ಕೇವಲ ಒಂದು ಹಾಡಿಗೆ ₹2 ಕೋಟಿ ಸಂಭಾವನೆ ಪಡೆದರಾ ಈ ನಟಿ..?

ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆಯೂರಿದವರು, ಸಾಮಾನ್ಯವಾಗಿ ತಮ್ಮ ಬೆಲೆ ಹೆಚ್ಚಿದ್ದಾಗ ಕೇವಲ ಹಾಡೊಂದಕ್ಕೆ ಹೆಜ್ಜೆ ಹಾಕುವ ಮನಸು ಮಾಡಲ್ಲ. ಯಾಕೆಂದರೆ ಎಲ್ಲಿ ತಮ್ಮನ್ನು ಐಟಂ ಗರ್ಲ್ ಎಂದು ಬ್ರ್ಯಾಂಡ್ ಮಾಡಿ ಬಿಡುತ್ತಾರೆ ಎನ್ನುವ ಭಯ ಹಲವರಲ್ಲಿರುತ್ತೆ. ಅಲ್ಲೊಬ್ಬರು.. ಇಲ್ಲೊಬ್ಬರು.. ಇದಕ್ಕೆ ಅಪವಾದ ಎನ್ನುವಂತೆ ಬೇಡಿಕೆಯಲ್ಲಿದ್ದಾಗಲೇ ಅಪರೂಪಕ್ಕೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ತಾರೆ. ಕಾಣಿಸಿಕೊಂಡರೂ ಕೂಡ ನಾಯಕಿಯಾಗಿ ತಮಗೆ ಇರುವ ಬೆಲೆ ಉಳಿಸಿಕೊಳ್ತಾರೆ.

ಇನ್ನೂ ಕೆಲವರು ಬೇಡಿಕೆ ಕಡಿಮೆಯಾದ ನಂತರ ಐಟಂ ಸಾಂಗ್ ನತ್ತ ಹೊರಳುತ್ತಾರೆ. ಇದಕ್ಕೆ ಪೂಜಾ ಹೆಗ್ಡೆ ಸದ್ಯದ ಉದಾಹರಣೆ. ಹೌದು, ಪೂಜಾ ಹೆಗ್ಡೆ.. ಹೆಚ್ಚೇನ್ ಇಲ್ಲ ಹನ್ನೆರಡು ವರ್ಷದ ಹಿಂದೆ ಚಿನ್ನದಂತಹ ಬೇಡಿಕೆಯನ್ನ ಹೊಂದಿದ್ದ ನಟಿ. ಒಂದಾದ ಮೇಲೊಂದು ಗೆಲುವನ್ನ ಕಂಡಿದ್ದ ಪೂಜಾ ಬಾಲಿವುಡ್ ಸಹವಾಸ ಮಾಡಿ ಬಡವರಾದರು.

Pooja Hegde s Coolie Monica Song Remuneration Details

ನಿಜಾ.. ಪೂಜಾ ಅಭಿನಯದ 'ಹೌಸ್ ಫುಲ್ 4', ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿರುವ ಸಿನಿಮಾನೇ. ಆದರೆ.. ಗೆಲುವಲ್ಲಿ ಪೂಜಾಗೆ ಕ್ರೆಡಿಟ್ ಸಿಗಲಿಲ್ಲ. ಉತ್ತರದ ಸಿನಿರಸಿಕರು ಇವರನ್ನ ಹೃದಯದಲ್ಲಿಟ್ಟು ಪೂಜೆ ಮಾಡಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಆ ನಂತರ ಪೂಜಾ ಅಭಿನಯದ ಸರ್ಕಸ್ ಮತ್ತು 'ಕಿಸಿ ಕಾ ಭಾಯಿ ಕಿಸಿ ಕಾ ಜಾನ್' ಸಿನಿಮಾ ಮಕಾಡೆ ಮಲಗಿಕೊಂಡವು.

ಇನ್ನೂ.. 'ರಾಧೆ ಶ್ಯಾಮ್'.. 'ಬೀಸ್ಟ್' ಮತ್ತು 'ಆಚಾರ್ಯ'.. ಪೂಜಾ ಅವರ ಖಾತೆಗೆ ಮತ್ತು ಖ್ಯಾತಿಗೆ ಎರಡಕ್ಕೂ ಕತ್ತರಿಯನ್ನ ಹಾಕಿದವು. ಇದಕ್ಕೆ ಸಾಕ್ಷಿ ಅನ್ನುವಂತೆ.. ಒಂದ್ಕಾಲದಲ್ಲಿ ಇವರದ್ದು ಗೋಲ್ಡನ್ ಲೆಗ್ ಅನ್ನುತ್ತಿದ್ದ ಜನ ಐರನ್ ಲೆಗ್ ಅನ್ನಲು ಶುರು ಮಾಡಿದರು. ಇದಕ್ಕೆ ಪೂರಕವಾಗಿ ತೀರಾ ಇತ್ತೀಚೆಗೆ ಬಂದ 'ದೇವಾ' ಮತ್ತು 'ರೆಟ್ರೋ' ಕೂಡ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಲಿಲ್ಲ.

