ಹೃತಿಕ್ 'ಧೂಮ್-4'ಗೆ ವಿಲನ್ ಆಗಲಿದ್ದಾರ?, 'ಬಾಹುಬಲಿ' ಶಿವುಡು!

By ಸೋನು ಗೌಡ

ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಬಿಗ್ ಹಿಟ್ 'ಬಾಹುಬಲಿ' ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ್ದು, ಆಯ್ತು. 100 ದಿನದ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿದ್ದು ಆಯ್ತು.

ಇದೀಗ 'ಬಾಹುಬಲಿ' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ನಟ ಪ್ರಭಾಸ್ ಅವರಿಗೆ ಮತ್ತೊಂದು ಹಾಟ್ ಅವಕಾಶ ದೊರೆತಿದ್ದು, ಅವರ ಸಂತೋಷವನ್ನು ಇಮ್ಮಡಿಗೊಳಿಸುವ ಸಂದರ್ಭ ಒದಗಿ ಬಂದಿದೆ.

Prabhas aka 'Baahubali' might be teaming up with Hrithik Roshan as 'Doom 4' Villains

ಈಗಾಗಲೇ 'ಬಾಹುಬಲಿ ಭಾಗ 2'ರ ಶೂಟಿಂಗ್ ಕೂಡ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪ್ರಭಾಸ್ ಅವರಿಗೆ ಬಿಟೌನ್ ನಿಂದ ಕರೆ ಬಂದಿದೆ. ಅದೇನಪ್ಪಾ ಅಂದ್ರೆ, ಬಾಲಿವುಡ್ ನಟ ಹೃತಿಕ್ ರೋಷನ್ ಅವರು 'ಧೂಮ್ 4' ಸಿನಿಮಾದ ತಯಾರಿ ನಡೆಸುತ್ತಿದ್ದು, ಚಿತ್ರದ ವಿಲನ್ ಪಾತ್ರಕ್ಕೆ ಭಾರಿ ಕಸರತ್ತು ನಡೆಯುತ್ತಿದೆ.

ಈ ಸಂದರ್ಭದಲ್ಲಿ ಯಶ್ ರಾಜ್ ಫಿಲ್ಮ್ ಬ್ಯಾನರ್ ಗೆ ಕಣ್ಣಿಗೆ ಕಂಡಿದ್ದು, 'ಬಾಹುಬಲಿ' ಯಶಸ್ಸಿನಲ್ಲಿ ಬೀಗುತ್ತಿರುವ ತೆಲುಗು ನಟ ಪ್ರಭಾಸ್. ಇದೀಗ ಬಲ್ಲ ಮಾಹಿತಿಗಳ ಪ್ರಕಾರ ನಟ ಹೃತಿಕ್ ಅವರ 'ಧೂಮ್ 4' ಗೆ ವಿಲನ್ ಪಾತ್ರ ವಹಿಸಲು ತೆಲುಗು ನಟ ಪ್ರಭಾಸ್ ಅವರೊಂದಿಗೆ ಯಶ್ ರಾಜ್ ಫಿಲ್ಮ್ ಬ್ಯಾನರ್ ಮಾತುಕತೆ ನಡೆಸಿದೆಯಂತೆ. ಆದರೆ ಇದಕ್ಕೆ ಪ್ರಭಾಸ್ ಅವರು ಇನ್ನೂ ಹಸಿರು ನಿಶಾನೆ ತೋರಿಸಿಲ್ಲ.

ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಈಗಾಗಲೇ 'ಬಾಹುಬಲಿ 2' ಚಿತ್ರದ ಚಿತ್ರೀಕರಣಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಸದ್ಯಕ್ಕೆ ಪ್ರಭಾಸ್ ಕೂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ ಇದೀಗ ಬಾಲಿವುಡ್ ಕ್ಷೇತ್ರಕ್ಕೆ ಎಂಟ್ರಿ ಪಡೆಯಲು ನಟ ಪ್ರಭಾಸ್ ಅವರಿಗೆ ಆಫರ್ ಬಂದಿದ್ದು, ಇದನ್ನು ಸ್ವೀಕರಿಸುತ್ತಾರೋ ಅಥವಾ ಕೈ ಬಿಡುತ್ತಾರ ಅಂತ ಕಾದು ನೋಡಬೇಕು.

More from Filmibeat

English summary
'Baahubali' star Tollywood actor, Prabhas has been offered the role to play a bad-ass villain in the Dhoom franchise along with Hrithik Roshan, bypassing in-house Bollywood hunks like Ranveer Singh, Randeep Hooda etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X