ಪ್ರಭಾಸ್ ಅಜ್ಜನ ಪಾತ್ರಕ್ಕೆ ಹಾಲಿವುಡ್ ಮೇಕಪ್ ತಂಡ ಆಗಮನ!

ನಟ ಪ್ರಭಾಸ್ ಸದ್ಯ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ಬಳಿಕ ಒಂದು ಸಿನಿಮಾವನ್ನು ಶುರು ಮಾಡುತ್ತಿದ್ದಾರೆ. ಒಟ್ಟೊಟ್ಟಿಗೆ ಎರಡು, ಮೂರು ಸಿನಿಮಾಗಳಲ್ಲಿ ನಟ ಪ್ರಭಾಸ್ ತೊಡಗಿಸಿಕೊಳ್ಳುತ್ತಾರೆ. ಬಾಹುಬಲಿ ಚಿತ್ರದ ಬಳಿಕ ಪ್ರಭಾಸ್ ಸಿನಿಮಾ ಆಯ್ಕೆ ಹೆಚ್ಚಾಗಿದೆ.

ಸದ್ಯಕ್ಕೆ ಆದಿಪುರುಷ್, ಸಲಾರ್ ಮತ್ತು ಪ್ರಾಜೆಕ್ಟ್ ಕೆ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸ್ಪಿರಿಟ್ ಮತ್ತು ನಿರ್ದೇಶಕ ಮಾರುತಿ ಸಿನಿಮಾಗಳು ಇವರ ಕೈಯಲ್ಲಿ ಇವೆ. ಪ್ರಭಾಸ್ ನಟಿಸುತ್ತಿರುವ ಪ್ರಸ್ತುತ ಚಿತ್ರಗಳ ಬಗ್ಗೆ ಹಲವಾರು ಕ್ಲೂ ಸಿಕ್ಕಿವೆ.

ಈಗ ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಸಿನಿಮಾ ಬಗ್ಗೆ ಕುತೂಹಲಕಾರಿ ವಿಚಾರ ಒಂದು ಹೊರ ಬಂದಿದೆ. ಈ ಚಿತ್ರದ ಕತೆ ಏನು ಎನ್ನುವುದು ರಿವೀಲ್ ಆಗಿದೆ. ಜೊತೆಗೆ ನಟ ಪ್ರಭಾಸ್ ಯಾವ ರೀಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕೂಡ ರಿವೀಲ್ ಆಗಿದೆ. ಪ್ರಭಾಸ್‌ಗಾಗಿ ಹಾಲಿವುಡ್ ಮೇಕಪ್ ಟೀಂ ಬರ್ತಿದೆಯಂತೆ.

ಹಾರರ್ ಕಾಮಿಡಿ ಕಥೆಯಲ್ಲಿ ಪ್ರಭಾಸ್!

ಹಾರರ್ ಕಾಮಿಡಿ ಕಥೆಯಲ್ಲಿ ಪ್ರಭಾಸ್!

ಬಾಹುಬಲಿ ಸರಣಿ ಸಿನಿಮಾಗಳ ನಂತರ ನಟ ಪ್ರಭಾಸ್ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ಸಲಾರ್', 'ಪ್ರಾಜೆಕ್ಟ್ ಕೆ', 'ಆದಿಪುರುಷ್', ಸಿನಿಮಾಗಳು ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರ ಹೊಂದಿವೆ. ಅದೇ ರೀತಿ ಪ್ರಭಾಸ್ ಮುಂಬರುವ ಸಿನಿಮಾಗಳು ಕೂಡ ಭಿನ್ನ ರೀತಿಯ ಕಥೆಯನ್ನು ಹೊಂದಿದೆ. 'ಸ್ಪಿರಿಟ್' ಸಿನಿಮಾ ಒಂದು ಮಾದರಿಯಾದರೆ, ನಿರ್ದೇಶಕ ಮಾರುತಿ ಜೊತೆಗೆ ಪ್ರಭಾಸ್ ಹಾರರ್ ಕಾಮಿಡಿ ಕಥೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಜ್ಜ- ಮೊಮ್ಮಗನ ಹಾರರ್ ಕಥೆ!

ಅಜ್ಜ- ಮೊಮ್ಮಗನ ಹಾರರ್ ಕಥೆ!

ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಚಿತ್ರಕ್ಕೆ ತಾತ್ಕಾಲಿಕವಾಗಿ 'ರಾಜ ಡೀಲಕ್ಸ್' ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆ. ಈ ಸಿನಿಮಾ ಹಾರರ್ ಕಾಮಿಡಿ ಸಿನಿಮಾವಾಗಿದೆ, ಇದು ಅಜ್ಜ ಮತ್ತು ಮೊಮ್ಮಗನ ಕುರಿತಾದ ಕಥೆ ಎನ್ನುವುದು ಇದೀಗ ಟಾಲಿವುಡ್ ನಲ್ಲಿ ಹರಿದಾಡುತ್ತಿರುವ ಹೊಸ ಸುದ್ದಿ. ಹೌದು ಈ ಹಾರರ್ ಕಾಮಿಡಿಯಲ್ಲಿ ಅಜ್ಜ ಮತ್ತು ಮೊಮ್ಮಗನ ಕಥೆಯನ್ನು ಸ್ವಾರಸ್ಯಕರವಾಗಿ ಹೇಳಲಿದ್ದಾರಂತೆ ನಿರ್ದೇಶಕ ಮಾರುತಿ.

ಪ್ರಭಾಸ್ ಅಜ್ಜನ ಲುಕ್‌ಗೆ ವಿಶೇಷ ಮೇಕಪ್!

ಪ್ರಭಾಸ್ ಅಜ್ಜನ ಲುಕ್‌ಗೆ ವಿಶೇಷ ಮೇಕಪ್!

ಈ ಚಿತ್ರ ಅಜ್ಜ, ಮೊಮ್ಮಗನ ಕತೆ ಎನ್ನುತ್ತಲೇ ಸಿನಿಮಾದ ಬಗ್ಗೆ ಮತ್ತೊಂದು ಕುತೂಹಲ ಹುಟ್ಟಿಕೊಂಡಿದೆ. ಈ ಚಿತ್ರದಲ್ಲಿ ಅಜ್ಜ ಮತ್ತು ಮೊಮ್ಮಗ ಎರಡು ಪಾತ್ರಗಳಲ್ಲೂ ನಟ ಪ್ರಭಾಸ್ ನಟಿಸುತ್ತಾರೆ ಎನ್ನಲಾಗಿದೆ. ಹಾಗಾಗಿ ಪ್ರಭಾಸ್ ಅಜ್ಜನ ಲುಕ್ ಕ್ರಿಯೇಟ್ ಮಾಡಲು ಹಾಲಿವುಡ್ ಮೇಕಪ್ ತಂಡವನ್ನು ಕರೆಸಲಾಗುತ್ತಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಪ್ರಭಾಸ್ ಲುಕ್ ಟೆಸ್ಟ್ ನೆಡಯಲಿದೆ.

ಹೈದ್ರಾಬಾದ್‌ನಲ್ಲಿ ಸಿನಿಮಾ ಸೆಟ್!

ಹೈದ್ರಾಬಾದ್‌ನಲ್ಲಿ ಸಿನಿಮಾ ಸೆಟ್!

ಇದು ಹಾರರ್ ಸಿನಿಮಾ ಆದ ಕಾರಣ ಈ ಚಿತ್ರಕ್ಕೆ ಸೆಟ್ ಬಹಳ ಮುಖ್ಯವಾಗುತ್ತದೆ. ಈಗಾಗಲೇ ಈ ಚಿತ್ರಕ್ಕಾಗಿ ಹೈದರಾಬಾದ್‌ನಲ್ಲಿ ಬೃಹತ್ ಸೆಟ್ಟನ್ನು ನಿರ್ಮಾಣ ಮಾಡಲಾಗಿದೆಯಂತೆ. ಸೆಟ್ ಕೆಲಸ ಸಂಪೂರ್ಣವಾದ ಬಳಿಕ ಈ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ ನಟ ಪ್ರಭಾಸ್. ಹಾಗಾಗಿ ನಟ ಪ್ರಭಾಸ್ ನಟಿಸಲಿರುವ ಮುಂದಿನ ಸಿನಿಮಾ 'ರಾಜ ಡಿಲಕ್ಸ್' ಎನ್ನುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಕೊಡುವುದು ಬಾಕಿ ಉಳಿದಿದೆ.

More from Filmibeat

English summary
Prabhas Playng Old Man In Maruthi Horrer Comedy Film, Hollywood Makeup Team Coming For Prabhas, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X