ಅಬ್ಬಾ.. ಬ್ರಹ್ಮರಾಕ್ಷಸನ ಹಿಂದೆ ಬಿತ್ತಾ ಹೊಂಬಾಳೆ ಫಿಲ್ಮ್ಸ್?

ದೊಡ್ಡ ದೊಡ್ಡ ಸಿನಿಮಾಗಳಿಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೇರ್ ಆಫ್ ಅಡ್ರೆಸ್ ಎನ್ನುವಂತಿದೆ. ಕನ್ನಡ ಸಿನಿಮಾ ಮಾತ್ರವಲ್ಲ ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆ ಬ್ಯಾನರ್ ಮುಖ ಮಾಡಿರುವುದು ಗೊತ್ತೇಯಿದೆ. ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸಲಾರ್' ಸಿನಿಮಾ ಮಾಡಿ ಸಕ್ಸಸ್ ಕಂಡಿದೆ. ಇಂತಹ ಮತ್ತಷ್ಟು ಪ್ರಾಜೆಕ್ಟ್‌ಗಳ ನಿರ್ಮಾಣಕ್ಕೆ ಕೈ ಹಾಕಿದೆ.

ಕನ್ನಡ, ತೆಲುಗು, ಮಲಯಾಳಂ, ಹಿಂದಿ ಸಿನಿಮಾ ಎನ್ನುವುದು ಬಿಟ್ಟು ಇಂಡಿಯನ್ ಸಿನಿಮಾ ಎನ್ನುವ ಕಾನ್ಸೆಪ್ಟ್ ಶುರುವಾಗಿದೆ. ಈಗಾಗಲೇ ಹೊಂಬಾಳೆ ಸಂಸ್ಥೆ ತಮಿಳು, ಮಲಯಾಳಂ ಚಿತ್ರವನ್ನು ಕೂಡ ನಿರ್ಮಾಣ ಮಾಡಿದೆ. ಮುಂದೆ 'ಕಾಂತಾರ- 1', 'ರಿಚರ್ಡ್ ಆಂಟನಿ', 'KGF- 3' ಸೇರಿ ಹಲವು ಸಿನಿಮಾಗಳನ್ನು ಕನ್ನಡದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿದೆ.

Prabhas teams up with Prashanth Varma Hombale Films to produce the film

'ಸಲಾರ್' ಬಳಿಕ ಪ್ರಭಾಸ್ ಕಾಂಬಿನೇಷನ್‌ನಲ್ಲಿ 3 ಚಿತ್ರಗಳಿಗೆ ಹೊಂಬಾಳೆ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಕೂಡ ಸಿಕ್ಕಿದೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ 'ಸಲಾರ್- 2' ಚಿತ್ರ ಮಾಡಬೇಕಿದೆ. ಅದು ಬಿಟ್ಟು ಯಂಗ್ ರೆಬಲ್ ಸ್ಟಾರ್ ನಟನೆಯ ಮತ್ತೆರಡು ಚಿತ್ರಗಳನ್ನು ಹೊಂಬಾಳೆ ಸಂಸ್ಥೆ ನಿರ್ಮಿಸಲಿದೆ. ಆದರೆ ಆ ಚಿತ್ರಗಳಿಗೆ ಆಕ್ಷನ್ ಕಟ್ ಹೇಳುವುದು ಯಾರು? ಯಾವಾಗ ಶುರುವಾಗುತ್ತದೆ? ಎನ್ನುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

ಪ್ರಭಾಸ್- ಹೊಂಬಾಳೆ ಸಂಸ್ಥೆಯ ಮತ್ತೆರಡು ಸಿನಿಮಾಗಳನ್ನು ಪ್ರಶಾಂತ್ ವರ್ಮಾ ಹಾಗೂ ಲೋಕೇಶ್ ಕನಕರಾಜ್ ನಿರ್ದೇಶನ ಮಾಡ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಪ್ರಶಾಂತ್ ವರ್ಮಾ ಈ ಹಿಂದೆ 'ಹನುಮಾನ್' ಸಿನಿಮಾ ನಿರ್ದೇಶಿಸಿ ಗೆದ್ದಿದ್ದಾರೆ. ಇದೀಗ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ.

