ನಾಗಾರ್ಜುನ ಮಗನ ಜೊತೆ ಸಿನಿಮಾ ಮಾಡಲ್ಲ ಎಂದ ಪೂಜಾ ಹೆಗ್ಡೆ
ಎಲ್ಲ ಅಂದುಕೊಂಡಂತೆ ಆಗಿದ್ದರೆ ಅಕ್ಕಿನೇನಿ ಅಖಿಲ್ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಬೇಕಿತ್ತು. ಅಧಿಕೃತವಾಗಿ ನಾಯಕಿ ಎಂದು ಘೋಷಣೆ ಕೂಡ ಮಾಡಲಾಗಿತ್ತು.
ಆದರೆ ಅಖಿಲ್ ಜೊತೆ ಸಿನಿಮಾ ಮಾಡಲ್ಲ ಎಂದು ಪೂಜಾ ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಈಗ ಟಾಲಿವುಡ್ ನಲ್ಲಿ ಸದ್ದು ಮಾಡ್ತಿದೆ.
ಹೌದು, ಬೊಮ್ಮರಿಲ್ಲು ಖ್ಯಾತಿಯ ಭಾಸ್ಕರ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರಕ್ಕೆ ಶೂಟಿಂಗ್ ಆರಂಭವಾಗುವ ಸಮಯದಲ್ಲಿ 'ನಾ ಮಾಡಲ್ಲ' ಎಂದು ಹಿಂದೆ ಸರಿದಿದ್ದಾರಂತೆ. ಇದಕ್ಕೆ ಕಾರಣ ಸಂಭಾವನೆ ಹೆಚ್ಚು ಕೇಳಿದ್ದು, ಅದನ್ನ ಕೊಡಲು ನಿರಾಕರಿಸಿದ್ದಕ್ಕೆ ಚಿತ್ರವನ್ನ ಕೈಬಿಟ್ಟಿದ್ದಾರಂತೆ.

ಹಾಗಾಗಿ, ಪೂಜಾ ಹೆಗ್ಡೆ ಅವರನ್ನ ಚಿತ್ರದಿಂದ ಕೈಬಿಟ್ಟಿರುವ ಚಿತ್ರತಂಡ ಈಗ ಹೊಸ ನಾಯಕಿಗಾಗಿ ಹುಡುಕಾಟ ನಡೆಸುತ್ತಿದೆ. ಈ ಹಿಂದೆ ಅಖಿಲ್ ನಟಿಸುತ್ತಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗಿತ್ತು. ಈ ಸುದ್ದಿ ನಿಜವಾಗಲಿಲ್ಲ.
ಮಹೇಶ್ ಬಾಬು ನಟಿಸಿದ್ದ 'ಮಹರ್ಷಿ' ಚಿತ್ರದಲ್ಲಿ ನಾಯಕಿಯಾಗಿದ್ದ ಪೂಜಾ ಹೆಗ್ಡೆ, ವರುಣ್ ತೇಜ ಜೊತೆ 'ವಾಲ್ಮಿಕಿ' ಸಿನಿಮಾ ಮಾಡುತ್ತಿದ್ದಾರೆ. ಆ ಕಡೆ ಅಕ್ಷಯ್ ಕುಮಾರ್ ನಟನೆಯ 'ಹೌಸ್ ಫುಲ್-4' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಮತ್ತೊಂದೆಡೆ ಅಲ್ಲು ಅರ್ಜುನ್ ನಟನೆಯ 19 ನೇ ಚಿತ್ರಕ್ಕೂ ಪೂಜಾ ನಾಯಕಿ.
ಇಷ್ಟೆಲ್ಲಾ ಬೇಡಿಕೆ ಹೊಂದಿರುವ ಪೂಜಾ, ದಿಢೀರ್ ಅಂತ ಅಖಿಲ್ ಸಿನಿಮಾದಿಂದ ಹೊರಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications











