ಇಳಯದಳಪತಿ ವಿಜಯ್ ಮುಂದಿನ ಸಿನಿಮಾಗೆ ನಾಯಕಿ ರಶ್ಮಿಕಾ ಅಲ್ಲ, ಪೂಜಾ ಹೆಗಡೆ?
ತಮಿಳಿನ ಖ್ಯಾತ ನಟ ಇಳಯದಳಪತಿ ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರೀಕರಣ ಮುಗಿಯುತ್ತಿದ್ದಂತೆ ವಿಜಯ್ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಹೌದು, ವಿಜಯ್ ಮುಂದಿನ ಸಿನಿಮಾ "ದಳಪತಿ 65' (ತಾತ್ಕಾಲಿಕ ಹೆಸರು) ಬಗ್ಗೆ ಈಗಾಗಲೆ ಸಾಕಷ್ಟು ಸುದ್ದಿ ಹರಿದಾಡುತ್ತಿದ್ದು, ಈಗ ಮತ್ತೊಂದು ವಿಚಾರ ವೈರಲ್ ಆಗಿದೆ.
Recommended Video
ಹೌದು, ನಟ ವಿಜಯ್ ಗೆೇ ನಾಯಕಿಯಾಗಿ ಪೂಜಾ ಹೆಗಡೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲು ವಿಜಯ್ ಸಿನಿಮಾಗೆ ಕನ್ನಡದ ಮತ್ತೋರ್ವ ನಟಿ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರುತ್ತಿತ್ತು. ಅಲ್ಲದೆ ರಶ್ಮಿಕಾ ಅನೇಕ ಬಾರಿ ವಿಜಯ್ ಜೊತೆ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ವಿಜಯ್ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಆಗುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೀಗ ವಿಜಯ್ ಜೊತೆ ನಟಿ ಪೂಜಾ ಹೆಗಡೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

ವಿಜಯ್ ಗೆ ಪೂಜೆ ಹೆಗಡೆ ನಾಯಕಿ?
ವಿಜಯ್ ಮುಂದಿನ ಸಿನಿಮಾ "ದಳಪತಿ 65' ಜೊತೆ ನಟಿ ಪೂಜಾ ಹೆಗಡೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಈಗ ವಿಜಯ್ ಫ್ಯಾನ್ ಪೇಜ್ ಗಳಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ವಿಜಯ್ ಮತ್ತು ಪೂಜಾ ಹೆಗಡೆ ಫೋಟೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ತಮಿಳಿನಲ್ಲಿಯೂ ರಶ್ಮಿಕಾ, ಪೂಜಾ ಪೈಪೂಟಿ
ತೆಲುಗು ಚಿತ್ರರಂಗದಲ್ಲಿ ಪೂಜಾ ಮತ್ತು ರಶ್ಮಿಕಾ ನಡುವೆ ಸಿಕ್ಕಾಪಟ್ಟೆ ಪೈಪೋಟಿ ನಡೆಯುತ್ತಿದೆ. ಸ್ಟಾರ್ ನಟರ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗಡೆ ಬಿಟ್ಟರೆ ರಶ್ಮಿಕಾ ಈ ಇಬ್ಬರಲ್ಲಿ ಒಬ್ಬರು ನಾಯಕಿಯಾಗಿ ಆಯ್ಕೆಯಾಗುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ ಈಗ ಇಬ್ಬರ ಪೈಪೋಟಿ ತಮಿಳಿನಲ್ಲಿಯೂ ಮುಂದುವರೆದಿದೆ. ತಮಿಳು ಚಿತ್ರರಂಗದಲ್ಲಿಯೂ ಇಬ್ಬರ ಹವಾ ಜೋರಾಗಿದೆ.

ಮೊದಲ ಬಾರಿಗೆ ತಮಿಳಿನಲ್ಲಿ ಪೂಜಾ
ಸದ್ಯ ನಟಿ ಪೂಜಾ ಹೆಡಗೆ ವಿಜಯ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೆ ಆದರೆ ಪೂಜಾ ಹೆಡಗೆ ಮೊದಲ ಬಾರಿಗೆ ತಮಿಳು ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೆ ತೆಲುಗಿನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ ಮೇಲೆ ತಮಿಳು ಅಭಿಮಾನಿಗಳ ನಿರೀಕ್ಷೆ ದುಪ್ಪಾಟ್ಟಾಗಿದೆ.

ಪ್ರಭಾಸ್ ಜೊತೆ ಪೂಜಾ ಅಭಿನಯ
ಸದ್ಯ ಪೂಜಾ ಹೆಗಡೆ ಪ್ರಭಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ತೆಲುಗಿನ ಸ್ಟಾರ್ ನಟರಾದ ಮಹೇಶ್ ಬಾಬು, ಅಲ್ಲು ಅರ್ಜುನ್, ನಾಗಚೈತನ್ಯ ಜೊತೆ ಅಭಿನಯಿಸಿದ್ದಾರೆ. ಸದ್ಯ ಪ್ರಭಾಸ್ ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಎಟ್ ಟಿ ಆರ್ ಸಿನಿಮಾಗೂ ಪೂಜಾ ಹೆಸರು ಕೇಳಿ ಬರುತ್ತಿದೆ. ಈಗ ವಿಜಯ್ ಜೊತೆ ಕಾಣಿಸಿಕೊಳ್ಳುವ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪೂಜಾ ಸಖತ್ ಬ್ಯುಸಿಯಾಗುತ್ತಿದ್ದಾರೆ.


Click it and Unblock the Notifications











