Prabhas- Nayanthara: ಶಿವ-ಪಾರ್ವತಿಯಾಗಿ ಪ್ರಭಾಸ್- ನಯನತಾರಾ? ಯಾವ ಸಿನ್ಮಾ? ಏನ್ ಕತೆ?

ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. 'ಕಲ್ಕಿ' ಜೊತೆಗೆ ಮತ್ತೆರಡು ಸಿನಿಮಾಗಳಿಗೆ ಯಂಗ್ ರೆಬಲ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಭಾಸ್ ಇತ್ತೀಚೆಗೆ ಅಭಿಮಾನಿಗಳಿಗೆ ಕ್ರೇಜಿ ನ್ಯೂಸ್ ಕೊಟ್ಟಿದ್ದರು. 'ಕಣ್ಣಪ್ಪ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಡಾರ್ಲಿಂಗ್ ನಟಿಸುವ ಮಾಹಿತಿ ಸಿಕ್ಕಿತ್ತು.

ಮೋಹನ್ ಬಾಬು ಬಹುಕೋಟಿ ವೆಚ್ಚದಲ್ಲಿ 'ಕಣ್ಣಪ್ಪ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪುತ್ರ ಮಂಚು ವಿಷ್ಣು ಭಕ್ತ ಕಣ್ಣಪ್ಪನಾಗಿ ನಟಿಸಲಿದ್ದಾರೆ. ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಮಾಡಿದ್ದ 'ಬೇಡರ ಕಣ್ಣಪ್ಪ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದೇ ಕತೆ ಬಳಿಕ ತೆಲುಗಿನಲ್ಲೂ ಸಿನಿಮಾ ಆಗಿ ಬಂದಿತ್ತು. ಇವತ್ತಿನ ತಂತ್ರಜ್ಞಾನದಲ್ಲಿ ಆ ಕತೆಯನ್ನು ಹೊಸ ರೂಪದಲ್ಲಿ ಮತ್ತೆ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಬಾಲಿವುಡ್ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Prabhas-Nayanthara-as-shiva-parvathi-in-Kannappa

ಇತ್ತೀಚೆಗಷ್ಟೆ ಕಾಳಹಸ್ತಿಯಲ್ಲಿ ಪೂಜೆ ನೆರವೇರಿಸಿ 'ಕಣ್ಣಪ್ಪ' ಚಿತ್ರಕ್ಕೆ ಚಾಲನೆ ಕೊಡಲಾಗಿತ್ತು. ಚಿತ್ರದ ಬಹುತೇಕ ಚಿತ್ರೀಕರಣ ನ್ಯೂಜಿಲೆಂಡ್‌ನಲ್ಲಿ ನಡೆಯಲಿದೆ. 8 ಕಂಟೇನರ್‌ಗಳಲ್ಲಿ ಚಿತ್ರೀಕರಣಕ್ಕೆ ಬೇಕಾದ ಪರಿಕರಗಳನ್ನು ಅಲ್ಲಿಗೆ ಸಾಗಿಸಲಾಗುತ್ತಿದೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಈ ಭಕ್ತಿಪ್ರಧಾನ ಸಿನಿಮಾ ಮೂಡಿ ಬರಲಿದೆ. ಪ್ರಭಾಸ್ ಈ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಚಿಕ್ಕಪ್ಪ ಕೃಷ್ಣಂರಾಜು ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಪ್ರಭಾಸ್ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ಶಿವನ ಪಾತ್ರದಲ್ಲಿ ನಟಿಸುವ ಬಗ್ಗೆ ಸುಳಿವು ಸಿಗುತ್ತಿದೆ. ಇದು ಬೇಡರ ಕಣ್ಣಪ್ಪನ ಕತೆ. ಮುಗ್ಧ ಭಕ್ತ ಭಕ್ತಿಗೆ ಮೆಚ್ಚಿ ಸಾಕ್ಷಾತ್ ಪರಮಶಿವನೇ ಪ್ರತ್ಯಕ್ಷನಾಗುತ್ತಾನೆ. ಹಾಗಾಗಿ ಕಣ್ಣಪ್ಪ ಬಿಟ್ಟರೆ ಶಿವನ ಪಾತ್ರವೇ ಹೈಲೆಟ್. ಇದೇ ಪಾತ್ರದಲ್ಲಿ ಪ್ರಭಾಸ್ ನಟಿಸೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಈ ಹಿಂದೆ 'ಆದಿಪುರುಷ್' ಚಿತ್ರದಲ್ಲಿ ರಾಮನಾಗಿ ನಟಿಸಿದ್ದರು. 'ಕಲ್ಕಿ' ಚಿತ್ರದಲ್ಲಿ ಶ್ರೀವಿಷ್ಣು ಆಗಿ ಯಂಗ್ ರೆಬಲ್ ಸ್ಟಾರ್ ಬಣ್ಣ ಹಚ್ಚಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

