»   » ಪೂಜಾ ಗಾಂಧಿಗೆ ಸಿನಿಮಾಕ್ಕಿಂತಲೂ ಜೆಡಿಎಸ್ ಹೆಚ್ಚೇ?

ಪೂಜಾ ಗಾಂಧಿಗೆ ಸಿನಿಮಾಕ್ಕಿಂತಲೂ ಜೆಡಿಎಸ್ ಹೆಚ್ಚೇ?

Posted By:
Subscribe to Filmibeat Kannada
ನಟಿ ಪೂಜಾ ಗಾಂದಿಯ 'ದಂಡುಪಾಳ್ಯ' ಚಿತ್ರ ಕರ್ನಾಟಕದಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಮುಂಗಾರು ಮಳೆ ನಂತರ ಪೂಜಾ ಗಾಂಧಿ ಅಭಿನಯದ ಅಷ್ಟೂ ಚಿತ್ರಗಳನ್ನು ಒಂದು ತಕ್ಕಡಿಯಲ್ಲಿ ಹಾಕಿ ಇನ್ನೊಂದರಲ್ಲಿ ದಂಡುಪಾಳ್ಯ ಚಿತ್ರವನ್ನಿಟ್ಟರೆ ಅಭಿನಯದ ವಿಷಯದಲ್ಲಿ ಖಂಡಿತವಾಗಿಯೂ ಗೆಲ್ಲುವುದು ದಂಡುಪಾಳ್ಯವೇ ಎಂಬುದು ಚಿತ್ರ ನೋಡಿದವರೆಲ್ಲರ ಸ್ಪಷ್ಟ ಅಭಿಪ್ರಾಯ. ಹೌದು, ಮತ್ತೆ ಪೂಜಾ ಗಾಂದಿ ಕಾಲ ಸ್ಯಾಂಡಲ್ ವುಡ್ ನಲ್ಲಿ ಪ್ರಾರಂಭವಾಗಲಿದೆ ಎಂಬುದು ಲೇಟೆಸ್ಟ್ ನ್ಯೂಸ್!

ಅದಕ್ಕಿಂತಲೂ ಲೇಟೆಸ್ಟ್ ಹಾಗೂ ಅಚ್ಚರಿ ಸುದ್ದಿ ಇಲ್ಲಿದೆ, ಓದಿ. ಸಿನಿಮಾ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರ ಎರಡೂ ಬೇರೆಯವೇ. ಆದರೆ ಸಿನಿಮಾದಲ್ಲಿ ಅವಕಾಶ ಕಡಿಮೆಯಾದಾಗ ಅಥವಾ ವಯಸ್ಸಾದ ಮೇಲೆ ನಟ-ನಟಿಯರು ರಾಜಕೀಯ ಕ್ಷೇತ್ರಕ್ಕೆ ಧುಮುಕುವುದು ಸಾಮಾನ್ಯ. ಆದರೆ ಎಲ್ಲರೂ ಹಾಗೇ ಎಂದೇನಿಲ್ಲ ಎಂಬುದು ಎಲ್ಲರ ಗಮನದಲ್ಲಿರಲಿ.

ಪೂಜಾ ಗಾಂಧಿಗೆ ಅವಕಾಶ ಸಂಪೂರ್ಣವಾಗಿಯೇನೂ ಕಡಿಮೆಯಾಗಿರಲಿಲ್ಲ. ಆದರೂ, ಆಗಲೇ ಜೆಡಿಎಸ್ ಪಕ್ಷ ಸೇರಿಕೊಂಡಿದ್ದಾಗಿದೆ. ಆಶ್ಚರ್ಯದ ಸಂಗತಿ ಎಂದರೆ, ಈಗ ದಂಡುಪಾಳ್ಯ ಚಿತ್ರ ಸೂಪರ್ ಹಿಟ್ ಆಗುವ ಹಾದಿಯಲ್ಲಿದೆ, ಪೂಜಾ ಗಾಂಧಿಗೆ ಮತ್ತೆ ಅವಕಾಶಗಳ ಸುರಿಮಳೆಯಾಗುತ್ತಿದೆ. ಆದರೆ, ಪೂಜಾ ಗಾಂಧಿ ಮಾತ್ರ ಸಾಕಷ್ಟು ಚಿತ್ರಗಳನ್ನು ತಿರಸ್ಕರಿಸಿದ್ದಾರಂತೆ.

