For Quick Alerts
  ALLOW NOTIFICATIONS  
  For Daily Alerts

  100 ಕೋಟಿ ಗಡಿ ದಾಟಿದ ಪ್ರಭಾಸ್: ಸಲ್ಲು, ಅಕ್ಷಯ್ ಹಿಂದಿಕ್ಕಿದ ಬಾಹುಬಲಿ!

  |

  ಭಾರತೀಯ ಸಿನಿಮಾರಂಗದ ಸ್ಟಾರ್‌ ನಟರ ಪಟ್ಟಿಯಲ್ಲಿ ನಟ ಪ್ರಭಾಸ್ ಮುಂಚೂಣಿಯಲ್ಲಿ ಇದ್ದಾರೆ. ಪ್ರಭಾಸ್‌ಗೆ ಭಾರತದ ಗಡಿ ದಾಟಿ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಬಾಹುಬಲಿ ಚಿತ್ರದ ಬಳಿಕ ಪ್ರಭಾಸ್ ಪ್ರಭಾವ ವಿಶ್ವ ಮಟ್ಟಕ್ಕೆ ಏರಿದೆ.

  ಪ್ರಭಾಸ್ ತಮ್ಮ ಸಿನಿಮಾಗಳ ಮೂಲಕ ದಾಖಲೆ ಮಾಡುವುದು ಹೊಸದೇನಲ್ಲ. ಅವರ ಸಿನಿಮಾ ಒಂದು ರಿಲೀಸ್‌ ಆದರೆ ಸಾಕು, ಸಾಲು ಸಾಲು ದಾಖಲೆ ಮಾಡಿ ಬಿಡುತ್ತದೆ. ಸದ್ಯ ಪ್ರಭಾಸ್ ತಮ್ಮ ಸಂಭಾವನೆ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿ ಆಗುತ್ತಾ ಇದ್ದಾರೆ.

  ಇದೀಗ ಪ್ರಭಾಸ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ಈ ಹಿಂದೆ 100 ಕೋಟಿ ಸಂಭಾವನೆ ಪಡೆದು ಸುದ್ದಿ ಆಗಿದ್ದ ಪ್ರಭಾಸ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

  ಪ್ರಸ್ತುತ ಪ್ರಭಾಸ್ ಸಂಭಾವನೆ 150 ಕೋಟಿ?

  ಪ್ರಸ್ತುತ ಪ್ರಭಾಸ್ ಸಂಭಾವನೆ 150 ಕೋಟಿ?

  ಸೂಪರ್ ಸ್ಟಾರ್ ಪ್ರಭಾಸ್ ತಮ್ಮ ಪ್ರತಿಭೆ ಮತ್ತು ಅದ್ಭುತ ನಟನೆಯಿಂದ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟ ಆಗಿದ್ದರೂ ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಚರ್ಚೆಗೆ ಗ್ರಾಸವಾಗಿದ್ದಾರೆ. ಒಟ್ಟಿನಲ್ಲಿ ಪ್ರಭಾಸ್ ಭಾರತದ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರು. ಇದೀಗ ಪ್ರಭಾಸ್ ಬಗ್ಗೆ ದೊಡ್ಡ ಸುದ್ದಿ ಹೊರ ಬಿದ್ದಿದೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಪ್ರಭಾಸ್.

  ಬಾಲಿವುಡ್‌ ಅಂಗಳದಲ್ಲಿ ಪ್ರಭಾಸ್ ಸಂಭಾವನೆ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ನಿರ್ದೇಶಿಸಲಿರುವ 'ಸ್ಪಿರಿಟ್' ಚಿತ್ರಕ್ಕಾಗಿ ಪ್ರಭಾಸ್ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಜೊತೆಗೆ 'ಆದಿ ಪುರುಷ್' ಚಿತ್ರಕ್ಕೂ ಕೂಡ ಪ್ರಭಾಸ್ 150 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಪ್ರಭಾಸ್ ಅತಿಹೆಚ್ಚು ಸಂಭಾವನೆ ಪಡೆದ ಭಾರತೀಯ ಏಕೈಕ ನಟ ಎನಿಸಿಕೊಂಡಿದ್ದಾರೆ.

  ಪ್ರಭಾಸ್‌ಗೆ 150 ಕೋಟಿ ಕೊಟ್ಟ ನಿರ್ಮಾಪಕ!

  ಪ್ರಭಾಸ್‌ಗೆ 150 ಕೋಟಿ ಕೊಟ್ಟ ನಿರ್ಮಾಪಕ!

  ಪ್ರಭಾಸ್ ಅಭಿನಯದ ರಾಧೆ ಶ್ಯಾಮ್, ಸಲಾರ್, ಆದಿಪುರುಷ್, ಪ್ರಾಜೆಕ್ಟ್ ಕೆ ಮತ್ತು ಸ್ಪಿರಿಟ್ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಇವುಗಳಲ್ಲಿ ರಾಧೆ ಶ್ಯಾಮ್, ಆದಿಪುರುಷ್, ಚಿತ್ರಗಳನ್ನು ಭೂಷಣ್ ಕುಮಾರ್ ನಿರ್ಮಿಸುತ್ತಿದ್ದಾರೆ.

