Salaar: ಪ್ರಭಾಸ್ ಅಭಿಮಾನಿಗಳಿಗೆ ಬಿಗ್ ಶಾಕ್? ದಯವಿಟ್ಟು ಹಂಗೆಲ್ಲಾ ಮಾಡ್ಬೇಡಿ ಎಂದು ಮನವಿ
ಸಿನಿರಸಿಕರು 'ಸಲಾರ್' ಟ್ರೈಲರ್ ಯಾವಾಗ ರಿಲೀಸ್ ಎಂದು ಕೇಳುತ್ತಿದ್ದಾರೆ. ಆಗಸ್ಟ್ ಕೊನೆ ವಾರದಲ್ಲೇ ಡೈನೋಸಾರ್ ಪ್ರಭಾಸ್ ಆಕ್ಷನ್ ಧಮಾಕ ತೋರಿಸ್ತೀನಿ ಎಂದಿತ್ತು ಹೊಂಬಾಳೆ ಸಂಸ್ಥೆ. 'ಸಲಾರ್' ಆರ್ಭಟ ನೊಡೋಕೆ ಕಾಯ್ತಿರುವ ಅಭಿಮಾನಿಗಳಿಗೆ ಶಾಕ್ ಕೊಡ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸೆಪ್ಟೆಂಬರ್ 28ಕ್ಕೆ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿದೆ.
ಈಗಾಗಲೇ ಅಮೆರಿಕಾದಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ದಾಖಲೆ ಮಟ್ಟದಲ್ಲಿ ಟಿಕೆಟ್ ಸೇಲ್ ಆಗಿದೆ. ಇದೆಲ್ಲದರ ನಡುವೆ ಮತ್ತೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗ್ತಿದೆ ಎನ್ನುವ ಗುಸು ಗುಸು ಶುರುವಾಗಿದೆ. ಹೊಂಬಾಳೆ ಸಂಸ್ಥೆ ವಿತರಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ ಎನ್ನಲಾಗುತ್ತಿದೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಟ್ರೈಲರ್‌ಗಾಗಿ ಕಾಯ್ತಿದ್ದ ಅಭಿಮಾನಿಗಳಂತೂ ದಯವಿಟ್ಟು ರಿಲೀಸ್ ಡೇಟ್ ಬದಲಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. 2 ಭಾಗಗಳಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಬೇಕಿದೆ. ಆದರೆ ಈಗ ಇದ್ದಕ್ಕಿದಂತೆ ಡಿಸೆಂಬರ್ ಅಥವಾ ಜನವರಿಯಲ್ಲಿ ಸಿನಿಮಾ ರಿಲೀಸ್ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಗ್ರಾಫಿಕ್ಸ್ ವರ್ಕ್ ಸಂಪೂರ್ಣವಾಗದೇ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿಯದ ಹಿನ್ನೆಲೆಯಲ್ಲಿ ಚಿತ್ರತಂಡ ರಿಲೀಸ್ ಡೇಟ್ ಮುಂದೂಡಲು ತೀರ್ಮಾನಿಸಿದೆಯಂತೆ. ಒಂದು ಸಾಂಗ್ ಶೂಟಿಂಗ್ ಕೂಡ ಬಾಕಿಯಿದೆ. ಪ್ರಭಾಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಸದ್ಯಕ್ಕೆ ಚಿತ್ರೀಕರಣ ಕಷ್ಟ ಎನ್ನುವ ವದಂತಿ ಕೂಡ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಹೊಂಬಾಳೆ ಸಂಸ್ಥೆ ಮೂರ್ನಾಲ್ಕು ತಿಂಗಳ ಕಾಲ ಸಿನಿಮಾ ರಿಲೀಸ್ ಮುಂದೂಡುವ ಲೆಕ್ಕಾಚಾರದಲ್ಲಿದೆಯಂತೆ.
'ಸಲಾರ್' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ದೇವರಾಜ್, ಜಗಪತಿ ಬಾಬು, ಭಜರಂಗಿ ಲೋಕಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ತಾವು ಅಂದುಕೊಂಡಂತೆ ಸಿನಿಮಾ ಬರುವವರೆಗೂ ಪ್ರಶಾಂತ್ ನೀಲ್ ಒಪ್ಪುವುದಿಲ್ಲ. ಗ್ರಾಫಿಕ್ಸ್ ಇಷ್ಟವಾಗದ ಕಾರಣ ಮತ್ತೆ ರೀವರ್ಕ್ ಮಾಡಲು ಸೂಚಿಸಿದ್ದಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಅನಿವಾರ್ಯವಾಗಿ ರಿಲೀಸ್ ಡೇಟ್ ಮುಂದೂಡುವಂತಾಗಿದೆ ಎನ್ನುವ ಚರ್ಚೆ ನಡೀತಿದೆ.
ಕೆಲವರು 'ಸಲಾರ್' ರಿಲೀಸ್ ಪೋಸ್ಟ್‌ಪೋನ್ ಎನ್ನುವ ವಿಚಾರವನ್ನು ಒಪ್ಪಲು ಸಿದ್ಧರಿಲ್ಲ. 4 ದಿನಗಳ ಹಿಂದೆಯಷ್ಟೇ ಶೀಘ್ರದಲ್ಲೇ 'ಸಲಾರ್' ಟ್ರೈಲರ್ ರಿಲೀಸ್ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಹಾಗಿರುವಾಗ ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗಲ್ಲ ಅಂದ್ರೆ ಹೇಗೆ? ಎಂದು ಕೇಳುತ್ತಿದ್ದಾರೆ. ಇದೆಲ್ಲ ಬರೀ ಗಾಸಿಪ್ ಅಷ್ಟೇ ಎಂದು ವಾದಿಸುತ್ತಿದ್ದಾರೆ. ಆದರೆ ಸಾಕಷ್ಟು ಜನ ಸಿನಿಮಾ ಪೋಸ್ಟ್‌ಪೋನ್ ಆಗೋದು ನಿಜ ಎನ್ನುತ್ತಿದ್ದಾರೆ.
ಬಹಳ ಹಿಂದೆ ಸೆಟ್ಟೇರಿದ್ದ 'ಸಲಾರ್' 2 ಬಾರಿ ರಿಲೀಸ್ ಡೇಟ್ ಬದಲಿಸಿಕೊಂಡಿತ್ತು. ಸೆಪ್ಟೆಂಬರ್ 28ರಂದು ಲಾಂಗ್ ವೀಕೆಂಡ್ ಪ್ಲ್ಯಾನ್ ಮಾಡಿ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದರು. ಅಮೇರಿಕಾದಲ್ಲಿ ತಿಂಗಳಿಗೂ ಮೊದಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗ್ತಿದೆ. ಹಾಗಿರುವಾಗ ಸಿನಿಮಾ ರಿಲೀಸ್ ಮುಂದೂಡಲು ಸಾಧ್ಯವೇ ಇಲ್ಲ ಎನ್ನುವ ವಾದವೂ ಇದೆ. ಆದರೆ ಅನಿವಾರ್ಯ ಕಾರಣಗಳಿಂದ ಈ ನಿರ್ಧಾರಕ್ಕೆ ಬಂದಿದ್ದು ಟಿಕೆಟ್ ಬುಕ್ಕಿಂಗ್ ಹಣವನ್ನು ರೀಫಂಡ್ ಮಾಡುತ್ತಾರೆ ಎನ್ನುವ ಚರ್ಚೆ ಕೂಡ ನಡೀತಿದೆ.


Click it and Unblock the Notifications











