»   » ಟ್ವಿಟ್ಟರ್ ಜೊತೆ ಪೂನಂ ಪಾಂಡೆ 10 ಕೋಟಿ ಡೀಲ್!

ಟ್ವಿಟ್ಟರ್ ಜೊತೆ ಪೂನಂ ಪಾಂಡೆ 10 ಕೋಟಿ ಡೀಲ್!

By: ರವಿಕಿಶೋರ್
Subscribe to Filmibeat Kannada
ಈಕೆಯ ಹೆಸರು ಎಲ್ಲರಿಗೂ ಗೊತ್ತೇ ಇದೆ. ಮರೆಯುವಂತಹ ತಾರೆ ಅಲ್ಲ ಬಿಡಿ. ಟ್ವಿಟ್ಟರ್ ನಲ್ಲಿ ಸ್ವಚ್ಛಂದವಾಗಿ ಹಾರಾಡಿದ ನೀಲಿ ಹಕ್ಕಿ ಪೂನಂ ಪಾಂಡೆ. ಈ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದ ತಾರೆ. ಅಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಲೇ ಕೋಟಿಗಟ್ಟಲೆ ಹಣ ಬಾಚುತ್ತಿದ್ದಾಳೆ ಎಂಬ ಸುದ್ದಿ ಲೀಕ್ ಆಗಿದೆ.

ದಿನಕ್ಕೊಂದು ಬಿಕಿನಿ ಫೊಟೋ...ವಾರಕ್ಕೊಂದು ನಗ್ನ ಫೋಟೋವನ್ನು ಪೋಸ್ಟ್ ಮಾಡುತ್ತಾ ಮಾಡುತ್ತಾ ಈಗಾಗಲೆ ಈಕೆ ಲಕ್ಷಗಟ್ಟಲೆ ಅಭಿಮಾನಿಗಳನ್ನು ಟ್ವಿಟ್ಟರ್ ನಲ್ಲಿ ಸಂಪಾದಿಸಿಕೊಂಡಿದ್ದಾರೆ. ಪೂನಂ ಹೀಗೇಕೆ ಮಾಡುತ್ತಿದ್ದಾರೆ ಎಂಬುದು ಇಷ್ಟು ದಿನ ಯಾರಿಗೂ ಸುಳಿವು ಸಿಕ್ಕಿರಲಿಲ್ಲ.

ಈಕೆ ಬಟ್ಟೆ ಬಿಚ್ಚುತ್ತಿರುವ ಹಿಂದಿನ ರಹಸ್ಯ ಇದೀಗ ಬಯಲಾಗಿದೆ. ಪೂನಂ ಪಾಂಡೆ ಜೊತೆಗೆ ಶೆರ್ಲಿನ್ ಚೋಪ್ರಾ, ಸನ್ನಿ ಲಿಯೋನ್ ಅವರಂತಹ ತಾರೆಗಳೂ ಈಗ ತಾಮುಂದು ನಾ ಮುಂದು ಎಂದು ಪೈಪೋಟಿಗೆ ಬಿದ್ದಿದ್ದಾರೆ. ಇವರೆಲ್ಲಾ ಇಷ್ಟು ದಿನ ತಮ್ಮ ಯೌವನವನ್ನು ಟ್ವಿಟ್ಟರ್ ನಲ್ಲಿ ಪ್ರದರ್ಶಿಸುತ್ತಾ ಬರುತ್ತಿದ್ದರು. ಅದನ್ನು ನೋಡಿದ ಅದೆಷ್ಟೋ ಚಿತ್ರರಸಿಕರು ಕಣ್ಣು ತಂಪು ಮಾಡಿಕೊಂಡಿದ್ದರು.

