For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ಮನವಿಗೆ ಒಲ್ಲೆ ಎಂದ ಪ್ರಭಾಸ್

  By ಫಿಲ್ಮಿಬೀಟ್ ಡೆಸ್ಕ್‌
  |

  ನಟ ಪ್ರಭಾಸ್ ಇಂದು ಆಲ್ ಇಂಡಿಯಾ ಸ್ಟಾರ್. ಬಾಲಿವುಡ್‌ನ ದೊಡ್ಡ ಜೇಬಿನ ನಿರ್ಮಾಪಕರು ಸಹ ಪ್ರಭಾಸ್‌ ಜೊತೆ ಸಿನಿಮಾ ಮಾಡಲು ತುದಿಗಾಲಲ್ಲಿದ್ದಾರೆ. ಕೆಲವರು ಈಗಾಗಲೇ ಪ್ರಭಾಸ್ ಜೊತೆ ಸಿನಿಮಾ ಮಾಡಲು ಒಪ್ಪಂದ ಸಹ ಮಾಡಿಕೊಂಡಿದ್ದಾರೆ.

  ತೆಲುಗು ಸಿನಿಮಾಗಳಿಗೆ ಸೀಮಿತವಾಗಿದ್ದ ಪ್ರಭಾಸ್‌ಗೆ ಹೀಗೆ ಆಲ್‌ ಇಂಡಿಯಾ ಸ್ಟಾರ್ ಪಟ್ಟ ತಂದುಕೊಟ್ಟಿದ್ದು ನಿರ್ದೇಶಕ ರಾಜಮೌಳಿ. ಈ ಪ್ರತಿಭಾವಂತ ನಿರ್ದೇಶಕನ 'ಬಾಹುಬಲಿ' ಸಿನಿಮಾ ಮೂಲಕ ಪ್ರಭಾಸ್ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ನಟನಾಗಿ ಗುರುತಿಸಿಕೊಂಡಿದ್ದಾರೆ.

  ರಾಜಮೌಳಿ ಹಾಗೂ ಪ್ರಭಾಸ್ ಒಳ್ಳೆಯ ಸ್ನೇಹಿತರೆ ಆದರೆ ಇತ್ತೀಚೆಗೆ ರಾಜಮೌಳಿ ಪ್ರಭಾಸ್‌ ಬಳಿ ಮಾಡಿದ ಮನವಿಯೊಂದನ್ನು ಪ್ರಭಾಸ್ ನಯವಾಗಿಯೇ ನಿರಾಕರಿಸಿದ್ದ ಎಂಬ ಸುದ್ದಿ ಟಾಲಿವುಡ್‌ನ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಇದರಿಂದ ರಾಜಮೌಳಿ ಅಸಮಾಧಾನಗೊಂಡಿದ್ದಾರೆಂದು ಸಹ ಹೇಳಲಾಗುತ್ತಿದೆ.

  'ಆರ್‌ಆರ್‌ಆರ್‌' ಸಿನಿಮಾ ಚಿತ್ರೀಕರಣ ಈಗಷ್ಟೆ ಮುಗಿದಿದೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸಾಗುತ್ತಿದೆ. ಆದರೆ ಎಲ್ಲರಿಗೂ ಗೊತ್ತಿರುವಂತೆ ರಾಜಮೌಳಿ, ಚಿತ್ರೀಕರಣಕ್ಕೆ ತೆಗೆದುಕೊಳ್ಳವಷ್ಟೆ ಸಮಯವನ್ನು ಪೋಸ್ಟ್ ಪ್ರೊಡಕ್ಷನ್‌ ಕಾರ್ಯಕ್ಕೂ ತೆಗೆದುಕೊಳ್ಳುತ್ತಾರೆ. ಹಾಗಾಗಿಯೇ ಸಿನಿಮಾದ ಬಿಡುಗಡೆ ನಿಗದಿತ ದಿನದಲ್ಲಿ ಆಗುವುದು ಅನುಮಾವೆಂದೇ ಹೇಳಲಾಗುತ್ತಿದೆ.

  ಅಕ್ಟೋಬರ್ 13ಕ್ಕೆ ಬಿಡುಗಡೆ ಇಲ್ಲ?

  ಅಕ್ಟೋಬರ್ 13ಕ್ಕೆ ಬಿಡುಗಡೆ ಇಲ್ಲ?

  ಅಕ್ಟೋಬರ್ 13ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ 'ಆರ್‌ಆರ್‌ಆರ್‌' ಈ ಹಿಂದೆ ಹೇಳಿತ್ತು. ಆದರೆ ಅಕ್ಟೋಬರ್ 13 ಕ್ಕೆ ಬಿಡುಗಡೆ ಅಸಾಧ್ಯ ಎನ್ನಲಾಗಿದೆ. ಹಾಗಾಗಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಆದರೆ ಅದೇ ಸಮಯದಲ್ಲಿ ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್' ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.

