For Quick Alerts
  ALLOW NOTIFICATIONS  
  For Daily Alerts

  ಮೇಕಪ್ ಕಲಾವಿದನಿಗೆ ಕೊರೊನಾ: ಕ್ವಾರಂಟೈನ್ ಆದ ಪ್ರಭಾಸ್

  |

  ಟಾಲಿವುಡ್ ನಟ ಪ್ರಭಾಸ್ ಅವರು ತಮ್ಮ ಸಿಬ್ಬಂದಿಯೊಬ್ಬರಿಗೆ ಕೋವಿಡ್ ಸೋಂಕು ತಗುಲಿದ ನಂತರ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಮೇಕಪ್ ಕಲಾವಿದನಿಗೆ ಕೊರೊನಾ ಪತ್ತೆಯಾದ ಹಿನ್ನೆಲೆ ಪ್ರಭಾಸ್ ಮತ್ತು ರಾಧೇ ಶ್ಯಾಮ್ ಚಿತ್ರತಂಡವನ್ನು ಐಸೋಲೇಟ್ ಆಗುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

  ಪ್ರಭಾಸ್ ಅವರು ರಾಧೇ ಶ್ಯಾಮ್ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದಕ್ಕೂ ಮುಂಚೆ ಆದಿಪುರುಷ್ ಚಿತ್ರೀಕರಣದಲ್ಲೂ ಪ್ರಭಾಸ್ ಭಾಗಿಯಾಗಿದ್ದರು.

   'ಆದಿಪುರುಷ್' ಚಿತ್ರತಂಡದಿಂದ ಪ್ರಭಾಸ್ ಅಭಿಮಾನಿಗಳಿಗೆ ಭಾರಿ ನಿರಾಸೆ 'ಆದಿಪುರುಷ್' ಚಿತ್ರತಂಡದಿಂದ ಪ್ರಭಾಸ್ ಅಭಿಮಾನಿಗಳಿಗೆ ಭಾರಿ ನಿರಾಸೆ

  ಸಿಬ್ಬಂದಿಗೆ ಸೋಂಕು ದೃಢಪಟ್ಟ ಬಳಿಕ ರಾಧೇ ಶ್ಯಾಮ್ ಚಿತ್ರೀಕರಣ ಸ್ಥಗಿತಗೊಂಡಿದೆ. ಹಾಡಿನ ಜೊತೆ ಕೆಲವು ಪ್ರಮಖ ದೃಶ್ಯಗಳ ಚಿತ್ರೀಕರಣ ಬಾಕಿಯಿದೆ. ಮೇಕಪ್ ಕಲಾವಿದನಿಗೆ ಕೊರೊನಾ ತಗುಲಿರುವ ಕುರಿತು ಹಾಗೂ ಪ್ರಭಾಸ್ ಕ್ವಾರಂಟೈನ್ ಆಗಿರುವ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.

  ಪ್ರಭಾಸ್ ಅವರು ಸತತವಾಗಿ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್, ಓಂ ರಾವತ್ ನಿರ್ದೇಶನದ ಆದಿಪುರುಷ್ ಹಾಗೂ ರಾಧೇ ಶ್ಯಾಮ್ ಚಿತ್ರೀಕರಣವನ್ನು ಒಟ್ಟೊಟ್ಟಿಗೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

  ಆದಿಪುರುಷ್ ಮತ್ತು ರಾಧೇ ಶ್ಯಾಮ್ ಚಿತ್ರೀಕರಣ ಮುಂಬೈನಲ್ಲೇ ನಡೆಯುತ್ತಿತ್ತು. ಸಲಾರ್ ಸದ್ಯಕ್ಕೆ ಬ್ರೇಕ್ ತೆಗೆದುಕೊಂಡಿದೆ.

  ಈ ನಡುವೆ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ತಮ್ಮ 21ನೇ ಪ್ರಾಜೆಕ್ಟ್ ಆರಂಭಿಸಬೇಕಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದು, ಅಮಿತಾಭ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

  English summary
  Tollywood star Prabhas Goes Into Isolation after His Makeup Artist test Positive for Covid19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X