ಇಂಥಾ ಪೂಜಾ ಹೆಗ್ಡೆ ಸದ್ಯ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 'ಕೂಲಿ' ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಹಾಡು ಬಿಡುಗಡೆಯಾಗಿದ್ದು ಎಲ್ಲೆಡೆ ಈ ಹಾಡಿನ ಕುರಿತು ಚರ್ಚೆಗಳಾಗುತ್ತಿವೆ. ಪೂಜಾ ಹೆಗಡೆ ಹಾಕಿರುವ ಸ್ಟೆಪ್ ಗಳಿಗೆ ಯುವ ಸಮೂಹ ಫಿದಾ ಆಗಿದ್ದು, ಮೊನ್ನೆಯವರೆಗೆ ಪೂಜಾ ಹೆಗ್ಡೆ ಹೆಸರು ಕೇಳಿ ಮೂಗು ಮುರಿಯುತ್ತಿದ್ದವರೆಲ್ಲಾ ಈ ಹಾಡನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಪೂಜಾ ಹೆಗಡೆ ಸೌಂದರ್ಯ ಅವರಲ್ಲಿನ ಪ್ರತಿಭೆಯನ್ನು ಹೊಗಳುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಈ ಹಾಡು ಟ್ರೆಂಡಿಂಗ್‌ನಲ್ಲಿದೆ ಕೂಡ.

ಇದರ ನಡುವೆ ಈ ಹಾಡಿಗಾಗಿ ಪೂಜಾ ಹೆಗ್ಡೆ ಪಡೆದಿರಬಹುದಾದ ಸಂಭಾವನೆಯ ಕುರಿತು ಕೂಡ ಚರ್ಚೆಯಾಗುತ್ತಿದೆ. ಆ ಪ್ರಕಾರ ನೋಡುವುದಾದರೆ ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ ಚಿತ್ರವೊಂದಕ್ಕೆ 5 ಕೋಟಿ ಸಂಭಾವನೆ ಪಡೆಯುತ್ತಿದ್ದ ಪೂಜಾ ಹೆಗ್ಡೆ 'ಕೂಲಿ' ಚಿತ್ರದ ಈ ಹಾಡಿಗೆ 'ಎರಡು ಕೋಟಿ' ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಸದ್ಯ ಚೆನ್ನೈ ನಲ್ಲಿ ಕೇಳಿ ಬರುತ್ತಿದೆ.

pooja-hegdes-coolie-monica-song-remuneration-details

ಸಹಜವಾಗಿ ಕಾಲಿವುಡ್‌ನ ಹಲವು ನಿರ್ಮಾಪಕರು ಈ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಮಾಡಿದ ಒಂದು ಸಿನಿಮಾ ಕೂಡ ಗೆಲ್ಲುತ್ತಿಲ್ಲ ಹೀಗಿರುವಾಗ ಎರಡು ಕೋಟಿ ಸಂಭಾವನೆ ಕೊಡಬೇಕಿತ್ತಾ ಎಂದು ಮಾತನಾಡುತ್ತಿದ್ದಾರೆ. ಇನ್ನು ಕೆಲ ಪೂಜಾ ಹೆಗ್ಡೆ ಅವರ ಅಭಿಮಾನಿಗಳು ಕೂಲಿ ಚಿತ್ರದಲ್ಲಿ ಕೇವಲ ಒಂದು ಹಾಡಿಗೆ ಪೂಜಾ ಹೆಗ್ಡೆ ಐದು ಕೋಟಿಯನ್ನು ಪಡೆದಿದ್ದಾರೆ ಎನ್ನುವ ವಾದವನ್ನು ಕೂಡ ಮಾಡುತ್ತಿದ್ದಾರೆ. ಯಾವುದು ಸತ್ಯ ? ಯಾವುದು ಮಿಥ್ಯ ? ಈ ಪ್ರಶ್ನೆಗೆ ಉತ್ತರ ಚಿತ್ರತಂಡಕ್ಕೆ ಗೊತ್ತಾದರೂ ಕೂಡ ಸದ್ಯ ಪೂಜಾ ಹೆಗ್ಡೆಯ ಸಂಭಾವನೆಯ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಪೂಜಾ ಹೆಗ್ಡೆಯ ತಾಳಕ್ಕೆ ತಕ್ಕಂತೆ ಯುವಜನಾಂಗ ಕುಣಿಯುತ್ತಿದೆ. ರೀಲ್ಸ್‌ಗಳನ್ನು ಮಾಡುತ್ತಿದೆ.

More from Filmibeat

English summary
Pooja Hegde's remuneration for the "Monica" song in Rajinikanth's 'Coolie' revealed! See her stunning performance and learn about her earnings. Read the full story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X