ಬಾಯ್‌ಫ್ರೆಂಡ್ ಜೊತೆ ಕಂಡ ಬಾಲಿವುಡ್ ಬ್ಯೂಟಿ ಪೂಜಾ ಹೆಗ್ಡೆ? ವಿಡಿಯೋ ವೈರಲ್

ಮುಂಬೈ ಬ್ಯೂಟಿ ಪೂಜಾ ಹೆಗ್ಡೆ ನಿಧಾನವಾಗಿ ಮತ್ತೆ ಟಾಲಿವುಡ್‌ನಲ್ಲಿ ಮಿಂಚುವ ಪ್ರಯತ್ನ ಮಾಡುತ್ತಿದ್ದಾರೆ. ನಾಗಚೈತನ್ಯಾ ಜೊತೆ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಎರಡ್ಮೂರು ವರ್ಷಗಳ ಹಿಂದೆ ಸೌತ್‌ ಸಿನಿದುನಿಯಾದಲ್ಲಿ ಪೂಜಾ ಕ್ರೇಜ್ ಜೋರಾಗಿತ್ತು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ.

ಇನ್ನು ಪೂಜಾ ಹೆಗ್ಡೆ ಸಿನಿಮಾಗಳ ವಿಚಾರ ಪಕ್ಕಕ್ಕಿಟ್ಟರೆ ಬಾಯ್‌ಫ್ರೆಂಡ್‌ ಜೊತೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಹಿಂದೆ ಒಬ್ಬ ಕ್ರಿಕೆಟರ್ ಜೊತೆ ಬುಟ್ಟಬೊಮ್ಮ ಲವ್ವಿ ಡವ್ವಿ ನಡೆಸುತ್ತಿದ್ದಾರೆ ಎನ್ನುವ ಗುಲ್ಲಾಗಿತ್ತು. ಮನೆಯಲ್ಲಿ ಆಕೆಯ ಮದುವೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸುದ್ದಿ ಆಗಿತ್ತು. ಆದರೆ ಅದೆಲ್ಲಾ ಬರೀ ಅಂತೆ ಕಂತೆ ಸುದ್ದಿ ಆಗಿಯೇ ಉಳಿದುಬಿಟ್ಟಿತ್ತು.

Pooja Hegde spotted again with rumoured boyfriend who s he

ಸದ್ಯ ಪೂಜಾ ಹೆಗ್ಡೆ ಯುವಕನೊಬ್ಬನ ಜೊತೆ ಕಾರ್ ಏರಿ ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆತ ಆಕೆಯ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತಿದೆ. ಪೂಜಾ ಬಾಲಿವುಡ್ ನಟ ರೋಹನ್ ಮೆಹ್ರಾ ಜೊತೆ ಕಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಪ್ರೀತಿಲಿ ಬಿದ್ದಿದ್ದಾರೆ ಎಂದು ಬಾಲಿವುಡ್‌ ಗಲ್ಲಿಗಳಲ್ಲಿ ಗುಲ್ಲಾಗಿದೆ.

ನಟ ರೋಹನ್ ಮೆಹ್ರಾ ಬಾಲಿವುಡ್‌ನಲ್ಲಿ ಸಹಾಯಕ ನಿರ್ದೇಶಕನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ನಟನೆ ಆರಂಭಿಸಿದರು. ಆದರೆ ನಟಿಸಿದ 2 ಸಿನಿಮಾಗಳು ಅಷ್ಟೇನು ಸದ್ದು ಮಾಡಲಿಲ್ಲ. ಹಲವು ವೆಬ್ ಸೀರಿಸ್‌ಗಳಲ್ಲಿ ಕೂಡ ನಟಿಸಿದ್ದಾರೆ. ಆತನ ಪೂರ್ಣ ಹೆಸರು ರೋಹನ್ ವಿನೋದ್ ಮೆಹ್ರಾ. 4 ವರ್ಷಗಳ ಹಿಂದೆಯೇ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ವೀಡಿಯೋ ವೈರಲ್ ಆಗಿ ಮತ್ತೆ ಅದೇ ವಿಚಾರ ಚರ್ಚೆ ಆಗುತ್ತಿದೆ.