Prabhas-Nayanthara-as-shiva-parvathi-in-Kannappa

ಪ್ರಭಾಸ್ ಶಿವನಾಗಿ ನಟಿಸಿದರೆ ಪಾರ್ವತಿ ಯಾರು? ಎನ್ನುವ ಪ್ರಶ್ನೆ ಮೂಡುವುದು ಸಹಜ. ನಯನತಾರ ಆ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಹೌದು, ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್ ಹಾಗೂ ನಯನತಾರಾ ಶಿವ-ಪಾರ್ವತಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಟಿಸುತ್ತಿರುವುದು ಪಕ್ಕಾ ಆಗಿದೆ. 16 ವರ್ಷಗಳ ಹಿಂದೆ 'ಯೋಗಿ' ಚಿತ್ರದಲ್ಲಿ ಪ್ರಭಾಸ್- ನಯನ್ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಬಾಲಿವುಡ್ ನಟಿ ಮಧು ಸೌತ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಆಕೆ "ನಾನು ಪ್ರಭಾಸ್, ನಯನತಾರಾ, ಮಂಚು ವಿಷ್ಣು ನಟಿಸುತ್ತಿರುವ ಕಣ್ಣಪ್ಪ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದೇವೆ" ಎಂದಿದ್ದಾರೆ. ಅಲ್ಲಿಗೆ ನಯನತಾರಾ ಈ ಚಿತ್ರದಲ್ಲಿ ನಟಿಸೋದು ಖಚಿತವಾಗಿದೆ. ಯಾವ ಪಾತ್ರ ಎನ್ನುವ ಪ್ರಶ್ನೆಗೆ ಪಾರ್ವತಿ ಎನ್ನುವ ಉತ್ತರ ಅಭಿಮಾನಿಗಳಿಂದ ಕೇಳಿಬರ್ತಿದೆ.

'ಶ್ರೀರಾಮರಾಜ್ಯಂ' ಚಿತ್ರದಲ್ಲಿ ನಯನತಾರಾ ಸೀತಾಮಾತೆಯ ಪಾತ್ರದಲ್ಲಿ ಮೋಡಿ ಮಾಡಿದ್ದರು. ಇನ್ನು ತಮಿಳಿನ 'ಮೂಕುಟ್ಟಿ ಅಮ್ಮನ್' ಚಿತ್ರದಲ್ಲಿ ದೇವಿಯಾಗಿ ನಟಿಸಿ ನೋಡುಗರ ಮನಗೆದ್ದಿದ್ದರು. ಪಾರ್ವತಿ ಪಾತ್ರಕ್ಕೆ ನಯನತಾರಾ ಸೂಕ್ತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕನ್ನಡದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದ 'ಜೋಗಿ' ತೆಲುಗು ರೀಮೆಕ್ 'ಯೋಗಿ' ಚಿತ್ರದಲ್ಲಿ ಈ ಹಿಂದೆ ಪ್ರಭಾಸ್, ನಯನ್ ಒಟ್ಟಿಗೆ ಕಾಣಿಸಿಕೊಂಡಿದ್ದರು.

More from Filmibeat

English summary
Prabhas, Nayanthara will be playing as Lord Shiva and Parvati devi in Kannappa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X