  ರಾಜಮೌಳಿ ಮನವಿಗೆ ಒಲ್ಲೆ ಎಂದ ಪ್ರಭಾಸ್

  ರಾಜಮೌಳಿ ಮನವಿಗೆ ಒಲ್ಲೆ ಎಂದ ಪ್ರಭಾಸ್

  ಹಾಗಾಗಿ ರಾಜಮೌಳಿ, 'ರಾಧೆ-ಶ್ಯಾಮ್' ಸಿನಿಮಾದ ಬಿಡುಗಡೆಯನ್ನು ತುಸು ತಡ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಪ್ರಭಾಸ್ ಹಾಗೂ ಚಿತ್ರತಂಡ ಒಲ್ಲೆ ಎಂದಿದೆ. ಪ್ರಭಾಸ್‌ಗೆ ಹಿಂದಿಯಲ್ಲಿಯೂ ಉತ್ತಮ ಮಾರುಕಟ್ಟೆ ಇರುವ ಕಾರಣ ಬಿಡುಗಡೆಯನ್ನು ಹೆಚ್ಚು ತಡ ಮಾಡುವುದು ಅಸಾಧ್ಯ. 'ಆರ್‌ಆರ್‌ಆರ್‌' ಸಿನಿಮಾ ತೆಲುಗು ಪ್ರೇಕ್ಷಕರಿಗೆ ಮಾತ್ರವೇ ಅಪೀಲ್ ಆಗುವಂಥ ಕತೆ ಹೊಂದಿದೆ, (ತೆಲುಗು ರಾಜ್ಯದ ಬಂಡಾಯ ಹೋರಾಟಗಾರರ ಕತೆಯನ್ನು 'ಆರ್‌ಆರ್‌ಆರ್' ಹೊಂದಿದೆ) ಹಾಗಾಗಿ ಯಾವಾಗ ಆ ಸಿನಿಮಾವನ್ನು ಯಾವಾಗ ಬಿಡುಗಡೆ ಮಾಡಿದರೂ ಅಡ್ಡಿಯಿಲ್ಲ ಎಂಬ ಉತ್ತರವನ್ನು ಚಿತ್ರತಂಡ ನೀಡಿದೆಯಂತೆ. ಆದರೆ ಈ ಉತ್ತರ ರಾಜಮೌಳಿಗೆ ಸೂಕ್ತವೆನಿಸಿಲ್ಲ.

  'ರಾಧೆ-ಶ್ಯಾಮ್' ಬಿಡುಗಡೆ ಈಗಾಗಲೇ ತಡವಾಗಿದೆ

  'ರಾಧೆ-ಶ್ಯಾಮ್' ಬಿಡುಗಡೆ ಈಗಾಗಲೇ ತಡವಾಗಿದೆ

  ಮತ್ತೊಂದು ಸುದ್ದಿಯಂತೆ 'ರಾಧೆ-ಶ್ಯಾಮ್' ಸಿನಿಮಾ ಅಕ್ಟೋಬರ್ ನಲ್ಲಿಯೇ ಬಿಡುಗಡೆ ಮಾಡಲು ಉದ್ದೇಶಿಸಿಸಲಾಗಿತ್ತು. ಆದರೆ 'ಆರ್‌ಆರ್‌ಆರ್‌' ತಂಡದ ಮನವಿಯಿಂದಾಗಿಯೇ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಯಿತು. ಆದರೆ ಈಗ ಮತ್ತೆ 'ಆರ್‌ಆರ್‌ಆರ್‌' ತಂಡ ಸಿನಿಮಾ ಮುಂದೂಡಲು ಕೇಳಿದ್ದರಿಂದ ಪ್ರಭಾಸ್ ಸೇರಿದಂತೆ ಚಿತ್ರತಂಡ ಅಸಮಾಧಾನಗೊಂಡಿದೆ. 'ರಾಧೆ-ಶ್ಯಾಮ್' ಸಿನಿಮಾದ ಬಹುತೇಕ ಭಾಗ ಚಿತ್ರೀಕರಣ ಮುಗಿದಿತ್ತು. ಆದರೆ ಕೆಲವು ದೃಶ್ಯಗಳು ಪ್ರಭಾಸ್‌ಗೆ ತೃಪ್ತಿ ತರದ ಕಾರಣ ಕೆಲವು ದೃಶ್ಯಗಳನ್ನು ಹೈದರಾಬಾದ್‌ನಲ್ಲಿ ಮರು ಚಿತ್ರೀಕರಿಸಲಾಗಿದೆ.

  ಕೋಮರಮ್ ಭೀಮ್, ಅಲ್ಲೂರಿ ಸೀತಾರಾಮ ರಾಜು ಕತೆ

  ಕೋಮರಮ್ ಭೀಮ್, ಅಲ್ಲೂರಿ ಸೀತಾರಾಮ ರಾಜು ಕತೆ

  'ಆರ್‌ಆರ್‌ಆರ್‌' ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೆ ಮುಗಿದಿದೆ. ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಜೀವನ ಕುರಿತ ಕತೆಗಳಾಗಿವೆ. ಸಿನಿಮಾದಲ್ಲಿ ಕೋಮರಂ ಭೀಮ್ ಆಗಿ ಜೂ.ಎನ್‌ಟಿಆರ್, ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ ನಟಿಸಿದ್ದಾರೆ. ನಟಿ ಆಲಿಯಾ ಭಟ್, ಅಜಯ್ ದೇವಗನ್, ವಿದೇಶಿ ಚೆಲುವೆ ಒಲಿವಿಯಾ ಸಹ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾಕ್ಕೆ ಡಿವಿವಿ ದಯಾನಂದ್ ಬಂಡವಾಳ ಹೂಡಿದ್ದಾರೆ. ಸಿನಿಮಾದ ವಿತರಣೆ ಹಕ್ಕು, ಡಬ್ಬಿಂಗ್ ಹಕ್ಕುಗಳು ಈಗಾಗಲೇ ದಾಖಲೆ ಬೆಲೆಗೆ ಮಾರಾಟವಾಗಿವೆ. ಸಿನಿಮಾವು ಅಕ್ಟೋಬರ್ 13 ಕ್ಕೆ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿದೆ ಆದರೆ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗುವ ದೊಡ್ಡ ಸಾಧ್ಯತೆ ಇದೆ.

  English summary
  Prabhas rejects Rajamouli request to post pone Radhe Shyam movie. RRR Might Not Release Along With Radhe Shyam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X