ರೋಹನ್ ಮೆಹ್ರಾ ಇದಕ್ಕೂ ಮುನ್ನ ನಟಿ ತಾರಾ ಸುತಾರಿಯಾ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಎನ್ನವ ಮಾತುಗಳು ಕೇಳಿಬಂದಿತ್ತು. ಇನ್ನು ಉತ್ತರಾಂಚಲ್ ಮೂಲದ ರೋಹನ್ ಸಾಕಷ್ಟು ಜಾಹೀರಾತುಗಳಲ್ಲಿ ಮಿಂಚಿದ್ದಾರೆ. ಇನ್ನು ಹಿಂದಿ ಬಿಗ್‌ಬಾಸ್ 10ನೇ ಸೀಸನ್‌ನಲ್ಲಿ ಸೆಲಬ್ರೆಟಿ ಕಂಟೆಸ್ಟಂಟ್ ಆಗಿ ರೋಹನ್ ದೊಡ್ಮನೆಗೆ ಹೋಗಿದ್ದರು. 5ನೇ ಸ್ಥಾನ ಪಡೆದಿದ್ದರು.

ಬಾಲಿವುಡ್ ನಟ ವಿನೋದ್ ಮೆಹ್ರಾ ಪುತ್ರ ರೋಹನ್ ಮೆಹ್ರಾ. ಸೂಪರ್ ಹಿಟ್ 'ಬಾಜಿರಾವ್ ಮಸ್ತಾನಿ' ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕರಿಯರ್ ಆರಂಭಿಸಿದ್ದರು. ಬಳಿಕ ಒಂದು ಶಾರ್ಟ್‌ ಫಿಲ್ಮ್‌ನಲ್ಲಿ ನಟಿಸಿದ್ದರು.
'ಬಜಾರ್' ಚಿತ್ರದಲ್ಲಿ ಸೈಫ್‌ ಅಲಿಖಾನ್ ಜೊತೆ ಲೀಡ್‌ ರೋಲ್‌ನಲ್ಲಿ ಮಿಂಚಿದ್ದರು. ಬಳಿಕ ಮತ್ತೆ 3 ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ.

ಇನ್ನು ಪೂಜಾ ಹೆಗ್ಡೆ ಹಾಗೂ ರೋಹನ್ ಮೆಹ್ರಾ ಪಾರ್ಟಿ, ರೆಸ್ಟೋರೆಂಟ್ ಅಂತ ಸುತ್ತಾಡುವ ಫೋಟೊ, ವೀಡಿಯೋ ಈ ಹಿಂದೆ ಕೂಡ ಹರಿದಾಡಿತ್ತು. ಇದೀಗ ಇಬ್ಬರೂ ಒಟ್ಟಿಗೆ ಕಾರ್‌ ಒಳಗೆ ಕಾಣಿಸಿಕೊಂಡಿರುವುದು ಭಾರೀ ಸದ್ದು ಮಾಡ್ತಿದೆ. ನಟಿ ಪೂಜಾ ಹೆಗ್ಡೆ ಸತತ ಸೋಲುಗಳಿಂದ ಕಂಗೆಟ್ಟಿದ್ದಾರೆ. 'ಅಲಾ ವೈಕುಂಠಪುರಂಲೊ' ಆಕೆ ನಟಿಸಿದ ಯಾವುದೇ ಸಿನಿಮಾ ಗೆಲ್ಲಲಿಲ್ಲ.

ಮಹೇಶ್ ಬಾಬು ಜೊತೆ 'ಗುಂಟೂರು ಖಾರಂ' ಚಿತ್ರದಲ್ಲಿ ಪೂಜಾ ನಟಿಸಿದ್ದರು. ಆದರೆ ದಿಢೀರನೆ ಚಿತ್ರತಂಡದ ಜೊತೆ ಭಿನ್ನಾಭಿಪ್ರಾಯ ಉಂಟಾಗಿ ಅರ್ಧಕ್ಕೆ ಚಿತ್ರ ಬಿಟ್ಟು ಹೊರ ಬಂದಿದ್ದರು. ಬಳಿಕ ಆ ಪಾತ್ರವನ್ನು ಕನ್ನಡ ನಟಿ ಶ್ರೀಲೀಲಾ ಮಾಡುವಂತಾಯಿತು. ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಕೂಡ ಗೆಲ್ಲಲಿಲ್ಲ. ಸದ್ಯ 'ದೇವ್' ಎನ್ನುವ ಒಂದೇ ಒಂದು ಸಿನಿಮಾ ಆಕೆ ಕೈಯಲ್ಲಿದೆ.

More from Filmibeat

English summary
Pooja Hegde steps out for dinner with rumoured boyfriend?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X