Prabhas teams up with Prashanth Varma Hombale Films to produce the film

ಈಗಾಗಲೇ ಪ್ರಭಾಸ್ ಮನೆಯಲ್ಲಿ ಚಿತ್ರಕ್ಕಾಗಿ ಲುಕ್ ಟೆಸ್ಟ್ ಕೂಡ ಪ್ರಶಾಂತ್ ವರ್ಮಾ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಹಿಂದೆ ರಣ್‌ವೀರ್ ಸಿಂಗ್ ನಟನೆಯ ಚಿತ್ರಕ್ಕೆ ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. ಅದೇ ಚಿತ್ರವನ್ನು ಪ್ರಭಾಸ್ ಜೊತೆ ಮಾಡುತ್ತಾರೆ ಎನ್ನಲಾಗ್ತಿದೆ. ಹೊಂಬಾಳೆ ಸಂಸ್ಥೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತದೆ ಎನ್ನುವ ಅಂತೆಕಂತೆ ಸುದ್ದಿ ಹರಿದಾಡುತ್ತಿದೆ.

'ಬ್ರಹ್ಮರಾಕ್ಷಸ' ಹೆಸರಿನ ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದು ಪ್ರಶಾಂತ್ ವರ್ಮಾ ನಿರ್ದೇಶನ ಮಾಡ್ತಾರೆ ಎನ್ನಲಾಗ್ತಿದೆ. ಈಗಾಗಲೇ ಲುಕ್ ಟೆಸ್ಟ್ ನಡೆದಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಸಿನಿಮಾ ಘೋಷಣೆ ಆಗುತ್ತದೆ ಎಂದು ಅಭಿಮಾನಿಗಳು ಚರ್ಚೆ ಹುಟ್ಟುಹಾಕಿದ್ದಾರೆ. 'ಸಲಾರ್' ಬಳಿಕ 'ದಿ ರಾಜಾ ಸಾಬ್' ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ 'ಫೌಜಿ' ಚಿತ್ರೀಕರಣ ಸಹ ಭರದಿಂದ ಸಾಗುತ್ತಿದೆ.

ಶೀಘ್ರದಲ್ಲೇ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರ ಆರಂಭವಾಗಲಿದೆ. ಆ ಬಳಿಕ 'ಸಲಾರ್- 2' ಅಥವಾ 'ಬ್ರಹ್ಮರಾಕ್ಷಸ' ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ ಇತ್ತೀಚೆಗೆ ಜ್ಯೂ. ಎನ್‌ಟಿಆರ್ ನಟನೆಯ ಸಿನಿಮಾ ಆರಂಭಿಸಿದ್ದಾರೆ. ಅದು ಬಿಡುಗಡೆ ಆಗುವುದು ತಡವಾಗಬಹುದು. ಅಷ್ಟರಲ್ಲಿ 'ಬ್ರಹ್ಮರಾಕ್ಷಸ' ಚಿತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸಬಹುದು ಎನ್ನುವ ಚರ್ಚೆ ನಡೀತಿದೆ.

ಪ್ರಭಾಸ್ ಮೇಲೆ ಸಾವಿರಾರು ಕೋಟಿ ಸುರಿಯಲಾಗುತ್ತಿದೆ. 'ಬಾಹುಬಲಿ' ಸರಣಿ ಬಳಿಕ ಯಂಗ್ ರೆಬಲ್ ಸ್ಟಾರ್ ನಟಿಸಿದ ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲೇ ಮೂಡಿ ಬಂದಿದೆ. ಇದು ಹೀಗೆ ಮುಂದುವರೆಯುವ ಸುಳಿವು ಸಿಗುತ್ತಿದೆ.

More from Filmibeat

English summary
Kannada Production House Hombale films big plan with Brahmarakshasa?
Read more about: prabhas hombale films tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X