»   » 'ಬಿಗ್ ಬಾಸ್' ಮನೆಗೆ ರವಿ ಬೆಳಗೆರೆ ಪುತ್ರಿ ಭಾವನಾ?

'ಬಿಗ್ ಬಾಸ್' ಮನೆಗೆ ರವಿ ಬೆಳಗೆರೆ ಪುತ್ರಿ ಭಾವನಾ?

Posted By:
Subscribe to Filmibeat Kannada

ಎಲ್ಲರೂ ಕಾತರದಿಂದ ಕಾಯುತ್ತಿರುವ 'ಬಿಗ್ ಬಾಸ್-3' ರಿಯಾಲಿಟಿ ಶೋ ಇದೇ ಭಾನುವಾರದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಶೋ ಶುರುವಾಗುವುದಕ್ಕೆ ಇನ್ನು ಮೂರು ದಿನಗಳು ಬಾಕಿ ಇರುವಾಗಲೇ, ಸ್ಪರ್ಧಿಗಳು ಯಾರ್ಯಾರು ಅನ್ನುವ ಬಗ್ಗೆ ಎಲ್ಲಾ ಕಡೆ ಚರ್ಚೆ ಆಗುತ್ತಿದೆ.

ಮೊನ್ನೆಯಷ್ಟೇ ನಟಿ ಶೃತಿ 'ಬಿಗ್ ಬಾಸ್' ಬಾಗಿಲು ತಟ್ಟುವುದರ ಬಗ್ಗೆ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಇದೀಗ ನಟಿ ಪೂಜಾ ಗಾಂಧಿ ಮತ್ತು ಪತ್ರಕರ್ತೆ ಭಾವನಾ ಬೆಳಗೆರೆ ಸರದಿ.

pooja-gandhi

ಒಂದು ಕೋಟಿ ರೂಪಾಯಿ ಸಾಲದ ವಿವಾದದಲ್ಲಿ ಸಿಲುಕಿದ್ದ ನಟಿ ಪೂಜಾ ಗಾಂಧಿ ಮತ್ತು ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ರವಿ ಬೆಳಗೆರೆ ಪುತ್ರಿ, ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾ ಬೆಳಗೆರೆ 'ಬಿಗ್ ಬಾಸ್-3' ಮನೆ ಸೇರ್ತಾರೆ ಅಂತ ಈಗ ಗುಲ್ಲೆದ್ದಿದೆ.

bhavana-belagere

ಅಲ್ಲಲ್ಲಿ, ಮಾಸ್ಟರ್ ಆನಂದ್ ಹೆಸರು ಕೂಡ ಕೇಳಿಬರುತ್ತಿದೆ. ಉಳಿದಂತೆ 'ನಾಗಮಂಡಲ' ಖ್ಯಾತಿಯ ವಿಜಯಲಕ್ಷ್ಮಿ, ಹುಚ್ಚ ವೆಂಕಟ್, ಮೈತ್ರಿಯಾ ಗೌಡ, ಚಂದನ್ ಈ ಬಾರಿ ಭಾಗವಹಿಸುವುದು ಪಕ್ಕಾ ಅನ್ನೋದು ಮೂಲಗಳಿಂದ ಬಂದಿರುವ ಮಾಹಿತಿ. [ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!]

ಯಾರು ಏನೇ ಹೇಳಿದ್ರೂ, ಕಡೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಅಂದುಕೊಂಡವರು ಬಾರದೆ ಇರಬಹುದು. ಯಾವುದಕ್ಕೂ, ಅಕ್ಟೋಬರ್ 25 ರಂದು ಸ್ಪರ್ಧಿಗಳನ್ನ ಪರದೆ ಮೇಲೆ ನೋಡುವವರೆಗೂ ಕಾಯುವುದು ಒಳಿತು.

English summary
According to the grapevine, Journalist, Wife of Kannada Actor Srinagar Kitty, Bhavana Belagere and Kannada Actress Pooja Gandhi will participate in Bigg Boss Kannada season 3. But it is not confirmed yet.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X