For Quick Alerts
  ALLOW NOTIFICATIONS  
  For Daily Alerts

  ಶಯನಗೃಹದಲ್ಲಿ ಪೂಜಾಗಾಂಧಿ ಹಾಟ್ ದೃಶ್ಯಗಳು

  By ಉದಯರವಿ
  |

  ನಟಿ ಪೂಜಾಗಾಂಧಿ ಈಗ ಸುದ್ದಿಯಲ್ಲೂ ಇಲ್ಲ ಫಾರ್ಮ್ ನಲ್ಲೂ ಇಲ್ಲ. ಆದರೆ ಆಗಾಗ ಮಾತ್ರ ಕಲಾರಸಿಕರ ಹೃದಯಕ್ಕೆ ಕಿಚ್ಚು ಹಚ್ಚುವ ಕೆಲಸ ಮಾಡುತ್ತಲೇ ಇದ್ದಾರೆ. ಈ ಹಿಂದೆ 'ದಂಡುಪಾಳ್ಯ' ಚಿತ್ರದಲ್ಲಿ ಬೆತ್ತಲೆ ಬೆನ್ನು ತೋರಿಸಿ ಭಾರಿ ಗುಲ್ಲೆಬ್ಬಿಸಿದ್ದರು. ಈಗ 'ಅಭಿನೇತ್ರಿ' ಚಿತ್ರದ ಹಾಟ್ ದೃಶ್ಯಗಳು ಬಿಡುಗಡೆಯಾಗಿವೆ.

  ಇಲ್ಲೂ ಪಡ್ಡೆಗಳಿಗಷ್ಟೇ ಅಲ್ಲ ಮಾಧ್ಯಮಗಳನ್ನೂ ಬೆಚ್ಚಿಬೀಳಿಸಿದ್ದಾರೆ. ಅಭಿನೇತ್ರಿ ಚಿತ್ರದ ಹಾಟ್ ದೃಶ್ಯಗಳು ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ತನ್ನ ಸಹನಟ ಅತುಲ್ ಕುಲಕರ್ಣಿ ಜೊತೆಗಿನ ಶಯನಗೃಹದ ಹಾಟ್ ಸನ್ನಿವೇಶಗಳನ್ನು ಚಿತ್ರತಂಡ ರಿಲೀಸ್ ಮಾಡಿದೆ. [ಪೂಜಾಗಾಂಧಿ ಕತ್ತಲ್ಲಿ ಕಲ್ಪನಾರ ಕಪ್ಪು ಮಚ್ಚೆ]

  ಈ ಭಾಗದ ಚಿತ್ರೀಕರಣ ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದೆ. ಇದು ಮಿನುಗುತಾರೆ ಕಲ್ಪನಾ ಅವರ ಜೀವನ ಕಥೆಯಾಧಾರಿತ ಚಿತ್ರ ಎಂಬ ಅನುಮಾಗಳು ಇವೆ. ಆದರೆ ಈ ಬಗ್ಗೆ ಪೂಜಾಗಾಂಧಿ ಮಾತ್ರ ಇದು 70-80ರ ದಶಕದ ನಾಯಕಿಯರನ್ನ ಪ್ರತಿನಿಧಿಸೋ ಪಾತ್ರ ಎಂದಿದ್ದಾರೆ.

  ಇನ್ನೊಂದು ಮೂಲದ ಪ್ರಕಾರ ಈ ಬೆಡ್ ರೂಂ ದೃಶ್ಯಗಳು ಕಲ್ಪನಾ ಹಾಗೂ ಖ್ಯಾತ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ನಡುವಿನದು ಎನ್ನಲಾಗಿದೆ. ಆದರೆ ಪೂಜಾಗಾಂಧಿ ಮಾತ್ರ ಇದನ್ನು ಅಲ್ಲಗಳೆದಿದ್ದಾರೆ. ಇದು ಯಾವುದೇ ಒಬ್ಬ ವ್ಯಕ್ತಿ ಅಥವಾ ತಾರೆ ಕುರಿತಾದ ಚಿತ್ರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  Abhinetri movie still
  ಅತುಲ್ ಕುಲಕರ್ಣಿ ಇದುವರೆಗೂ ಪೋಷಿಸದೆ ಇರುವ ಪಾತ್ರವನ್ನು ತಮ್ಮ ಅಭಿನೇತ್ರಿ ಚಿತ್ರದಲ್ಲಿ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ವಿನೋದಭರಿತವಾಗಿ ಹಾಗೂ ಆಕರ್ಷಕವಾಗಿದೆ. ಅವರ ಸಮರ್ಪಣಾ ಭಾವ, ಪಾತ್ರದಲ್ಲಿ ತೊಡಗಿಕೊಳ್ಳುವ ರೀತಿಗೆ ತಾವು ಫಿದಾ ಆಗಿದ್ದೇವೆ ಎಂದು ಹೇಳಿ ಅತುಲ್ ಪಾತ್ರದ ಬಗ್ಗೆಯೂ ಪೂಜಾಗಾಂಧಿ ಗುಟ್ಟುಬಿಟ್ಟುಕೊಟ್ಟಿಲ್ಲ.
  English summary
  Actress Pooja Gandhi and co-star Atul Kulkarni love-making scenes of Kannada film Abhinetri released. The buzz is that the movie is inspired by the real life love story of actress Kalpana and director Puttanakanagal.
  Saturday, January 4, 2014, 16:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X