#WeStandWithYuva: ಅಂದು 'ಸಲಾರ್' ಜಾಗಕ್ಕೆ ರಾಕಿ: ಈಗ 'ಯುವ' ಜಾಗಕ್ಕೆ 'ಸಲಾರ್'? ಫ್ಯಾನ್ಸ್ ಬೇಸರ

ಯುವ ರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಬಹಳ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವ' ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಹೊಂಬಾಳೆ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಆದರೆ ಇದೀಗ ಸಿನಿಮಾ ರಿಲೀಸ್ ಮುಂದೂಡುವ ಸಾಧ್ಯತೆಯಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವಾರ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅನಿವಾರ್ಯ ಕಾರಣಗಳಿಂದ ಸಿನಿಮಾ ರಿಲೀಸ್ ಡೇಟ್ ಮುಂದೂಡಲಾಗಿದೆ. ಡಿಸೆಂಬರ್ 22ಕ್ಕೆ ಪ್ರಭಾಸ್ 'ಸಲಾರ್' ಆಗಿ ಬಾಕ್ಸಾಫೀಸ್ ಶೇಕ್ ಮಾಡೋಕೆ ಬರ್ತಾರೆ ಎನ್ನಲಾಗ್ತಿದೆ. ಅದೇ ದಿನ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ಕೂಡ ತೆರಗಪ್ಪಳಿಸುತ್ತಿದೆ.

Prabhas Salaar coming on Yuva date december 22nd the christmas week

ಬಹಳ ಹಿಂದೆ ಸೆಟ್ಟೇರಿದ್ದ 'ಸಲಾರ್' ಸಿನಿಮಾ ಕಾರಣಾಂತರಗಳಿಂದ ರಿಲೀಸ್ ಆಗೋದು ತಡವಾಗಿತ್ತು. ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಕಳೆದ ವರ್ಷವೇ ಚಿತ್ರತಂಡ ಘೋಷಿಸಿತ್ತು. ತುಂಬಾ ತಡವಾಯಿತು ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಅಷ್ಟೆಲ್ಲಾ ಕಾದರೂ ಪ್ರಯೋಜನವಾಗಲಿಲ್ಲ. ಮತ್ತೆ ಮುಂದೂಡಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆದರೂ ಕೂಡ ಒಂದೊಳ್ಳೆ ಚಿತ್ರಕ್ಕಾಗಿ ಕಾಯುವಂತಾಗಿದೆ.

2022, ಏಪ್ರಿಲ್ 14ಕ್ಕೆ 'ಸಲಾರ್' ಸಿನಿಮಾ ರಿಲೀಸ್ ಮಾಡುವುದಾಗಿ ಮೊದಲಿಗೆ ಘೋಷಿಸಲಾಗಿತ್ತು. ಆದರೆ ಕೊರೊನಾ ಹಾವಳಿಯಿಂದ 'KGF'-2 ಹಾಗೂ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಬದಲಿಸಲಾಗಿತ್ತು. 'ಸಲಾರ್' ಬರಬೇಕಿದ್ದ 2022, ಏಪ್ರಿಲ್ 14ಕ್ಕೆ 'KGF'-2 ಬರುವಂತಾಯಿತು. 'ಸಲಾರ್' ಈ ವರ್ಷಕ್ಕೆ ಪೋಸ್ಟ್‌ಪೋನ್ ಆಗಿತ್ತು. ಇದೀಗ 'ಯುವ' ಸಿನಿಮಾ ರಿಲೀಸ್ ಆಗಬೇಕಿರುವ ಡಿಸೆಂಬರ್ 22ಕ್ಕೆ 'ಸಲಾರ್' ಬರ್ತಾನೆ ಎನ್ನಲಾಗ್ತಿದೆ.

