ಪೂಜಾ ಹೆಗ್ಡೆಗೆ ಸಂಭಾವನೆಯೇ ಮುಳುವು: ಖಾಲಿ ಕೈಯಲ್ಲಿ ಸ್ಟಾರ್ ನಟಿ!

ಸದ್ಯ ಸೌತ್ ಸಿನಿಮಾರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನಟಿಯರು ಎಂದರೆ, ಆ ಸಾಲಿನಲ್ಲಿ ಮೊದಲು ಬರುವುದು ನಟಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಸಾಯಿ ಪಲ್ಲವಿ, ಕೀರ್ತಿ ‌ಶೆಟ್ಟಿ. ಈ ನಟಿಯರ ಪೈಕಿ ಹೆಚ್ಚಿನ ಬೇಡಿಕೆ ಮತ್ತು ಪೈಟೋಟಿ ಇರುವುದು ರಶ್ಮಿಕಾ ಮತ್ತು ಪೂಜಾ ಹೆಗ್ಡೆ ನಡುವೆ.

ಇವರ ಪೈಕಿ ಪೂಜಾ ಹೆಗ್ಡೆ ನಂಬರ್ 1 ಸ್ಥಾನದಲ್ಲಿ ಇದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಪೂಜಾ ಹೆಗ್ಡೆ. ಆದರೆ ‌ಈಗ ಪೂಜಾ ಹೆಗ್ಡೆಗೆ ಇರುವ ಬೇಡಿಕೆ ಕಡಿಮೆ ಆಗುತ್ತಿದೆಯಂತೆ. ಪೂಜಾ ಹೆಗ್ಡೆಗೆ ಮೊದಲಿದ್ದಷ್ಟು ಬೇಡಿಕೆ ಈಗ ಇಲ್ಲವಂತೆ.

ಸದ್ಯ ಪ್ರಕಟ ಆಗಿರುವ ಸಿನಿಮಾಗಳನ್ನು ಹೊರತು ಪಡಿಸಿದರೆ, ಪೂಜಾ ಹೆಗ್ಡೆ ಕೈಯಲ್ಲಿ ಸಿನಿಮಾಗಳೇ ಇಲ್ಲ. ಹಾಗಾಗಿ ನಂಬರ್ 1 ಸ್ಥಾನದಲ್ಲಿ ಇರುವ ಈ ನಟಿಗೆ ಬೇಡಿಕೆ ಕಡಿಮೆ ಆಗಿದೆ ಎನ್ನಲಾಗುತ್ತಿದೆ. ಪೂಜಾಳನ್ನು ಕಂಡರೆ ನಿರ್ಮಾಪಕರು ಮೂಗು ಮುರಿಯುತ್ತಿದ್ದಾರಂತೆ.

ಒಂದು ಚಿತ್ರಕ್ಕೆ ಪೂಜಾ ಹೆಗ್ಡೆ ಸಂಭಾವನೆ 3 ಕೋಟಿ!

ಒಂದು ಚಿತ್ರಕ್ಕೆ ಪೂಜಾ ಹೆಗ್ಡೆ ಸಂಭಾವನೆ 3 ಕೋಟಿ!

ನಟಿ ಪೂಜಾ ಹೆಗ್ಡೆ ಹೆಚ್ಚಿನ ಸಂಭಾವನೆ ಪಡೆಯುವ ಮೂಲಕ ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇದ್ದಾರೆ‌. ಪೂಜಾ ಒಂದು‌ ಚಿತ್ರಕ್ಕೆ ಮೂರು ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. 'ಅಲಾ ವೈಕುಂಠ ಪುರಮುಲೊ' ಚಿತ್ರದಿಂದ ಪೂಜಾ ಹೆಗ್ಡೆ ಸಂಭಾವನೆ ಹೆಚ್ಚಾಗಿದೆ. ಪ್ರಸ್ತುತ 3 ಕೋಟಿ ಇಲ್ಲದೇ ಸಿನಿಮಾ ಒಪ್ಪುವುದಿಲ್ಲವಂತೆ. ಇದೇ ಕಾರಣಕ್ಕೆ ಈಗ ಪೂಜಾಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ ಎನ್ನಲಾಗುತ್ತಿದೆ.

ನಿರ್ಮಾಪಕರಿಗೆ ತಲೆನೋವಾದ ಪೂಜಾ ಸಂಭಾವನೆ!

ನಿರ್ಮಾಪಕರಿಗೆ ತಲೆನೋವಾದ ಪೂಜಾ ಸಂಭಾವನೆ!

