ಪ್ರಭಾಸ್ ಮುಂದಿನ ಸಿನಿಮಾ ಅಜ್ಜ- ಮೊಮ್ಮಗನ ದೆವ್ವದ ಕಥೆ!

ನಟ ಪ್ರಬಾಸ್ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ಬಳಿಕ ಒಂದು ಸಿನಿಮಾವನ್ನು ಶುರುಮಾಡುತ್ತಿದ್ದಾರೆ. ಒಟ್ಟೊಟ್ಟಿಗೆ ಎರಡು, ಮೂರು ಸಿನಿಮಾಗಳಲ್ಲಿ ನಟ ಪ್ರಭಾಸ್ ತೊಡಗಿಸಿಕೊಂಡಿದ್ದಾರೆ. ಬಾಹುಬಲಿ ಚಿತ್ರದ ಬಳಿಕ ಪ್ರಭಾಸ್ ಸಿನಿಮಾ ಅವಕಾಶ ಹೆಚ್ಚಾಗಿದೆ.

ಸದ್ಯಕ್ಕೆ 'ಆದಿಪುರುಷ್', 'ಸಲಾರ್' ಮತ್ತು ಇನ್ನು ಹೆಸರಿಡದ 'ಪ್ರಾಜೆಕ್ಟ್ ಕೆ' ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ 'ಸ್ಪಿರಿಟ್' ಮತ್ತು ಮಾರುತಿ ನಿರ್ದೇಶಿಸಲಿರುವ ಸಿನಿಮಾಗಳು ಇವರ ಕೈಯಲ್ಲಿ ಇವೆ. ಪ್ರಭಾಸ್ ನಟಿಸುತ್ತಿರುವ ಪ್ರಸ್ತುತ ಚಿತ್ರಗಳ ಬಗ್ಗೆ ಹಲವಾರು ಕ್ಲೂ ಸಿಕ್ಕಿವೆ.

ಈಗ ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಸಿನಿಮಾ ಬಗ್ಗೆ ಕುತೂಹಲಕಾರಿ ವಿಚಾರ ಒಂದು ಹೊರ ಬಂದಿದೆ. ಈ ಚಿತ್ರದ ಕತೆ ಏನು ಎನ್ನುವುದು ರಿವೀಲ್ ಆಗಿದೆ. ಈ ವಿಚಾರ ಸಿನಿಮಾದ ಮೇಲೆ ಕುತೂಹಲ ಮೂಡುವಂತೆ ಮಾಡಿದೆ. ಅದೇ ನು ಎನ್ನುವುದನ್ನು ಮುಂದೆ ಓದಿ...

ಹಾರರ್ ಕಾಮಿಡಿ ಕಥೆಯಲ್ಲಿ ಪ್ರಭಾಸ್!

ಹಾರರ್ ಕಾಮಿಡಿ ಕಥೆಯಲ್ಲಿ ಪ್ರಭಾಸ್!

ಬಾಹುಬಲಿ ಸರಣಿ ಸಿನಿಮಾಗಳ ನಂತರ ನಟ ಪ್ರಭಾಸ್ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ಸಲಾರ್', 'ಪ್ರಾಜೆಕ್ಟ್ ಕೆ', 'ಆದಿಪುರುಷ್', ಸಿನಿಮಾಗಳು ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರ ಹೊಂದಿವೆ. ಅದೇ ರೀತಿ ಪ್ರಭಾಸ್ ಮುಂಬರುವ ಸಿನಿಮಾಗಳು ಕೂಡ ಭಿನ್ನ ರೀತಿಯ ಕಥೆಯನ್ನು ಹೊಂದಿದೆ. 'ಸ್ಪಿರಿಟ್' ಸಿನಿಮಾ ಒಂದು ಮಾದರಿಯಾದರೆ, ನಿರ್ದೇಶಕ ಮಾರುತಿ ಜೊತೆಗೆ ಪ್ರಭಾಸ್ ಹಾರರ್ ಕಾಮಿಡಿ ಕಥೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಜ್ಜ- ಮೊಮ್ಮಗನ ಹಾರರ್ ಕಥೆ!

ಅಜ್ಜ- ಮೊಮ್ಮಗನ ಹಾರರ್ ಕಥೆ!

ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಚಿತ್ರಕ್ಕೆ ತಾತ್ಕಾಲಿಕವಾಗಿ 'ರಾಜ ಡೀಲಕ್ಸ್' ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆ. ಈ ಸಿನಿಮಾ ಹಾರರ್ ಕಾಮಿಡಿ ಸಿನಿಮಾವಾಗಿದೆ, ಇದು ಅಜ್ಜ ಮತ್ತು ಮೊಮ್ಮಗನ ಕುರಿತಾದ ಕಥೆ ಎನ್ನುವುದು ಇದೀಗ ಟಾಲಿವುಡ್ ನಲ್ಲಿ ಹರಿದಾಡುತ್ತಿರುವ ಹೊಸ ಸುದ್ದಿ. ಹೌದು ಈ ಹಾರರ್ ಕಾಮಿಡಿಯಲ್ಲಿ ಅಜ್ಜ ಮತ್ತು ಮೊಮ್ಮಗನ ಕಥೆಯನ್ನು ಸ್ವಾರಸ್ಯಕರವಾಗಿ ಹೇಳಲಿದ್ದಾರಂತೆ ನಿರ್ದೇಶಕ ಮಾರುತಿ.

ಡಬಲ್ ರೋಲ್‌ನಲ್ಲಿ ಪ್ರಭಾಸ್?

ಡಬಲ್ ರೋಲ್‌ನಲ್ಲಿ ಪ್ರಭಾಸ್?

ಈ ಚಿತ್ರ ಅಜ್ಜ, ಮೊಮ್ಮಗನ ಕತೆ ಎನ್ನುತ್ತಲೇ ಸಿನಿಮಾದ ಬಗ್ಗೆ ಮತ್ತೊಂದು ಕುತೂಹಲ ಹುಟ್ಟಿಕೊಂಡಿದೆ. ಈ ಚಿತ್ರದಲ್ಲಿ ಅಜ್ಜ ಮತ್ತು ಮೊಮ್ಮಗ ಎರಡು ಪಾತ್ರಗಳಲ್ಲೂ ನಟ ಪ್ರಭಾಸ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೊಮ್ಮಗನ ಕಥೆಯಿಂದ, ಅಜ್ಜನ ಕಥೆಗೆ ಫ್ಲಾಶ್ ಬ್ಯಾಕ್ ಇರಬಹುದು ಎನ್ನುವ ಚರ್ಚೆ ಕೂಡ ಶುರುವಾಗಿದೆ. ಹಾಗಾಗಿ ನಟ ಪ್ರಭಾಸ್ ಈ ಚಿತ್ರದಲ್ಲಿ ಅಜ್ಜನ ವೇಷ ಧರಿಸಲಿದ್ದಾರಾ ಎನ್ನುವ ಕುತೂಹಲ ಕೂಡ ಸೃಷ್ಟಿಯಾಗಿದೆ.

ಹೈದ್ರಾಬಾದ್‌ನಲ್ಲಿ ಸಿನಿಮಾ ಸೆಟ್!

ಹೈದ್ರಾಬಾದ್‌ನಲ್ಲಿ ಸಿನಿಮಾ ಸೆಟ್!

ಇದು ಹಾರರ್ ಸಿನಿಮಾ ಆದ ಕಾರಣ ಈ ಚಿತ್ರಕ್ಕೆ ಸೆಟ್ ಬಹಳ ಮುಖ್ಯವಾಗುತ್ತದೆ. ಈಗಾಗಲೇ ಈ ಚಿತ್ರಕ್ಕಾಗಿ ಹೈದರಾಬಾದ್‌ನಲ್ಲಿ ಬೃಹತ್ ಸೆಟ್ಟನ್ನು ನಿರ್ಮಾಣ ಮಾಡಲಾಗಿದೆಯಂತೆ. ಸೆಟ್ ಕೆಲಸ ಸಂಪೂರ್ಣವಾದ ಬಳಿಕ ಈ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ ನಟ ಪ್ರಭಾಸ್. ಹಾಗಾಗಿ ನಟ ಪ್ರಭಾಸ್ ನಟಿಸಲಿರುವ ಮುಂದಿನ ಸಿನಿಮಾ 'ರಾಜ ಡಿಲಕ್ಸ್' ಎನ್ನುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಕೊಡುವುದು ಬಾಕಿ ಉಳಿದಿದೆ.

More from Filmibeat

English summary
Prabhas, Maruthi Film Secret Reveal: Its a Grandfather, Grandson Story, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X