ಕ್ರಿಸ್‌ಮಸ್‌ ಹಬ್ಬದ ಸಂಭ್ರಮದಲ್ಲಿ 'ಸಲಾರ್' ಸಿನಿಮಾ ರಿಲೀಸ್ ಮಾಡಿ ಬಾಕ್ಸಾಫೀಸ್ ದೋಚುವ ಲೆಕ್ಕಾಚಾರ ನಡೀತಿದೆ. ಆದರೆ ಅದೇ ದಿನ ಬರಬೇಕಿದ್ದ 'ಯುವ' ಸಿನಿಮಾ ರಿಲೀಸ್ ಮುಂದೂಡುವಂತಾಗಿದೆ. ಟೀಸರ್ ರಿಲೀಸ್ ಮಾಡಿ 'ಯುವ' ಚಿತ್ರ ಆರಂಭಿಸಲಾಗಿತ್ತು. ಆ ಬಳಿಕ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಇದೀಗ ಅಭಿಮಾನಿಗಳು 'ಯುವ' ಅಪ್‌ಡೇಟ್ ಕೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಮುಂದೂಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

'ಯುವ' ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರನ ಚೊಚ್ಚಲ ಸಿನಿಮಾ. ಇದಕ್ಕು ಮುನ್ನ 'ಯುವ ರಣಧೀರ ಕಂಠೀರವ' ಚಿತ್ರದಲ್ಲಿ ಯುವ ನಟಿಸಬೇಕಿತ್ತು. ಆ ಸಿನಿಮಾ ಅರ್ಧಕ್ಕೆ ನಿಂತ ಬಳಿಕ ಹೊಂಬಾಳೆ ಸಂಸ್ಥೆ ಯುವ ಲಾಂಚಿಂಗ್ ಸಿನಿಮಾ ಜವಾಬ್ದಾರಿ ವಹಿಸಿಕೊಂಡಿತ್ತು. ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಯುವ' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಮುಹೂರ್ತದ ದಿನವೇ ಡಿಸೆಂಬರ್ 22ಕ್ಕೆ 'ಯುವ' ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಲಾಗಿತ್ತು. ಇದೀಗ 'ಸಲಾರ್‌'ಗಾಗಿ ಯುವ ಜಾಗಬಿಟ್ಟುಕೊಡುವಂತಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹೊಂಬಾಳೆ ಸಂಸ್ಥೆ ಅಧಿಕೃತವಾಗಿ 'ಸಲಾರ್' ರಿಲೀಸ್ ಡೇಟ್ ಘೋಷಿಸಿಲ್ಲ. ಆದರೆ ಡಿಸೆಂಬರ್ 22ಕ್ಕೆ ಪ್ರಶಾಂತ್‌ ನೀಲ್- ಪ್ರಭಾಸ್ ಮ್ಯಾಜಿಕ್ ತೆರೆಮೇಲೆ ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ ಅಭಿಮಾನಿಗಳು ಸಿನಿಮಾ ರಿಲೀಸ್ ಮುಂದೂಡಬೇಡಿ ಎನ್ನುತ್ತಿದ್ದಾರೆ.

#WeStandWithYuva ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಸದ್ಯ ಮೈಸೂರಿನಲ್ಲಿ 'ಯುವ' ಸಿನಿಮಾ ಚಿತ್ರೀಕರಣ ನಡೀತಿದೆ. ಬೇಗ ಸಿನಿಮಾ ಅಪ್‌ಡೇಟ್ ಕೊಡಿ ಎನ್ನುತ್ತಿದ್ದಾರೆ. ಡಿಸೆಂಬರ್ 21ರ ಬದಲು 'ಯುವ' ಮಾರ್ಚ್ 18ಕ್ಕೆ ರಿಲೀಸ್ ಆಗುತ್ತದೆ ಎನ್ನುವ ಊಹಾಪೋಹ ಕೂಡ ಇದೆ. 'ಯುವ' ಬರೋದು ನಿಜಕ್ಕೂ ತಡವಾಗುತ್ತಾ? ಕಾದು ನೋಡಬೇಕಿದೆ.

More from Filmibeat

English summary
Yuva delayed, Salaar Movie Likely To Release On december 22nd;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X