ಪೂಜಾ ಹೆಗ್ಡೆ ಸಂಭಾವನೆ ವಿಚಾರದಲ್ಲಿ ತುಂಬಾನೆ ಕಟ್ಟು ನಿಟ್ಟು. ಹಾಗಾಗಿ ಇದು ಹಲವು ಸಿನಿಮಾ ನಿರ್ಮಾಪಕರಿಗೆ ತಲೆನೋವು ತಂದಿದೆಯಂತೆ. ಪೂಜಾ ಹೆಗ್ಡೆಗೆ ಇಷ್ಟೊಂದು ದುಡ್ಡು ಕೊಡುವ ಬದಲಿಗೆ, ಹೊಸ ನಾಯಕಿಯರಿಗೆ ಅವಕಾಶ ಕೊಡುವುದೇ ಲೇಸು ಎಂದು, ಹಲವು ನಿರ್ಮಾಪಕರು ಪೂಜಾ ಹೆಗ್ಡೆ ಹೆಸರನ್ನು ಕೈ ಬಿಟ್ಟಿದ್ದಾರಂತೆ. ಸ್ಟಾರ್ ನಟರ ಸಿನಿಮಾಗಳಿಗೂ ಪೂಜಾಳ ಕಾಲ್ ಶೀಟ್ ಕೇಳುವ ಗೋಜಿಗೆ ಹೊಗುತ್ತಿಲ್ಲವಂತೆ ನಿರ್ಮಾಪಕರು.

2012 ರಿಂದ ಚಿತ್ರರಂಗದಲ್ಲಿ ಪೂಜಾ ಸಕ್ರಿಯ!

2012 ರಿಂದ ಚಿತ್ರರಂಗದಲ್ಲಿ ಪೂಜಾ ಸಕ್ರಿಯ!

2012ರಿಂದ ನಟಿ ಪೂಜಾ ಹೆಗ್ಡೆ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ತಮಿಳಿನ 'ಮುಗಮುಡಿ' ಚಿತ್ರದಿಂದ ಬಣ್ಣದ ಲೋಕಕ್ಕೆ ಪೂಜಾ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಮತ್ತು 'ಆಚಾರ್ಯ' ಸಿನಿಮಾಗಳು ರಿಲೀಸ್‌ಗೆ ರೆಡಿ ಇವೆ. ಈ ಚಿತ್ರಗಳನ್ನು ಬಿಟ್ಟರೆ, ತಮಿಳಿನ 'ಬೀಸ್ಟ್' ಮತ್ತು 'ಸರ್ಕಸ್' ಸಿನಿಮಾಗಳು ಪೂಜಾ ಹೆಗ್ಡೆ ಕೈಯಲ್ಲಿ ಇವೆ. ಈ ಚಿತ್ರಗಳನ್ನು ಬಿಟ್ಟು ಮತ್ಯಾವ ಹೊಸ ಅವಕಾಶಗಳು ಕೂಡ ಪೂಜಾಳನ್ನು ಹುಡುಕಿಕೊಂಡು ಬಂದಿಲ್ಲ ಅಂತೆ. ಬಾಲಿವುಡ್‌ನಲ್ಲೂ ಪೂಜಾಗೆ ಅಷ್ಟಾಗಿ ಬೇಡಿಕೆ ಇಲ್ಲ.

ರಶ್ಮಿಕಾ ಪಾಲಾದ, ಪೂಜಾ ಹೆಗ್ಡೆಯ ಹಲವು ಅವಕಾಶಗಳು!

ರಶ್ಮಿಕಾ ಪಾಲಾದ, ಪೂಜಾ ಹೆಗ್ಡೆಯ ಹಲವು ಅವಕಾಶಗಳು!

ಕೇವಲ ಸಿನಿಮಾಗಳು ಮಾತ್ರ ಅಲ್ಲ, ಹಲವು ಬ್ಯಾಂಡ್‌ಗಳು ಕೂಡ ಪೂಜಾ ಇಂದ ದೂರ ನಡೆದಿವೆ. ಯಾಕೆಂದರೆ ಪೂಜಾ ಬ್ರ್ಯಾಂಡ್ ಜಾಹೀರಾತುಗಳಿಗೂ ಅಧಿಕ ಸಂಭಾವನೆ ಕೇಳುತ್ತಿದ್ದರಂತೆ. ಹಾಗಾಗಿ ಪೂಜಾಳ ಹಲವು ಬ್ರ್ಯಾಂಡ್‌ಗಳು ಈಗ ನಟಿ ರಶ್ಮಿಕಾ ಮಂದಣ್ಣ ಪಾಲಾಗಿವೆ. ರಶ್ಮಿಕಾ ಅವರು ಏಕಾಏಕಿ ತಮ್ಮ ಸಂಭಾವನೆಯ ಹೆಚ್ಚಿಸಿಕೊಳ್ಳಲು ಮುಂದಾಗುವುದಿಲ್ಲವಂತೆ, ಎಲ್ಲವನ್ನೂ ಅಳೆದು ತೂಗಿ ಸಂಭಾವನೆ ಪಡೆಯಲು ಮುಂದಾಗುತ್ತಾರಂತೆ. ಹಾಗಾಗಿ ಪೂಜಾ ಸಿನಿಮಾ ಹವಾ ಕೊಂಚ ತಗ್ಗಿದರೆ ನಟಿ ರಶ್ಮಿಕಾನೇ ನಂಬರ್ ಒನ್ ಸ್ಥಾನದಲ್ಲಿ ಕೂರೋದು ಪಕ್ಕ.

More from Filmibeat

English summary
Indian Star Actress Pooja Hegde Now Has No Job Because Of Her High Remuneration,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X