'ಕೆಜಿಎಫ್' ದಾರಿಯಲ್ಲಿ ಪ್ರಭಾಸ್ 'ಪ್ರಾಜೆಕ್ಟ್ ಕೆ'!

ಸದ್ಯಕ್ಕಂತೂ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಹವಾ. ದೊಡ್ಡ ಮಟ್ಟದಲ್ಲಿ ತೆರೆಗೆ ಬಂದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡಿವೆ. ಹಾಗಾಗಿ ಈಗ ಯಾವುದೇ ದೊಡ್ಡ ಸ್ಟರ್‌ ನಟರ ಸಿನಿಮಾಗಳು ಬರ್ತಿವೆ ಅಂದ್ರೆ ಅದು ಪ್ಯಾನ್ ಇಂಡಿಯಾ ಆಗಿರಲಿದೆಯಾ ಎನ್ನುವ ಪ್ರಶ್ನೆ ಹುಟ್ಟುತ್ತದೆ.

ಯಾಕೆಂದರೆ ಕನ್ನಡದ 'ಕೆಜಿಎಫ್' ಸಿನಿಮಾ 2 ಭಾಗಗಳಲ್ಲಿ ಪ್ಯಾನ್ ಇಂಡಿಯಾ ತೆರೆಗೆ ಬಂದು ಸೂಪರ್ ಹಿಟ್ ಆದ ಸಿನಿಮಾ. ಬಾಕ್ಸಾಫೀಸ್ ಗಳಿಕೆಯನ್ನು ಪಕ್ಕಕ್ಕೆ ಇಟ್ಟರೆ, ಭಾರತದಾದ್ಯಂತ ಸಿನಿಮಾ ತೆರೆಕಂಡು, ಜನ ಮನ ಗೆದ್ದಿಗೆ ಎನ್ನವುದು ಮುಖ್ಯ ಅಂಶ.

ಈಗ ನಟ ಪ್ರಭಾಸ್ ಕೂಡ ಇದೇ ಹಾಡಿಯಲ್ಲಿ ಇದ್ದಾರೆ. ಈ ಹಿಂದೆ ನಟ ಪ್ರಭಾಸ್ ಅಭಿನಯದ ಬಾಹುಬಲಿ 2 ಭಾಗಗಳಲ್ಲಿ ಬಂದು ಹಿಟ್ ಲಿಸ್ಟ್ ಸೇರಿದೆ. ಆದರೆ ಬಾಹುಬಲಿಯ ಹಿಂದೆ ರಾಜಮೌಳಿ ಮತ್ತು ಭಿನ್ನ ಮೇಕಿಂಗ್, ಭಿನ್ನ ಕತೆ ಇತ್ತು. ಆದರೆ ಸಹಜತೆಯೊಂದಿಗೆ ಬಂದ 'ಕೆಜಿಎಫ್' ಗೆದ್ದಿದ್ದು ಎಲ್ಲರಿಗೂ ಉತ್ತಮ ಉದಾಹರಣೆ. ಹಾಗಾಗಿ ನಟ ಪ್ರಭಾಸ್ ಈಗ 'ಕೆಜಿಎಫ್' ದಾರಿಯನ್ನು ಹಿಡಿದ್ದಾರೆ.

ಕೆಜಿಎಫ್ ಹಾದಿಯಲ್ಲಿ 'ಪ್ರಾಜೆಕ್ಟ್ ಕೆ'!

ಕೆಜಿಎಫ್ ಹಾದಿಯಲ್ಲಿ 'ಪ್ರಾಜೆಕ್ಟ್ ಕೆ'!

ನಟ ಪ್ರಭಾಸ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಆದಿಪುರುಷ್', 'ಸಲಾರ್', 'ಪ್ರಾಜೆಕ್ಟ್ ಕೆ' ಸಿನಿಮಾಗಳಲ್ಲಿ ಸದ್ಯ ಪ್ರಭಾಸ್ ಬ್ಯುಸಿಯಾಗದ್ದಾರೆ. ಈ ಹಿಂದೆ ಸೋಲುಂಡ ಪ್ರಭಾಸ್ ಮುಂದಿನ ಸಿನಿಮಾಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಪ್ರಭಾಸ್ ಈ ಮೂರು ಸಿನಿಮಾಗಳು ಕೂಡ ನಿರೀಕ್ಷೆಯುಳ್ಳ ಸಿನಿಮಾಗಳೆ. ಅದರಲ್ಲೂ ಪ್ರಾಜೆಕ್ಟ್ ಕೆ ಸಿನಿಮಾ ಫ್ಯಾಂಟಸಿ ಲೋಕವನ್ನು ತೆರೆದಿಡುವ ಕಥೆ. ಈಗ ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎನ್ನುವ ಅಪ್ಡೇಟ್ ಬಂದಿದೆ.

