Prabhas: ಬಾಲಿವುಡ್ ಪ್ರಾಜೆಕ್ಟ್‌ಗೆ ನೋ ಹೇಳಿ ತಮಿಳು ನಿರ್ದೇಶಕನ ಚಿತ್ರಕ್ಕೆ ಪ್ರಭಾಸ್ ಗ್ರೀನ್ ಸಿಗ್ನಲ್?
ಎಷ್ಟೇ ಸಿನಿಮಾ ಸೋತ್ರು ಗೆದ್ರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಹುಬಲಿ ಪ್ರಭಾಸ್ ಕ್ರೇಜ್ ಮಾತ್ರ ಕಮ್ಮಿ ಆಗ್ತಿಲ್ಲ. ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಯಂಗ್ ರೆಬಲ್ ಸ್ಟಾರ್ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಲೇ ಇದ್ದಾರೆ. ಬಾಲಿವುಡ್ ಮಂದಿ ಕೂಡ ಪ್ರಭಾಸ್ ಕಾಲ್‌ಶೀಟ್‌ಗಾಗಿ ಕಾಯ್ತಿದ್ದಾರೆ. 'ಆದಿಪುರುಷ್' ಆಗಿ ಈಗಾಗಲೇ ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ಬಿಟೌನ್‌ಗೆ ಅಡಿಯಿಟ್ಟಿದ್ದಾರೆ.
ಪ್ರಭಾಸ್ ನಟನೆಯ 'ಸಲಾರ್' ರಿಲೀಸ್‌ಗೆ ದಿನಗಣನೆ ಶುರುವಾಗಿದೆ. 'ಪ್ರಾಜೆಕ್ಟ್- K' ಚಿತ್ರೀಕರಣ ಭರದಿಂದ ಸಾಗಿದೆ. ಸದ್ದಿಲ್ಲದೇ 'ರಾಜಾ ಡೀಲಕ್ಸ್' ಶೂಟಿಂಗ್ ಮುಗಿತಾ ಬರ್ತಿದೆ. ಇದೆಲ್ಲದರ ನಡುವೆ 'ಅರ್ಜುನ್ ರೆಡ್ಡಿ' ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರಕ್ಕೆ ಡಾರ್ಲಿಂಗ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಇನ್ನು ಬಾಲಿವುಡ್ 'ಪಠಾನ್' ಸಿನಿಮಾ ನಿರ್ದೇಶಕ ಸಿದ್ದಾರ್ಥ್ ಆನಂದ್ ನಿರ್ದೇಶನದ ಚಿತ್ರದಲ್ಲೂ ಪ್ರಭಾಸ್ ನಟಿಸ್ತಾರೆ ಎನ್ನುವ ಊಹಾಪೋಹ ಇತ್ತು.

'ಆದಿಪುರುಷ್' ಸಿನಿಮಾ ಸೋಲಿನ ಹಿನ್ನೆಲೆಯಲ್ಲಿ ಪ್ರಭಾಸ್ ಮತ್ತೆ ಬಾಲಿವುಡ್ ಸಿನಿಮಾದಲ್ಲಿ ನಟಿಸೋಕೆ ಹಿಂದು ಮುಂದು ನೋಡುತ್ತಿದ್ದಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರವನ್ನು ಪಕ್ಕಕ್ಕಿಡುತ್ತಿದ್ದಾರೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಶುರುವಾಗಿದೆ. ತಮಿಳಿನ ಲೋಕೇಶ್ ಕನಕರಾಜ್ ನಿರ್ದೇಶನ ಚಿತ್ರಕ್ಕೆ ಪ್ರಭಾಸ್ ಸೈ ಎಂದಿದ್ದಾರೆ ಎನ್ನಲಾಗ್ತಿದೆ.
