For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಹೊಸ ಸಿನಿಮಾಕ್ಕೆ ಮುಹೂರ್ತ: ಗುಟ್ಟು ಬಿಟ್ಟುಕೊಟ್ಟ ಅಮಿತಾಬ್ ಬಚ್ಚನ್!

  |

  ನಟ ಪ್ರಭಾಸ್ ನಟನೆಯ ಹೊಸ ಸಿನಿಮಾಕ್ಕೆ ಮುಹೂರ್ತ ಕಾರ್ಯ ಇಂದು ನೆರವೇರುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗೊಂದು ಸುದ್ದಿ ಹರಿದಾಡಲು ಅಮಿತಾಬ್ ಬಚ್ಚನ್ ಮಾಡಿರುವ ಟ್ವಿಟ್ ಕಾರಣ.

  ಪ್ರಸ್ತುತ, 'ಸಲಾರ್' ಹಾಗೂ 'ಆದಿಪುರುಷ್' ಸಿನಿಮಾಗಳಲ್ಲಿ ನಟಿಸುತ್ತಿರುವ ನಟ ಪ್ರಭಾಸ್, ತಮ್ಮ ಮುಂದಿನ ಸಿನಿಮಾವನ್ನು ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ ಜೊತೆಗೆ ಮಾಡಲಿದ್ದಾರೆ. ಆ ಸಿನಿಮಾದ ಮುಹೂರ್ತ ಇಂದು ನೆರವೇರುತ್ತಿದೆ ಎನ್ನಲಾಗುತ್ತಿದೆ.

  ನಿನ್ನೆ ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ''ಹೊಸ ಸಿನಿಮಾದ ಮುಹುರ್ತ ಕಾರ್ಯಕ್ರಮಕ್ಕೆಂದು ಪ್ರಯಾಣ ಮಾಡಿದೆ. ಹೊಸತು ಯಾವಾಗಲೂ ಉತ್ಸಾಹ ತುಂಬುತ್ತದೆ. 'ಹೊಸತು' ಎಂಬುದು ಹಳತಾಗುವುದಿಲ್ಲ'' ಎಂದಿದ್ದಾರೆ.

  ಅಮಿತಾಬ್ ಬಚ್ಚನ್ ಪ್ರಯಾಣ ಬೆಳೆಸಿರುವುದು ಪ್ರಭಾಸ್ ಜೊತೆಗಿನ ಸಿನಿಮಾದ ಮುಹೂರ್ತಕ್ಕೆ ಎನ್ನಲಾಗುತ್ತಿದೆ.

  ಪ್ರಭಾಸ್ ಹಾಗೂ ಅಮಿತಾಬ್ ಬಚ್ಚನ್ ಒಟ್ಟಿಗೆ ನಟಿಸುತ್ತಿರುವ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸಹ ನಟಿಸುತ್ತಿದ್ದಾರೆ. ಸಿನಿಮಾವನ್ನು 'ಮಹಾನಟಿ' ನಿರ್ದೇಶಿಸಿದ್ದ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವು ಪೌರಾಣಿಕ ಹಾಗೂ ಫ್ಯಾಂಟಸಿ ಕತೆಯನ್ನು ಒಳಗೊಂಡಿರಲಿದೆ.

  ಅಮಿತಾಬ್ ಬಚ್ಚನ್‌ಗೆ ತೆಲುಗು ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಮೊದಲು ಕೆಲವು ತೆಲುಗು ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ', ನಾಗಾರ್ಜುನ ನಟನೆಯ 'ಮನಂ' ಸಿನಿಮಾದಲ್ಲಿ ಬಚ್ಚನ್ ಕಾಣಿಸಿಕೊಂಡಿದ್ದಾರೆ.

  ಆದರೆ ದೀಪಿಕಾ ಪಡುಕೋಣೆಗೆ ಇದು ಮೊದಲ ತೆಲುಗು ಸಿನಿಮಾ ಆಗಲಿದೆ. ಈ ಮೊದಲು ಅವರು ದಕ್ಷಿಣ ಭಾರತದ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ.

  English summary
  Prabhas, Amitabh Bachchan, Deepika Padukone's Telugu movie may start soon. Nag Ashwin directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X