»   » ಪೂನಂ ಕೊಟ್ಟ ಗಿಫ್ಟ್ ತಗೊಂಡು ಮಾಡೋದೇನು?

ಪೂನಂ ಕೊಟ್ಟ ಗಿಫ್ಟ್ ತಗೊಂಡು ಮಾಡೋದೇನು?

Posted By:
Subscribe to Filmibeat Kannada

ಇದೇನು ಪ್ರಚಾರದ ಅತಿರೇಕವೋ, ಹುಚ್ಚುತನದ ಪರಮಾವಧಿಯೋ ಅಥವಾ ಇಂದಿನ ಜಮಾನಾನೇ ಹೀಗಿದೆಯೊ... ಪ್ರೇಮಿಗಳ ದಿನದಂದು ಬಾಲಿವುಡ್ ಬ್ಯೂಟಿ ಟ್ವಿಟ್ಟರ್ ಗೆಳೆಯರಿಗೆಂದು ರೋಮ್ಯಾಂಟಿಕ್ ಸಂದೇಶ ಕಳಿಸುವ ಒಂದು ಸ್ಪರ್ಧೆಯನ್ನು ಏರ್ಪಡಿಸಿದ್ದರು. ಆ ಸ್ಪರ್ಧೆಯಲ್ಲಿ ಗೆದ್ದ ಭೂಪರಿಗೆ ಒಂದು ಸೂಪರ್ ಗಿಫ್ಟನ್ನೂ ನೀಡುವುದಾಗಿ ಹೇಳಿದ್ದರು.

ಪೂನಂ ಪಾಂಡೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಬಗ್ಗೆ ಕೇಳಿ ರೋಮಾಂಚನವೋ ರೋಮಾಂಚನ. ನೂರಾರು ಸ್ಪರ್ಧಾಳುಗಳು ಜಿದ್ದಾಜಿದ್ದಿಗೆ ಬಿದ್ದು ಟ್ವೀಟ್ ಮೆಸೇಜ್ ಕಳಿಸಿದರು. ಪೂನಂ ಪಾಂಡೆ ಅವನ್ನೆಲ್ಲ ಓದಿದಳೋ ಬಿಟ್ಟಳೋ, ಆಕೆಯ ಹೊಸ ಚಿತ್ರ ನಶಾಕ್ಕೆ ಭರ್ಜರಿ ಪ್ರಚಾರವಂತೂ ಸಿಕ್ಕಿತು. ಆಕೆಯೂ ಖುಷ್, ಅಭಿಮಾನಿಗಳೂ ಖುಷ್.

ಆ ಸ್ಪರ್ಧೆಯಲ್ಲಿ ಈಗ ಜಿತೇಂದ್ರ ಬಿ ಮತ್ತು ಪ್ರಸೇನ್‌ಜಿತ್ ಮಿತ್ರಾ ಎಂಬಿಬ್ಬರು ವಿಜೇತರಾಗಿದ್ದಾರೆ. ಗೆದ್ದಿರುವುದನ್ನು ಕೇಳಿ ನಂಬುವುದಕ್ಕೇ ಆಗುತ್ತಿಲ್ಲ, ಹರಿಯುತ್ತಿರುವ ಆನಂದಭಾಷ್ಪವನ್ನು ಹಿಡಿದಿಡಲೇ ಆಗುತ್ತಿಲ್ಲ, ಭೂಮಿಯ ಮೇಲೆ ಇದ್ದೇನೋ ಇಲ್ಲವೋ ಎಂಬುದೇ ತಿಳಿಯುತ್ತಿಲ್ಲ ಎಂದು ಹಾರಾಡುತ್ತಿದ್ದಾರೆ. ಅಂದ ಹಾಗೆ, ಅವರಿಬ್ಬರಿಗೂ ಪೂನಂ ಪಾಂಡೆಯಿಂದ ಸಿಕ್ಕಿರುವ ಗಿಫ್ಟ್ ಏನು ಗೊತ್ತಾ? [ಪೂನಂ ಗ್ಯಾಲರಿ]

ಪೂನಂ ಪಾಂಡೆ ಧರಿಸಿರುವ ಒಳಉಡುಪು!

'ನಶಾ' ಹಿಂದಿ ಚಿತ್ರದಲ್ಲಿ ಬಿಕಿನಿ ಬೇಬಿ ಪೂನಂ ಪಾಂಡೆ ಧರಿಸಿರುವ ಒಳಉಡುಪು! ಪೂನಂ ಪಾಂಡೆ ಧರಿಸಿರುವ ಒಳಉಡುಪನ್ನು ತೆಗೆದುಕೊಂಡು ಇವರು ಅಭಿಮಾನಿಗಳು ಏನು ಮಾಡುತ್ತಾರೋ ಆ ದೇವರೇ ಬಲ್ಲ. ಗೆದ್ದವರೇನು ಅವನ್ನು ಹಾಕಿಕೊಂಡು ನಲಿಯುತ್ತಾರಾ ಎಂದು ಕೆಲವರು ಕುಹಕವನ್ನೂ ಆಡಿದ್ದರು.