  ಭೂಷಣ್ ಕುಮಾರ್ ಅವರು ಬಾಲಿವುಡ್‌ನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರು. ಅವರು ಈಗ ದೊಡ್ಡ ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡಲು ಹೊರಟಿದ್ದಾರೆ. ಹಾಗಾಗಿ ಪ್ರಭಾಸ್ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಮುಂದೆ ಪ್ರಭಾಸ್ ಜೊತೆಗೆ ಸಾಲು ಸಾಲು ಸಿನಿಮಾ ಮಾಡುವ ಯೋಜನೆಯಲ್ಲಿ ಇದ್ದಾರಂತೆ, ಹಾಗಾಗಿ ಆದಿಪುರುಷ್‌ ಚಿತ್ರಕ್ಕಾಗಿ ಅತಿ ಹೆಚ್ಚು ಸಂಭಾವನೆ ನೀಡಲು ಹಿಂಜರಿಯಲಿಲ್ಲ ಎನ್ನಲಾಗಿದೆ.

  ಸಲ್ಮಾನ್ ಖಾನ್, ಅಕ್ಷಯ್‌ಕುಮಾರನ್ನು ಮೀರಿಸಿದ ಪ್ರಭಾಸ್!

  ಸಲ್ಮಾನ್ ಖಾನ್, ಅಕ್ಷಯ್‌ಕುಮಾರನ್ನು ಮೀರಿಸಿದ ಪ್ರಭಾಸ್!

  ಪ್ರಭಾಸ್ 10 ವರ್ಷಗಳಲ್ಲಿ 100 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಮೂರನೇ ದೊಡ್ಡ ನಟ. ಈ ಹಿಂದೆ 'ಸುಲ್ತಾನ್' ಮತ್ತು 'ಟೈಗರ್ ಜಿಂದಾ ಹೈ' ಚಿತ್ರಗಳಿಗೆ ಸಲ್ಮಾನ್ ಖಾನ್ 100 ಕೋಟಿ ಪಡೆದಿದ್ದರು. ಇನ್ನು ಅಕ್ಷಯ್ ಕುಮಾರ್ 'ಬೆಲ್ ಬಾಟಮ್' ಚಿತ್ರಕ್ಕಾಗಿ 100 ಕೋಟಿ ರೂ. ಸಂಭಾವನೆ ಪಡೆದಿದ್ದರು. ಇದೀಗ ಪ್ರಭಾಸ್ 100 ಕೋಟಿಯ ಗಡಿ ದಾಟಿದ್ದಾರೆ. ಸದ್ಯ ತಮ್ಮ ಮುಂದಿನ ಚಿತ್ರಗಳಿಗೆ 150 ಕೋಟಿ ಸಂಭಾವನೆ ಪಡೆದಿರೋದಾಗಿ ಸುದ್ದಿ ಆಗಿದ್ದಾರೆ. ಆದರೆ ಈ ವಿಚಾರವನ್ನು ಚಿತ್ರ ತಂಡಗಳು ಅಥವಾ ಪ್ರಭಾಸ್ ಅಧಿಕೃತ ಮಾಡಬೇಕಷ್ಟೆ.

  ಪ್ರಭಾಸ್ ಕೈಯಲ್ಲಿ 5 ದೊಡ್ಡ ಚಿತ್ರಗಳು!

  ಪ್ರಭಾಸ್ ಕೈಯಲ್ಲಿ 5 ದೊಡ್ಡ ಚಿತ್ರಗಳು!

  ಪ್ರಭಾಸ್‌ ಅಭಿನಯದ 'ರಾಧೆ ಶ್ಯಾಮ್' ಮುಂದಿನ ವರ್ಷ ಜನವರಿ 14 ರಂದು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಹೊರತು ಪಡಿಸಿದರೆ, ಪ್ರಭಾಸ್ ಇನ್ನೂ ನಾಲ್ಕು ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಆದಿಪುರುಷ್, ಸಲಾರ್, ಸ್ಪಿರಿಟ್ ಮತ್ತು ಪ್ರಾಕೆಕ್ಟ್ ಕೆ ಚಿತ್ರಗಳ ಕೆಲಸಗಳು ಸಾಗಿವೆ. ಒಟ್ಟಾರೆ ಪ್ರಭಾಸ್ ಸಂಭಾವನೆ ವಿಚಾರ ಒಂದು ಕಡೆ ಆದರೆ. ಮುಂದಿನ ವರ್ಷದಿಂದ ಪ್ರಭಾಸ್ ಅಭಿನಯದ ಸಾಲು ಸಾಲು ಸಿನಿಮಾಗಳು ತೆರೆಗೆ ಬರುವ ಖುಷಿ ಅಭಿಮಾನಿಗಳಿಗೆ ಇದೆ.

  English summary
  Prabhas becomes India's highest paid actor. Actor charged a flat of Rs 150 crore for being a part of Sandeep Reddy's film Spirit. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X