2 ಭಾಗಗಳಲ್ಲಿ ಪ್ರಾಜೆಕ್ಟ್ ಕೆ!

2 ಭಾಗಗಳಲ್ಲಿ ಪ್ರಾಜೆಕ್ಟ್ ಕೆ!

ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಸಿನಿಮಾವನ್ನು, 'ಮಹಾನಟಿ' ಸಿನಿಮಾ ಮಾಡಿದ್ದ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಹೊಸ ಅಪ್ಡೇಟ್ ಹೊರ ಬಂದಿದ್ದು, ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎನ್ನಲಾಗುತ್ತಿದೆ. ಹಾಗಾಗಿ ಈ ಚಿತ್ರದ ಮೊದಲ ಭಾಗದ ಕ್ಲೈಮ್ಯಾಕ್ಸ್ ಅತ್ಯಂತ ರೋಚಕವಾಗಿರಲಿದೆ. ಎರಡನೇ ಭಾಗಕ್ಕೂ ಚಿತ್ರದ ಮೊದಲ ಭಾಗಕ್ಕೂ ಕನೆಕ್ಷನ್ ಇರಲಿದೆಯಂತೆ. ಹಾಗಾಗಿ ಈ ಚಿತ್ರವನ್ನು ದೊಡ್ಡಮಟ್ಟದಲ್ಲಿ ತೆರೆಗೆ ಬರಲು ಯೋಜನೆಗಳು ನಡೆಯುತ್ತಿವೆ.

ಪ್ರಭಾಸ್ ಜೊತೆಗೆ ದೀಪಿಕಾ ನಟನೆ!

ಪ್ರಭಾಸ್ ಜೊತೆಗೆ ದೀಪಿಕಾ ನಟನೆ!

ಪ್ರಾಜೆಕ್ಟ್ ಕೆ ಸಿನಿಮಾದ ಟೈಟಲ್ ಬಗ್ಗೆಯೂ ಸಾಕಷ್ಟು ಕುತೂಹಲ ಇದೆ. ಇದು ತಾತ್ಕಾಲಿವಾದ ಟೈಟಲ್, ಹಾಗಾಗಿ ನಿಜವಾದ ಟೈಟಲ್ ಯಾವಾಗ ಲಾಂಚ್ ಆಗಲಿದೆ ಎನ್ನುವುದನ್ನು ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಇನ್ನು ಸಿನಿಮಾ ಎರಡು ಭಾಗಗಳಲ್ಲಿ ಬರ್ತಿದೆ ಎಂದರೆ ಉತ್ತಮ ಟೈಟಲ್ ಇಡುವುದು ಕೂಡ ಮುಖ್ಯ ಆಗುತ್ತದೆ. ಪ್ರಭಾಸ್ ಜೊತೆಗೆ ನಟಿ ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಇಬ್ಬರೂ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2024ಕ್ಕೆ ಸಿನಿಮಾ ರಿಲೀಸ್!

2024ಕ್ಕೆ ಸಿನಿಮಾ ರಿಲೀಸ್!

ನಟ ಪ್ರಭಾಸ್ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಅವರ ಸಿನಿಮಾ ರಿಲೀಸ್ ದಿನಾಂಕದಲ್ಲಿ ಸಾಕಷ್ಟು ವ್ಯತ್ಯಾಸಗಳು ಆಗಲಿವೆ. ಹಲವು ಬಾರಿ ಪೋಸ್ಟ್ ಪೋನ್ ಆದ ಸಲಾರ್ ಸಿನಿಮಾ, 2023 ಸೆಪ್ಟೆಂಬರ್‌ನಲ್ಲಿ ತೆರೆಕಾಲಿದೆ. ಇನ್ನು ಪ್ರಾಜೆಕ್ಟ್ ಕೆ ಸಿನಿಮಾ 2023ರ ಅಂತ್ಯದಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಸಲಾರ್ ರಿಲೀಸ್ ಇರುವ ಕಾರಣಕ್ಕೆ ಬಹುಶಃ ಈ ಚಿತ್ರ 2024ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
Prabhas, Deepika Padukone Starrer Project K to be released in 2 parts, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X