ಇದ್ದ ಬಟ್ಟೆಯಲ್ಲಿಯೇ ಜಿಗಿದಾಡಿದ್ದರು

ಆದರೆ, ಏನು ಮಾಡುವುದು? ಸ್ಪರ್ಧೆಯೇ ಹಾಗಿತ್ತು. ರೋಮ್ಯಾಂಟಿಕ್ ಟ್ವೀಟ್ ಕಳಿಸಿ ಬಹುಮಾನ ಗೆಲ್ಲಿ ಎಂದು ಪೂನಂ ಪಾಂಡೆ ರಸಿಕ ಮಿತ್ರರಿಗೆ ಕರೆ ನೀಡಿದ್ದರು. ಈ ಕರೆಗೆ ಬಂದ ಭರಪೂರ ಪ್ರತಿಕ್ರಿಯೆ ನೋಡಿ ಪೂನಂ ಪಾಂಡೆ ಇದ್ದ ಬಟ್ಟೆಯಲ್ಲಿಯೇ ಜಿಗಿದಾಡಿದ್ದರು. ಟ್ವೀಟ್ ಮಾಡಿದ ಸ್ನೇಹಿತರಿಗೆಲ್ಲ ಪೂನಂ ಪಾಂಡೆ ಧನ್ಯವಾದ ಹೇಳಿದ್ದರು.

ಪ್ರಚಾರ ಗಿಟ್ಟಿಸಲು ನಾನಾ ತಂತ್ರಗಾರಿಕೆ

ಪ್ರಚಾರ ಗಿಟ್ಟಿಸಲು, ಸುದ್ದಿಯಲ್ಲಿ ಇರಲು ನಾನಾ ತಂತ್ರಗಾರಿಕೆ ಹೂಡುವ ವಿಷಯದಲ್ಲಿ ಪೂನಂ ಪಾಂಡೆಯನ್ನು ಮೀರಿಸುವವರು ಬಹುಶಃ ಬಾಲಿವುಡ್‌ನಲ್ಲಿ ಮಾತ್ರವಲ್ಲ ಜಾಗತಿಕ ಚಿತ್ರರಂಗದಲ್ಲಿಯೇ ಯಾರೂ ಇಲ್ಲ. ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ ಸಾರ್ವಜನಿಕವಾಗಿ ವಸ್ತ್ರತ್ಯಾಗ ಮಾಡುವುದಾಗಿ ಹೇಳಿ ಭರ್ಜರಿ ಪ್ರಚಾರ ಗಿಟ್ಟಿಸಿದ್ದರು. ಆಗಲೇ ಕಿಂಗ್‌ಫಿಷರ್ ಬೆಡಗಿಯತ್ತ ಎಲ್ಲರ ಗಮನ ಹೋಗಿದ್ದು.

ಪೂನಂ ಮುಂದೆ ಸನ್ನಿಯೇನು ಮಹಾ!

ಇನ್ನು, ಹಾಲಿವುಡ್ ಬೆಡಗಿ ಜೆಸ್ಸಿ ಜೂನ್‌ಳಂತೆ ತನ್ನವೇ ನಗ್ನ ಚಿತ್ರಗಳನ್ನು ತೆಗೆಸಿಕೊಂಡು ಸಾಮಾಜಿಕ ತಾಣಗಳಲ್ಲಿ ಪೂನಂ ಬಿಟ್ಟಿದ್ದೇ ಬಿಟ್ಟಿದ್ದು. ಇದು ಯಾವ ಮಟ್ಟಿಗೆ ಹೋಯಿತೆಂದರೆ, ಸನ್ನಿ ಲಿಯೋನ್, ಶೆರ್ಲಿನ್ ಚೋಪ್ರಾ, ರೋಜ್ಲಿನ್ ಖಾನ್ ಮುಂತಾದವರು ಇವಳ ಮುಂದೆ ಏನೂ ಅಲ್ಲ ಎನ್ನುವ ಮಟ್ಟಿಗೆ. ಬೇಕಾದರೆ ಬಿಕಿನಿಯಲ್ಲೇ ಶಾಪಿಂಗ್ ಮಾಡುವೆ ಎಂದು ಹೇಳಿದ್ದ ಪೂನಂ ಕಳೆದ ವರ್ಷ ಪ್ರೇಮಿಗಳ ದಿನದಂದು ಮೈತುಂಬ ಸೀರೆಯುಟ್ಟು ಕಟ್ಟಾ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಬಿಕಿನಿ ತ್ಯಜಿಸಿ ಸೀರೆ ಉಡ್ತಾಳಂತೆ ಪೂನಂ

ಬಿಕಿನಿ ಗಿಫ್ಟ್ ಆಗಿ ನೀಡುತ್ತಿರುವ ಸುದ್ದಿ ಬಂದ ಹಿಂದೆಯೇ ಮತ್ತೊಂದು ಶಾಕಿಂಗ್ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಅದೇನೆಂದರೆ, ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದರೆ ಪೂನಂ ಪಾಂಡೆ ಸೀರೆಯುಡಲಿದ್ದಾರೆ ಎಂಬ ಸುದ್ದಿಯನ್ನು ಹರಿಯಬಿಡಲಾಗಿದೆ. ನಿಜಾನಾ ಪೂನಂ ಪಾಂಡೆ?

English summary
Model and actress Poonam Panday had organized a competition for the tweeples on Valentine's day. Two male fans have been selected and Poonam will be presenting them bra and panty, which Poonam wore in her debut Bollywood movie Nasha. What will they do with those gifts?
Please Wait while comments are loading...