ಬಹುಶಃ ಬಿಟ್ಟಿ ಪ್ರಚಾರಕ್ಕಾಗಿ ಇವರೆಲ್ಲಾ ಹೀಗೆ ಮಾಡುತ್ತಿದ್ದಾರೇನೋ ಎಂದೇ ಎಲ್ಲರೂ ಭಾವಿಸಿದ್ದರು. ತಾಜಾ ಸಮಾಚಾರ ಏನೆಂದರೆ ಇವರೆಲ್ಲಾ ಹೀಗೆ ಬಟ್ಟೆ ಬಿಚ್ಚುತ್ತಿರುವುದು ಬಿಟ್ಟಿ ಪ್ರಚಾರಕ್ಕಾಗಿ ಅಲ್ಲವೇ ಅಲ್ಲ. ಈ ನೀಲಿ ಹಕ್ಕಿಗಳಿಗೆಲ್ಲಾ ಲಕ್ಷಾಂತರ ದುಡ್ಡು ಸಂದಾಯವಾಗುತ್ತಿದೆ ಎಂಬುದು.

ಫ್ರೀಯಾಗಿ ತೋರಿಸುತ್ತಾರೆ ಎಂದರೆ ಯಾರು ತಾನೆ ಕಣ್ಣುಮುಚ್ಚಿಕೊಂಡಿರುತ್ತಾರೆ...ದಿನಕ್ಕೆ ಹತ್ತು ಬಾರಿಯಾದರೂ ಅವರ ಟ್ವಿಟ್ಟರ್ ಖಾತೆ ಭೇಟಿ ನೀಡಿ ಇನ್ನೇನು ಇದೆಯೋ ಎಂದು ಹಲವಾರು ಮಂದಿ ಇಣುಕಿ ನೋಡುತ್ತಲೇ ಇರುತ್ತಾರೆ. ಹೀಗೇ ಹೆಚ್ಚು ಹೆಚ್ಚು ಜನ ಬಂದಷ್ಟೂ ಹೆಚ್ಚು ಹೆಚ್ಚು ಲಾಭ. ಅವರ ಟ್ವಿಟ್ಟರ್ ಖಾತೆಯ ಕ್ಲಿಕ್ಸ್ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಾಗುತ್ತದೆ.

ಇದರಿಂದ ಅವರ ಟ್ವಿಟ್ಟರ್ ಖಾತೆಗಳಿಗೆ ಜಾಹೀರಾತುಗಳ ಸುರಿಮಳೆಯಾಗುತ್ತದೆ. ಜಾಹೀರಾತುಗಳಿಂದ ಬರುವ ಹಣದಲ್ಲಿ ಇಂತಿಷ್ಟು ಪಾಲು ಎಂದು ಈ ತಾರೆಗಳಿಗೆ ಸಂದಾಯವಾಗುತ್ತಿದೆ ಎನ್ನುತ್ತಾರೆ ಇಂಟರ್ ನೆಟ್ ಜಾಹೀರಾತು ಮಾರುಕಟ್ಟೆ ನಿಪುಣರು. ಹೆಂಗಿದೆ ನೋಡಿ ಕಥೆ!

ಇತ್ತೀಚೆಗೆ ಪೂನಂ ಪಾಂಡೆ ಸಂಭಾವನೆಯನ್ನು ಟ್ವಿಟ್ಟರ್ ತಾಣ ಜಾಸ್ತಿ ಮಾಡಿದೆಯಂತೆ. ವರ್ಷಕ್ಕೆ ಆಕೆಗೆ ಸಂಭಾವನೆ ರೂಪದಲ್ಲಿ ರು.10 ಕೋಟಿವರೆಗೂ ಸಂದಾಯವಾಗುತ್ತದೆ ಎನ್ನುತವೆ ಮೂಲಗಳು. ಇದೇ ರೀತಿ ಶೆರ್ಲಿನ್, ಸನ್ನಿ ಲಿಯೋನ್ ಅವರ ಸಂಭಾವನೆಯೂ ಇದೆ ಎನ್ನಲಾಗಿದೆ. ಅದೆಲ್ಲಾ ಸರಿ, ಎಲ್ಲಾ ತಾರೆಗಳು ಸಿನೆಮಾ ಮಾಡೋದನ್ನು ಬಿಟ್ಟು ಬಿಚ್ಚೋದಕ್ಕೆ ಇಳಿದರೆ ಗತಿ ಏನು? (ಏಜೆನ್ಸೀಸ್)

English summary
Apparently, few noted market experts have revealed that the more the number of followers for an entertainment professional the more the opportunities for getting ads and also at a higher package. So, according to the following in twitter their remuneration will increase on ads.
Please Wait while comments are loading...