ಪೂಜಾ ಗಾಂಧಿ ಹೇಳುವ ಪ್ರಕಾರ, ಅವರು ಜೆಡಿಎಸ್‌ ಪಕ್ಷಕ್ಕಾಗಿ ಬಹಳಷ್ಟು ಸಿನಿಮಾಗಳ ಆಫರ್ ಗಳನ್ನು ಕೈ ಬಿಟ್ಟಿದ್ದಾರೆ. ಕಾರಣ, ಅವುಗಳಲ್ಲಿ ಬಹಳಷ್ಟು ಚಿತ್ರಕಥೆಗಳು ಜೆಡಿಎಸ್ ಸಿದ್ಧಾಂತಗಳಿಗೆ ಸರಿ ಹೊಂದುವುದಿಲ್ಲವಂತೆ. ಪರವಾಗಿಲ್ಲ ಪೂಜಾ ಗಾಂಧಿ ಎನ್ನಬಹುದು. ಕಾರಣ ಸದ್ಯಕ್ಕೆ ಲಾಭ ತಂದುಕೊಡುವ ಸಿನಿಮಾ ಬಿಟ್ಟು ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಬಹುದು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷದಿಂದ ಪೂಜಾ ಗಾಂದಿ ಈಗ ಸ್ವಲ್ಪ ದೂರವಾಗಿದ್ದಾರೆ ಎಂಬ ವದಂತಿ ಕೇಳಿಬರುತ್ತಿತ್ತು. ಇದಕ್ಕೆ ಉತ್ತರವೆಂಬಂತೆ ಪೂಜಾ ಗಾಂಧಿಯ ಈ ಮಾತು ಕೇಳಿಬಂದಿದೆ. 'ನಾನು ಈಗಲೂ ಜೆಡಿಎಸ್‌ ಪಕ್ಷದಲ್ಲೇ ಸಕ್ರಿಯವಾಗಿದ್ದೇನೆ' ಎಂದಿದ್ದಾರೆ ಪೂಜಾ ಗಾಂಧಿ. ಹೀಗಾಗಿ, ಪೂಜಾ ಗಾಂಧಿಗೆ ಸಿನಿಮಾಕ್ಕಿಂತಲೂ ಜೆಡಿಎಸ್ ಹೆಚ್ಚು ಎನ್ನಬಹುದು.

ಪೂಜಾ ಪ್ರಕಾರ, ದಂಡುಪಾಳ್ಯ ಚಿತ್ರದಲ್ಲಿ ಹಿಂಸಾಚಾರವನ್ನು ವೈಭವೀಕರಿಸಿಲ್ಲ. ಅದರಲ್ಲಿ ಸಾರ್ವಜನಿಕರನ್ನು ಜಾಗೃತಗೊಳಿಸುವ ಮೆಸೇಜ್ ಇದೆ. ನಡೆದ ಸತ್ಯಕಥೆಯನ್ನು ಮತ್ತೆ ನೆನಪಿಸಿ ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಅಷ್ಟೇ. ಈ ಚಿತ್ರದಲ್ಲಿ ನಟಿಸಿದ ಮೇಲೆ ನಾನೀಗ ಪ್ರಬುದ್ಧವಾಗಿ ಯೋಚಿಸಲು ಪ್ರಾರಂಭಿಸಿದ್ದೇನೆ. ಅದರಲ್ಲಿ ನಟಿಸಿದ್ದು ನಿಜವಾಗಿಯೂ ಸವಾಲು ಎನಿಸತ್ತು ಎಂದಿದ್ದಾರೆ.

ಇಷ್ಟೇ ಅಲ್ಲ, ನಟಿ ಪೂಜಾ ಗಾಂಧಿಯೀಗ ನೆರೆಯ ಕೇರಳ ಚಿತ್ರರಂಗದಲ್ಲೂ ಸುದ್ದಿಯಾಗುತ್ತಿದ್ದಾರೆ. ಕಾರಣ, 'ಮಲಯಾಳಂ ಮ್ಯಾಡ್ ಡ್ಯಾಡ್'ನಲ್ಲೊಂದು ವಿಶಿಷ್ಟ ಪಾತ್ರವನ್ನು ಪೂಜಾ ಮಾಡುತ್ತಿದ್ದಾರೆ. ಟಾಮ್ ಗರ್ಲ್ ತರಹದ ಆ ಪಾತ್ರದಲ್ಲಿ ಅವರು ಬುಲ್ಲೆಟ್ ರೈಡ್ ಮಾಡುತ್ತಾ ಹಗಲು ರಾತ್ರಿಯೆನ್ನದೆ ಹುಡುಗರಂತೆ ಊರೂರು ಸುತ್ತುತ್ತಿರುತ್ತಾರೆ ಎನ್ನುವುದು ಪೂಜಾ ಹೇಳಿರುವ ಮಾತು. ಬೇರೇನೆ ಇರಲಿ, ಸದ್ಯಕ್ಕೆ ಪೂಜಾ ಗಾಂದಿ ದಂಡುಪಾಳ್ಯ ಯಶಸ್ಸಿನಿಂದ ಖುಷಿಯಾಗಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
After the Grand Success of Dandupalya movie, Actress Pooja Gandhi is getting lot of opportunities in the movie Industries. But, as she told she rejected some movies because the movies are against of JDS rules. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada