ಇದೇ ವರ್ಷ ನಟ ಪ್ರಭಾಸ್ ಮದುವೆ: ಮತ್ತೆ ಮದುವೆ ಸುದ್ದಿಯಲ್ಲಿ ಡಾರ್ಲಿಂಗ್ ಕಲ್ಯಾಣ
ನಟ ಪ್ರಭಾಸ್ ಗೆ ದೊಡ್ಡ ಹೆಸರು ಕೊಟ್ಟ ಚಿತ್ರವೆಂದರೆ ಅದು 'ಬಾಹುಬಲಿ'. ಬಾಹುಬಲಿ ಸಿನಿಮಾದಲ್ಲಿ ನಟಿಸಿದ ನಂತರ ಪ್ರಭಾಸ್ ಪ್ಯಾನ್ ಇಂಡಿಯಾ ಹೀರೊ ಆದರು. ಪೌರಾಣಿಕ ವೇಷದಲ್ಲಿ ಅದ್ಭುತವಾಗಿ ಕಾಣಿಸುವ ಪ್ರಭಾಸ್ 'ಬಾಹುಬಲಿ' ಬಳಿಕ ಸಾಹೋ ಸಿನಿಮಾದಲ್ಲಿ ನಟಿಸಿದರು.
ಆದರೆ 'ಸಾಹೋ' ಚಿತ್ರ ನಿರಾಸೆ ಮೂಡಿಸಿತು. 'ಸಾಹೋ' ನಂತರ ಪ್ರೀತಿ, ಪ್ರೇಮ, ತ್ಯಾಗದ ಕಥೆ ಹೇಳುವ 'ರಾಧೆ ಶ್ಯಾಮ್' ಸಿನಿಮಾದಲ್ಲಿ ಬಣ್ಣ ಹಚ್ಚಿದರು. ದುರಾದೃಷ್ಟವಶಾತ್ 'ರಾಧೆ ಶ್ಯಾಮ್' ಚಿತ್ರ ಕೂಡ ಪ್ರಭಾಸ್ ಅವರ ಕೈ ಹಿಡಿಯಲಿಲ್ಲ. 'ರಾಧೆ ಶ್ಯಾಮ್' ದೊಡ್ಡ ಮಟ್ಟದಲ್ಲಿ ಸೋಲುಂಡಿದೆ. 'ರಾಧೆ ಶ್ಯಾಮ್' ಸಿನಿಮಾ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ಪ್ರಭಾಸ್ ಗೆ ತುಂಬಾ ಬೇಸರವಾಗಿತ್ತು.
ಸದ್ಯ ಪ್ರಭಾಸ್ ತಮ್ಮ ಮುಂದಿನ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದೇ, ಪ್ರಶಾಂತ್ ನೀಲ್ ನಿರ್ದೇಶನ 'ಸಲಾರ್' ಚಿತ್ರ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರ ಅಭಿಮಾನಿಗಳೂ ಕೂಡ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸದ್ಯ 'ಸಲಾರ್' ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಈ ನಡುವೆ ಪ್ರಭಾಸ್ ಮದುವೆ ಬಗ್ಗೆಯೂ ಮತ್ತೆ ಸುದ್ದಿ ಹಬ್ಬಿದೆ. ಪ್ರಭಾಸ್ ತಮ್ಮ ದಾಂಪತ್ಯ ಜೀವನದ ಬಗ್ಗೆ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರಂತೆ. ಈ ವರ್ಷಾಂತ್ಯದೊಳಗೆ ಪ್ರಭಾಸ್ ಮದುವೆಯಾಗಲಿದ್ದಾರಂತೆ. ಅದೂ ಕೂಡ ತಮ್ಮ ಮನೆಯಲ್ಲಿ ತೋರಿಸಿದ ಹುಡುಗಿಯನ್ನೇ ಮದುವೆಯಾಗಲು ಒಪ್ಪಿದ್ದಾರಂತೆ.

ಆದರೆ ಹುಡುಗಿ ಯಾರು, ಮದುವೆ ಯಾವಾಗ..? ಎಂಬುದು ಮಾತ್ರ ಗುಟ್ಟಾಗಿದೆ. ನಟ ಪ್ರಭಾಸ್ ಮದುವೆ ಈ ವರ್ಷದಲ್ಲಿ ನಡೆಯಲಿದೆ ಎನ್ನುವ ಗುಸು ಗುಸು ಟಾಲಿವುಡ್ ನಲ್ಲಿ ಹಬ್ಬಿದೆ. ಈ ಹಿಂದೆ ಹಲವು ಬಾರಿ ಪ್ರಭಾಸ್ ಮದುವೆ ವಿಚಾರ ಸದ್ದು ಮಾಡಿದೆ. ಅನುಷ್ಕಾ ಶೆಟ್ಟಿ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ. ಈಗ ಮತ್ಯಾರ ಹೆಸರು ಕೇಳಿ ಬರುತ್ತೆ ಅಂತ ನೋಡಬೇಕು.


Click it and Unblock the Notifications











