₹700 ಕೋಟಿ ವೆಚ್ಚದ ಸಿನಿಮಾದಲ್ಲಿ ಪ್ರಭಾಸ್; ಟಾಲಿವುಡ್‌ನಲ್ಲಿ ಗುಲ್ಲೆದ್ದಿರೋ ಆ ಪಾತ್ರ ಯಾವುದು?

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್‌ನಲ್ಲಿ ಮತ್ತೊಂದು ಐತಿಹಾಸಿಕ ಸಿನಿಮಾ 'ರಾಮಾಯಣ' ಶೀಘ್ರದಲ್ಲಿಯೇ ಆರಂಭ ಆಗಲಿದೆ. ರಣ್‌ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಹಲವರು ಹೆಸರುಗಳು ಕೇಳಿಬರುತ್ತಿದೆ. ಈಗಾಗಲೇ ರಾಕಿಂಗ್‌ ಸ್ಟಾರ್ ಯಶ್ ರಾವಣ ಪಾತ್ರದಲ್ಲಿ ನಟಿಸುತ್ತಾರೆ ಅನ್ನುವ ಸುದ್ದಿ ಹಬ್ಬಿರುವ ಬೆನ್ನಲ್ಲೇ ಪ್ರಭಾಸ್ ಹೆಸರು ಕೇಳಿ ಬರುತ್ತಿದೆ.

700 ಕೋಟಿ ರೂಪಾಯಿ ವೆಚ್ಚದಲ್ಲಿ 'ರಾಮಾಯಣ' ನಿರ್ಮಾಣ ಆಗುತ್ತಿರೋ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಒಂದ್ಕಡೆ ಬಜೆಟ್ ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ಸಿನಿಮಾದ ಸ್ಟಾರ್ ಕಾಸ್ಟ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಈ ಸಿನಿಮಾದಲ್ಲಿ ನಟಿಸುತ್ತಿರುವವರ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬೀಳುತ್ತಿದೆ.

Prabhas as Parashuram in Ramayana

ನಿತೀಶ್ ತ್ರಿವೇದಿ ನಿರ್ದೇಶನ ಮಾಡುತ್ತಿರುವ 'ರಾಮಾಯಣ' ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಸಿನಿಮಾದಲ್ಲಿ ಹೊಸ ಹೊಸ ಸ್ಟಾರ್‌ಗಳ ಹೆಸರುಗಳು ಕೇಳಿ ಬರುತ್ತಿವೆ. ಅದರಲ್ಲೀಗ ಹೊಸ ಹೆಸರು ಕೇಳಿ ಬರುತ್ತಿದೆ. ಅದು ಮತ್ತೆ ಇನ್ಯಾರೂ ಅಲ್ಲ ಪ್ರಭಾಸ್. 'ರಾಮಾಯಣ'ದಲ್ಲಿ ಪ್ರಭಾಸ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಅನ್ನೋ ಸುದ್ದು ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

'ಆದಿಪುರುಷ್' ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರು. ಆದರೆ, ಈ ಸಿನಿಮಾ ಹೀನಾಯವಾಗಿ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಸಿನಿಪ್ರಿಯರು ಕೂಡ ಸಿನಿಮಾ ಬಗ್ಗೆ ಅಸಮಧಾನ ಹೊರಹಾಕಿದ್ದರು. ಆದ್ರೀಗ ಪ್ರಭಾಸ್ ಮತ್ತೆ 'ರಾಮಾಯಣ' ಸಿನಿಮಾದಲ್ಲಿ ಬೇರೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಗುಲ್ಲೆದ್ದಿದೆ.

ಈಗಾಗಲೇ 'ರಾಮಾಯಣ'ದಲ್ಲಿ ಶ್ರೀ ರಾಮನಾಗಿ ರಣಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ಜಾಹ್ನವಿ ಕಪೂರ್ ಹೆಸರು ಕೇಳಿಬರುತ್ತಿದೆ. ಇನ್ನು ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೆಸರು ಓಡಾಡುತ್ತಿದೆ. ರಾವಣನ ಸಹೋದರಿ ಶೂರ್ಪಣಕಿಯಾಗಿ ರಾಕುಲ್ ಪ್ರೀತ್ ಸಿಂಗ್, ಕುಂಭಕರ್ಣನಾಗಿ ಬಾಬಿ ಡಿಯೋಲ್ ಅಂತ ನಟರ ಹೆಸರುಗಳು ಓಡಾಡುತ್ತಿವೆ. ಹಾಗಿದ್ರೆ, ಪ್ರಭಾಸ್‌ ಪಾತ್ರವೇನು? ಅನ್ನೋ ಕುತೂಹಲ ಸಹಜ.

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ 'ರಾಮಾಯಣ'ದಲ್ಲಿ ಪರಶುರಾಮನಾಗಿ ನಟಿಸಲಿದ್ದಾರೆ ಅಂತ ಗುಲ್ಲೆದ್ದಿದೆ. ಈ ಸಿನಿಮಾ ಪ್ರಭಾಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಇದೂವರೆಗೂ ನಿರ್ದೇಶಕ ನಿತೇಶ್ ತಿವಾರಿ ಸ್ಟಾರ್‌ಕಾಸ್ಟ್ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ.

ಅಂದ್ಹಾಗೆ, 'ರಾಮಾಯಣ' ಸಿನಿಮಾವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಮೊದಲ ಭಾಗದ ತಯಾರಿ ಈಗಾಗಲೇ ಶುರುವಾಗಿ ಮುಂದಿನ ವರ್ಷ ದೀಪಾವಳಿ ಹಬ್ಬಕ್ಕೆ ಈ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗಿದೆ. ಮೊದಲ ಪಾರ್ಟ್ ರಿಲೀಸ್ ಆದ ಬಳಿಕ ಎರಡನೇ ಭಾಗದ ಬಗ್ಗೆ ಸೆಟ್ಟೇರುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ. ಸಾಕಷ್ಟು ಹೆಸರುಗಳು ಓಡಾಡಿದ್ದರೂ, ಆ ಬಗ್ಗೆ ನಿರ್ದೇಶಕರು ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ. ಹೀಗಾಗಿ ರಾಮಾಯಣ ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ರಾಮಾಯಣ ಏಪ್ರಿಲ್ 17 ರಂದು ಅದ್ಧೂರಿಯಾಗಿ ಘೋಷಣೆಯಾಗುವ ಸಾಧ್ಯತೆಯಿದೆ. ಆದರೆ, ಇದು ಕೂಡ ಬಾಲಿವುಡ್ ಮಂದಿಯ ಬಾಯಲ್ಲಿ ಕೇಳಿ ಬರುತ್ತಿರುವ ಸುದ್ದಿ. ಹೀಗಾಗಿ 'ರಾಮಾಯಣ' ಇನ್ನೂ ಕುತೂಹಲಕಾರಿಯಾಗಿಯೇ ಇದೆ.

More from Filmibeat

English summary
Prabhas in the role of Parushurama in Bollywood-ramayanam: here are the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X