twitter
    For Quick Alerts
    ALLOW NOTIFICATIONS  
    For Daily Alerts

    'ಸಲಾರ್' ಚಿತ್ರದಲ್ಲೂ ಮತ್ತದೇ ಸೀನ್: 'ಸಲಾರ್' ಅಖಾಡಕ್ಕೆ ರಾಕಿಭಾಯ್ ಎಂಟ್ರಿ?

    |

    ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಶೂಟಿಂಗ್ ಭರದಿಂದ ಸಾಗ್ತಿದೆ. ಚಿತ್ರದ ಒಂದಷ್ಟು ಮೇಕಿಂಗ್ ವಿಡಿಯೋಗಳು, ಫೋಟೊಸ್ ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಅಂತೆಲ್ಲಾ ಗುಸುಗುಸು ಕೇಳಿ ಬರ್ತಿದೆ.

    ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಬಹುಕೋಟಿ ವೆಚ್ಚದ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಸಲಾರ್'. ಈಗಾಗಲೇ ಚಿತ್ರದ ಪೋಸ್ಟರ್ಸ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸೆಪ್ಟೆಂಬರ್ 28ಕ್ಕೆ ಚಿತ್ರವನ್ನು ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. KGF, ಕಾಂತಾರ ಸಿನಿಮಾಗಳನ್ನು ನಿರ್ಮಿಸಿದ ಕನ್ನಡದ ಹೆಮ್ಮೆಯ ಹೊಂಬಾಳೆ ಸಂಸ್ಥೆ ಈ ಚಿತ್ರಕ್ಕ ಬಂಡವಾಳ ಹೂಡಿದೆ. ಚಿತ್ರದಲ್ಲಿ ಶೃತಿ ಹಾಸನ್ ನಾಯಕಿಯಾಗಿ ನಟಿಸಿದ್ದು ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈಗಾಗಲೇ ಬಹುತೇಕ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ.

    "ನಾನ್ ಉಸಿರಾಡಿದ್ರು ಕಷ್ಟ, ಉಸಿರಾಡದಿದ್ರೂ ಕಷ್ಟ.. ನಾನು ಇರ್ಬೇಕಾ, ಬೇಡ್ವಾ ಹೇಳಿ: ರಶ್ಮಿಕಾ ಮಂದಣ್ಣ

    'ಸಲಾರ್' ಚಿತ್ರಕ್ಕೆ ಲೀಕಾಸುರರ ಕಾಟ ತಪ್ಪುತ್ತಲೇ ಇಲ್ಲ. ಶೂಟಿಂಗ್ ಸೆಟ್‌ನಿಂದ ಫೋಟೊಗಳು, ವಿಡಿಯೋಗಳು ಲೀಕ್ ಆಗುತ್ತಲೇ ಇದೆ. ಇದೀಗ ಮತ್ತೊಮ್ಮೆ ಅಂತದ್ದೇ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿ ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಕಥೆಯನ್ನು ಊಹಿಸಿಕೊಳ್ಳುತ್ತಿದ್ದಾರೆ.

    'ಸಲಾರ್' ಚಿತ್ರದಲ್ಲೂ ಆ ಸೀನ್

    'ಸಲಾರ್' ಚಿತ್ರದಲ್ಲೂ ಆ ಸೀನ್

    ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಮದರ್ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಗಮನ ಸೆಳೆಯುತ್ತವೆ. 'ಉಗ್ರಂ' ಚಿತ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಗಳನ್ನು ನೋಡಿ ದಿಕ್ಕು ತೋಚದೇ ಕುಳಿತ ತಾಯಿ ಮುಂದೆ ಅಗಸ್ತ್ಯ ಧೈರ್ಯ ತುಂಬಿ ಕಿಡಿಗೇಡಿಗಳ ಬೆಂಡೆತ್ತುವ ದೃಶ್ಯ ಇದೆ. ಇನ್ನು KGF ಚಿತ್ರದಲ್ಲಿ ತಾಯಿಯೊಬ್ಬಳು ಮಗುವಿಗಾಗಿ ಬನ್ ಒಂದನ್ನು ಹಿಡಿದು ಬರುವಾಗ ಅದು ರಸ್ತೆಗೆ ಬಿದ್ದ ಸಮಯದಲ್ಲಿ ಅದನ್ನು ಮರಳಿ ತೆಗೆದುಕೊಳ್ಳಲು ಮುಜುಗರ ಪಡುತ್ತಿದ್ದ ತಾಯಿಯನ್ನು ನೋಡಿದ ರಾಕಿ ಕಾರ್ ಅಡ್ಡಗಟ್ಟಿ ಬನ್ ಕೊಟ್ಟು ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ ಎಂದು ಹೇಳ್ತಾನೆ. ಇಂತದ್ದೇ ತಾಯಿ ಮಗನ ಸನ್ನಿವೇಶ 'ಸಲಾರ್' ಚಿತ್ರದಲ್ಲಿ ಇದ್ದಂತೆ ಕಾಣ್ತಿದೆ.