ಸೂಪರ್ ಹಿಟ್ ಸಿನಿಮಾಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ಈ ಕ್ರೇಜಿ ಪ್ರಾಜೆಕ್ಟ್‌ಗೆ ಪ್ಲ್ಯಾನ್ ಮಾಡ್ತಿದೆ. ರಾಜಮೌಳಿ, ಪ್ರಶಾಂತ್ ನೀಲ್ ರೀತಿಯಲ್ಲೇ ಸೌತ್ ಸಿನಿದುನಿಯಾದಲ್ಲಿ ಸೂಪರ್ ಹಿಟ್ ಸಿನಿಮಾಗಳಿಂದ ಸಂಚಲನ ಸೃಷ್ಟಿಸಿರುವ ನಿರ್ದೇಶಕ ಲೋಕೇಶ್ ಕನಕರಾಜ್. 'ಖೈದಿ', 'ಮಾಸ್ಟರ್', 'ವಿಕ್ರಂ' ಹೀಗೆ ಒಂದಕ್ಕಿಂತ ಒಂದು ಅದ್ಭುತ ಸಿನಿಮಾಗಳನ್ನು ಲೋಕೇಶ್ ಕಟ್ಟಿಕೊಟ್ಟಿದ್ದಾರೆ. ಸದ್ಯ ದಳಪತಿ ವಿಜಯ್ ನಟನೆಯ 'ಲಿಯೋ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
'ಲಿಯೋ' ಬಳಿಕ ಲೋಕೇಶ್ ಕನಕರಾಜ್ ರಜನಿಕಾಂತ್ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದರ ಬೆನ್ನಲ್ಲೆ ಪ್ರಭಾಸ್ ನಟನೆಯ ಚಿತ್ರವನ್ನು ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಶೀಘ್ರದಲ್ಲೇ ಈ ಸಿನಿಮಾ ಘೋಷಣೆ ಆಗುತ್ತದೆ ಎನ್ನುವ ವದಂತಿ ಫಿಲ್ಮ್ ನಗರ್‌ನಲ್ಲಿ ಶುರುವಾಗಿದೆ. ಪ್ರಭಾಸ್- ಲೋಕೇಶ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದರೆ ಬಾಕ್ಸಾಫೀಸ್ ಶೇಕ್ ಆಗುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಬಾಹುಬಲಿ ಸರಣಿ ಸೂಪರ್ ಹಿಟ್ ಬಳಿಕ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಸಾವಿರಾರು ಕೋಟಿ ಹಣ ಯಂಗ್ ರೆಬಲ್ ಸ್ಟಾರ್ ಸಿನಿಮಾಗಳ ಮೇಲೆ ಹೂಡಲಾಗುತ್ತಿದೆ. ಇದೀಗ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಪ್ರಭಾಸ್- ಲೋಕೇಶ್ ಜೋಡಿಯ ಪ್ರಾಜೆಕ್ಟ್‌ಗೆ ವೇದಿಕೆ ಸಿದ್ಧಪಡಿಸಿದೆ ಎನ್ನಲಾಗ್ತಿದೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ.
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ಕಲಾವಿದರು, ತಂತ್ರಜ್ಞರು ಬೇರೆ ಬೇರೆ ಭಾಷೆಯ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವುದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಈಗಾಗಲೇ ತಮಿಳು ನಿರ್ದೇಶಕ ಶಂಕರ್ ತೆಲುಗಿನ 'ಗೇಮ್ ಚೇಂಜರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಪ್ರಶಾಂತ್ ನೀಲ್, ಎ. ಹರ್ಷ ತೆಲುಗು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ರಾಮ್‌ಚರಣ್, ಪ್ರಭಾಸ್ ಜೊತೆ ಸಿನಿಮಾ ಮಾಡುವ ಬಗ್ಗೆ ಲೋಕೇಶ್ ಕನಕರಾಜ್‌ಗೆ ಪ್ರಶ್ನೆ ಎದುರಾಗಿತ್ತು. ಮಾತನಾಡುತ್ತಿದ್ದೇವೆ, ಹೇಳೋಕ್ಕಾಗಲ್ಲ ಮುಂದಿನ ದಿನಗಳಲ್ಲಿ ಸಿನಿಮಾ ಮಾಡಿದರೂ ಮಾಡಬಹುದು ಎಂದಿದ್ದರು.


Click it and Unblock the Notifications











