Date Out

ಹಾಗಾಗಿ ಚಿತ್ರತಂಡ ಆದಷ್ಟು ಬೇಗನೇ ಎರಡನೇ ಭಾಗವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕೆಲವು ಮಾಹಿತಿಗಳ ಪ್ರಕಾರ ಸಿನಿಮಾವು ಮುಂದಿನ ವರ್ಷ ಏಪ್ರಿಲ್ ವೇಳೆಗೆ ಬಿಡುಗಡೆ ಆಗಲಿದೆಯಂತೆ. ಈ ಭಾಗಕ್ಕೆ ಸಿಕ್ಕಿರುವ ಪ್ರತಿಕ್ರಿಯೆಗಳ ಆಧಾರದಲ್ಲಿ ಎರಡನೇ ಭಾಗಕ್ಕೆ ಕೆಲವು ದೃಶ್ಯಗಳನ್ನು ಸೇರಿಸುವ ಅಥವಾ ತೆಗೆಯುವ ಕಾರ್ಯವನ್ನು ಸಹ ಮಾಡುವ ಯೋಜನೆಯಲ್ಲಿದ್ದಾರೆ ನಿರ್ದೇಶಕ ಮಣಿರತ್ನಂ.

'ಪೊನ್ನಿಯಿನ್ ಸೆಲ್ವನ್' ಸಿನಿಮಾವು ತಮಿಳಿನ ಅತಿ ಜನಪ್ರಿಯ ಕಾದಂಬರಿಯ ಸಿನಿಮಾ ರೂಪ. ಸಿನಿಮಾವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ವಿಕ್ರಂ, ಐಶ್ವರ್ಯಾ ರೈ, ಕಾರ್ತಿ, ತ್ರಿಶಾ, ಜಯಂ ರವಿ, ಐಶ್ವರ್ಯಾ ಲಕ್ಷ್ಮಿ, ಶೋಭಿತಾ ಧುಲಿಪಾಲ, ಕಿಶೋರ್, ನಾಸರ್, ಪ್ರಕಾಶ್ ರೈ ಇನ್ನೂ ಹಲವು ನಟರು ನಟಿಸಿದ್ದಾರೆ.

More from Filmibeat

English summary
Mani Rathnam directed Ponniyin Selvan movie's part 2 will release in April next year. Mani Rathnam completed second part's shooting already.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X