    ಸ್ಕ್ರೀನ್‌ ಶಾಟ್ ಫುಲ್ ವೈರಲ್

    ಸ್ಕ್ರೀನ್‌ ಶಾಟ್ ಫುಲ್ ವೈರಲ್

    'ಸಲಾರ್' ಚಿತ್ರದಲ್ಲಿ ಈಶ್ವರಿ ರಾವ್ ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ. ಸದ್ಯ ಲೀಕ್ ಆಗಿರುವ ವಿಡಿಯೋದಲ್ಲಿ ಪ್ರಭಾಸ್, ಈಶ್ವರಿ ರಾವ್ ಎದುರು ಕುಳಿತು ಮಾತನಾಡುವಂತಹ ಸನ್ನಿವೇಶ ಇದೆ. ಸದ್ಯ 'ಉಗ್ರಂ', 'KGF' ಹಾಗೂ 'ಸಲಾರ್' ಚಿತ್ರದ ಲೀಕ್ಡ್ ವಿಡಿಯೋ ಸ್ಕ್ರೀನ್‌ ಶಾಟ್ ತೆಗೆದು ಮೂರರಲ್ಲೂ ಒಂದೇ ತರಹದ ಸನ್ನಿವೇಶ ಎಂದು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ 'ಸಲಾರ್' ಮದರ್ ಸೆಂಟಿಮೆಂಟ್ ಹೈಲೆಟ್ ಆಗುತ್ತೆ ಎಂದು ಹೇಳುತ್ತಿದ್ದಾರೆ.

    'ಸಲಾರ್' ಅಖಾಡಕ್ಕೆ ರಾಕಿ ಎಂಟ್ರಿ?

    'ಸಲಾರ್' ಅಖಾಡಕ್ಕೆ ರಾಕಿ ಎಂಟ್ರಿ?

    ಇನ್ನು ಕಳೆದೆರಡು ದಿನಗಳಿಂದ ಯಶ್ ಶೂಟಿಂಗ್ ಸೆಟ್‌ನಲ್ಲಿ ಇರುವಂತಹ ಫೋಟೊವೊಂದು ವೈರಲ್ ಆಗ್ತಿದೆ. ಅದರಲ್ಲಿ ಯಶ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದು 'ಸಲಾರ್' ಚಿತ್ರದ ಮೇಕಿಂಗ್ ಸ್ಟಿಲ್ ಎಂದು ಕೆಲವರು ಹೇಳುತ್ತಿದ್ದಾರೆ. ಬಹಳ ದಿನಗಳಿಂದ ಯಶ್ ಕೂಡ ಸಲಾರ್ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದಕ್ಕೆ ಈ ಫೋಟೊವನ್ನು ಸೇರಿಸಿ ಶೇರ್ ಮಾಡುತ್ತಿದ್ದಾರೆ. ಆದರೆ ಇದು ಯಾವುದೇ ಜಾಹೀರಾತು ಚಿತ್ರೀಕರಣದ ಫೋಟೊ ಎನ್ನುವುದು ಕೆಲವರ ವಾದ. ಪೆಪ್ಸಿ ಇಂಡಿಯಾ ಜಾಹೀರಾತಿನ ಮೇಕಿಂಗ್ ಸ್ಟಿಲ್ ಆಗಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.

    ಸೆ. 16ಕ್ಕೆ 'ಸಲಾರ್' ರಿಲೀಸ್

    ಸೆ. 16ಕ್ಕೆ 'ಸಲಾರ್' ರಿಲೀಸ್

    ಆಕ್ಷನ್ ಎಂಟರ್‌ಟೈನರ್ ಸಿನಿಮಾಗಳನ್ನು ಮಾಡುವುದರಲ್ಲಿ ಪ್ರಶಾಂತ್ ನೀಲ್ ಮಾಸ್ಟರ್. ಈಗಾಗಲೇ 3 ಸಿನಿಮಾಗಳಲ್ಲಿ ಅವರ ಎಲಿವೇಷನ್ ಸೀನ್ಸ್ ನೋಡಿದವರು ದಂಗಾಗಿದ್ದಾರೆ. 'ಸಲಾರ್' ಚಿತ್ರದಲ್ಲಿ ಇದನ್ನೆಲ್ಲಾ ಮೀರಿದಂತೆ ಎಂಟರ್‌ಟೈನ್‌ಮೆಂಟ್ ಫಿಕ್ಸ್ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ. ರಾಕಿ ಭಾಯ್ ಕ್ಯಾರೆಕ್ಟರೈಷೇನ್ ನೋಡಿದ ಮೇಲೆ 'ಸಲಾರ್' ಆರ್ಭಟ ಹೇಗಿರುತ್ತೋ ಎಂದು ಊಹಿಸಿಕೊಂಡೇ ಪ್ರಭಾಸ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಲಿದೆ.

    English summary
    Prabhas Starrer Salaar shooting leaked pick Goes Viral. Salaar is scheduled for a theatrical release on 28 September 2023. know more. know more.
    Thursday, January 26, 2023, 14:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X