Salaar: ತಡವಾಗುತ್ತಾ 'ಸಲಾರ್' ಟ್ರೈಲರ್ ರಿಲೀಸ್? ಫಸ್ಟ್ ಸಾಂಗ್ ಯಾವಾಗ?
ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಬಸ್ರೂರಿನಲ್ಲಿರುವ ರವಿ ಬಸ್ರೂರು ಸ್ಟುಡಿಯೋದಲ್ಲಿ ರೀ-ರೆಕಾರ್ಡಿಂಗ್ ಭರದಿಂದ ಸಾಗುತ್ತಿದೆ. ಮತ್ತೊಂದು ಕಡೆ 5 ಭಾಷೆಗಳಲ್ಲಿ ಸಿನಿಮಾ ಡಬ್ಬಿಂಗ್ ಕೆಲಸಗಳು ಚಾಲ್ತಿಯಲ್ಲಿದೆ. ಸದ್ಯ ಸಿನಿಮಾ ಟ್ರೈಲರ್ ಮತ್ತು ಫಸ್ಟ್ ಸಾಂಗ್ ರಿಲೀಸ್ ಬಗ್ಗೆ ಈ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ 'ಸಲಾರ್' ಟೀಸರ್‌ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ 2 ದಿನದಲ್ಲಿ 10 ಕೋಟಿಗೂ ಅಧಿಕ ವೀವ್ಸ್ ಸಾಧಿಸಿ ದಾಖಲೆ ಬರೆದಿತ್ತು. ಅದರ ಬೆನ್ನಲ್ಲೇ ಹೊಂಬಾಳೆ ಸಂಸ್ಥೆ ಆಗಸ್ಟ್ ಕೊನೆ ವಾರದಲ್ಲಿ 'ಸಲಾರ್' ಟ್ರೈಲರ್ ರಿಲೀಸ್ ಮಾಡೋದಾಗಿ ಘೋಷಿಸಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಈ ಹೈವೋಲ್ಟೇಜ್ ಆಕ್ಷನ್ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಸಿನಿಮಾ ಕಥೆ ಬಗ್ಗೆ ಚಿತ್ರತಂಡ ರಹಸ್ಯ ಕಾಪಾಡಿಕೊಂಡಿದೆ.

ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ಮಿಂಚಿದ್ದಾರೆ. ಇನ್ನುಳಿದಂತೆ ಜಗಪತಿ ಬಾಬು, ಪೃಥ್ವಿರಾಜ್ ಸುಕುಮಾರನ್, ಭಜರಂಗಿ ಲೋಕಿ, ದೇವರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. KGF ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ 'ಸಲಾರ್' ಸರಣಿಗೆ ಕೆಲಸ ಮಾಡುತ್ತಿದೆ. ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 28ಕ್ಕೆ ತೆರೆಗಪ್ಪಳಿಸಲಿದೆ.
ಸೆಪ್ಟೆಂಬರ್ 6ಕ್ಕೆ ಟ್ರೈಲರ್?
ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಸಲಾರ್' ಸಿನಿಮಾ ಟ್ರೈಲರ್ ಆಗಸ್ಟ್ ಕೊನೆ ವಾರ ಅಲ್ಲ, ಸೆಪ್ಟೆಂಬರ್ ಮೊದಲ ವಾರದಲ್ಲಿ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ. ಟೀಸರ್‌ನಲ್ಲಿ ಪ್ರಭಾಸ್ ದರ್ಶನ ಸರಿಯಾಗಿ ಆಗದೇ ಇದ್ದಿದ್ದು, ಡೈಲಾಗ್ ಇಲ್ಲದೇ ಇದ್ದಿದ್ದು ಅಭಿಮಾನಿಗಳಿಗೆ ಬೇರಸ ತಂದಿತ್ತು. ಬರೀ ಟಿನ್ನು ಆನಂದ್ ಡೈಲಾಗ್‌ನಲ್ಲೇ ಟೀಸರ್ ಮುಗಿಸಿಬಿಟ್ಟಿದ್ದರು. ಆದರೆ ಟ್ರೈಲರ್ ಅಭಿಮಾನಿಗಳಿಗೆ ಹಬ್ಬ ಎನ್ನಲಾಗ್ತಿದೆ.
ಮುಂದಿನ ವಾರ ಸಾಂಗ್
ಟೀಸರ್ ರಿಲೀಸ್ ಮಾಡಿದ್ದ ಬಿಟ್ಟರೆ 'ಸಲಾರ್' ಪ್ರಮೋಷನ್ ಇನ್ನು ಶುರುವಾಗಿಲ್ಲ. ಮುಂದಿನ ಫಸ್ಟ್ ಸಾಂಗ್ ರಿಲೀಸ್ ಮಾಡಿ ಸಿನಿಮಾ ಪ್ರಮೋಷನ್ ಸ್ಟಾರ್ಟ್ ಮಾಡ್ತಾರೆ ಎನ್ನಲಾಗ್ತಿದೆ. KGF ಸರಣಿ ಸಿನಿಮಾಗಳಲ್ಲಿ ರವಿ ಬಸ್ರೂರು ಟ್ಯೂನ್ ಮ್ಯಾಜಿಕ್ ಮಾಡಿತ್ತು. ಅಂತದ್ದೇ ಜಬರ್ದಸ್ತ್ ಆಲ್ಬಮ್ 'ಸಲಾರ್' ಚಿತ್ರದಲ್ಲೂ ಇದೇ ಎನ್ನಲಾಗ್ತಿದೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಟ್ರೈಲರ್ ಮತ್ತು ಸಾಂಗ್ಸ್ ರಿಲೀಸ್ ಆಗಲಿದೆ.
'ಸಲಾರ್' ಇಂಗ್ಲೀಷ್ ವರ್ಷನ್
ಹೊಂಬಾಳೆ ಸಂಸ್ಥೆ 'ಸಲಾರ್' ಚಿತ್ರವನ್ನು ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದೆ. ಹೊರ ದೇಶಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಿದೆ. ಇನ್ನು ಈ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ಇಂಗ್ಲೀಷ್‌ನಲ್ಲೂ ರಿಲೀಸ್ ಮಾಡುವ ಮಾತುಗಳು ಕೇಳಿಬರ್ತಿದೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗಿ 2 ವಾರಗಳ ಬಳಿಕ ಇಂಗ್ಲೀಷ್ ವರ್ಷನ್ ತೆರೆಗಪ್ಪಳಿಸೋ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಇಂಟರ್‌ವಲ್ ಸೀನ್ ಲೀಕ್?
'KGF' ಸರಣಿ ಸಿನಿಮಾಗಳಲ್ಲಿ ಚಿನ್ನದ ಗಣಿಯಲ್ಲಿನ ಕಾಳಿಮಾತೆ ದೇವಸ್ಥಾನ ಹೈಲೆಟ್ ಆಗಿತ್ತು. 'ಸಲಾರ್' ಚಿತ್ರದ ಇಂಟರ್‌ವಲ್ ಸೀನ್‌ನಲ್ಲೂ ಇದೇ ರೀತಿ ನಾಯಕ ವಿಲನ್‌ಗಳ ಎದುರು ಕಾದಾಡುವ ಸನ್ನಿವೇಶಗಳು ಇವೆಯಂತೆ. ಬಹಳ ರೋಚಕವಾಗಿ ಆ ಸನ್ನಿವೇಶಗಳನ್ನು ಚಿತ್ರತಂಡ ಸೆರೆ ಹಿಡಿದಿದೆ ಎನ್ನಲಾಗ್ತಿದೆ.


Click it and Unblock the Notifications











