320 ಕೋಟಿ ವೆಚ್ಚದ ಕನಸಿನ ಮನೆ ನಿರ್ಮಾಣಕ್ಕೆ ಮುಂದಾದ ಪ್ರಭಾಸ್

By ರವೀಂದ್ರ ಕೊಟಕಿ

ಪ್ರಭಾಸ್... ಪ್ರಸ್ತುತ ಭಾರತದಲ್ಲಿ ಇದೊಂದು ಸೆನ್ಸೇಷನಲ್. ಏಷ್ಯಾದ ಟಾಪ್ ಒನ್ ನಟನಾಗಿ ಇತ್ತೀಚೆಗಷ್ಟೇ ಗುರುತಿಸಲ್ಪಟ್ಟಿರುವ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಪ್ರಸ್ತುತ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಯಾವುದೇ ಚಿತ್ರ ಬಜೆಟ್ ದೃಷ್ಟಿಯಿಂದ ನೋಡಿದರೆ, ಯಾವುದೇ ಚಿತ್ರವೂ ಕೂಡ 300 ಕೋಟಿಗಿಂತ ಕಡಿಮೆ ಇಲ್ಲ. ಮುಂಬರುವ 'ಆದಿಪುರುಷ್' ಚಿತ್ರದ ಬಜೆಟ್ ಸುಮಾರು 500 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದ ಬಜೆಟ್ ಸುಮಾರು 300 ಕೋಟಿ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲಿರುವ 'ಸ್ಪಿರಿಟ್' ಚಿತ್ರದ ಬಜೆಟ್ 550 ಕೋಟಿ. ಇನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಲಿರುವ ಪ್ಯಾನ್ ವರ್ಲ್ಡ್ ಸಿನಿಮಾ 'ಪ್ರಾಜೆಕ್ಟ್ ಕೆ 'ಚಿತ್ರದ ಬಜೆಟ್ ಬರೋಬ್ಬರಿ 600 ಕೋಟಿ. ಇಡೀ ಭಾರತೀಯ ಸಿನಿಮಾ ರಂಗದಲ್ಲಿ ಇಷ್ಟು ದೊಡ್ಡ ಮಟ್ಟದ ಬಂಡವಾಳ ಬೇರೆ ಯಾವ ನಾಯಕರ ಸಿನಿಮಾಗಳ ಮೇಲೆ ಹೂಡಿಲ್ಲ. ಪ್ರಭಾಸ್ ಚಿತ್ರಗಳ ಒಟ್ಟು ಬಜೆಟ್ ಈಗ ಬರೋಬ್ಬರಿ ಎರಡು ಸಾವಿರ ಕೋಟಿಗೂ ಮೀರಿದ್ದು.

ಬಹುನಿರೀಕ್ಷಿತ ಪ್ರಭಾಸ್- ಪೂಜಾ ಹೆಗಡೆ ಅಭಿನಯದ, ರಾಧಾಕೃಷ್ಣ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ 'ರಾಧೇಶ್ಯಾಮ್' ಚಿತ್ರ ಜನವರಿ 14ರಂದು ಸಂಕ್ರಾಂತಿಯ ಕಾಣಿಕೆಯಾಗಿ ಪ್ರಭಾಸ್ ಅಭಿಮಾನಿಗಳ ಮುಂದೆ ಬರಲಿದೆ. ತೆಲುಗು ಜೊತೆಗೆ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ 'ರಾಧೇಶ್ಯಾಮ್' ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿದ್ದು ಪ್ರಭಾಸ್ ಅಭಿಮಾನಿಗಳ ಜೊತೆಗೆ ಜನಸಾಮಾನ್ಯರು ಕೂಡ ಕಾತರದಿಂದ 'ರಾಧೇಶ್ಯಾಮ್'' ನೋಡಲು ಎದುರು ನೋಡುತ್ತಿದ್ದಾರೆ.

ಬಾಲಿವುಡ್‌ನಲ್ಲಿ ಹಲವು ಹೀರೋಗಳು ಅನೇಕ ಹಿಟ್ ಸಿನಿಮಾಗಳ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರೂ ಬೆರಳೆಣಿಕೆಯಷ್ಟು ಮಂದಿ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದಿದ್ದಾರೆ. ಆದರೆ, ಪ್ರಭಾಸ್ ಒಂದೇ ಚಿತ್ರದ ಮೂಲಕ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದರು. ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರದ ಮೂಲಕ ಪ್ರಭಾಸ್ ಖ್ಯಾತಿ ಖಂಡಗಳನ್ನು ದಾಟಿದೆ. ಈಗ ಅವರ ಹೆಸರು ಪ್ರಪಂಚದಾದ್ಯಂತ ಹರಡಿದೆ. ಚಿತ್ರವೊಂದಕ್ಕೆ ಸುಮಾರು 150 ಕೋಟಿ ಹಣ ಪಡೆಯುವ ಪ್ರಭಾಸ್ ಏಷ್ಯಾದಲ್ಲೇ ಟಾಪ್ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಟನೆಯಲ್ಲಿ ಆಸಕ್ತಿ ಇರಲಿಲ್ಲ

ನಟನೆಯಲ್ಲಿ ಆಸಕ್ತಿ ಇರಲಿಲ್ಲ

ಪ್ರಭಾಸ್ ನಿಜವಾದ ಹೆಸರು ಉಪ್ಪಲಪಾಟಿ ಪ್ರಭಾಸ್ ರಾಜು. ಅವರು ಅಕ್ಟೋಬರ್ 23, 1979 ರಂದು ಚೆನ್ನೈನಲ್ಲಿ ಶಿವ ಕುಮಾರಿ-ಸೂರ್ಯನಾರಾಯಣ ರಾಜು ದಂಪತಿಗಳಿಗೆ ಜನಿಸಿದರು. ಇವರ ಹುಟ್ಟೂರು ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರು. ಪ್ರಭಾಸ್‌ಗೆ ಸಹೋದರ ಪ್ರಬೋಧ್ ಮತ್ತು ತಂಗಿ ಪ್ರಗತಿ ಇದ್ದಾರೆ. ಪ್ರಭಾಸ್ ಅವರ ತಂದೆ ಸೂರ್ಯನಾರಾಯಣ ರಾಜು ಅವರು ತೆಲುಗಿನಲ್ಲಿ 'ಭಕ್ತ ಕಣ್ಣಪ್ಪ', 'ಕೃಷ್ಣವೇಣಿ' ಮತ್ತು 'ಅಮರದೀಪಂ' ಮುಂತಾದ ಪ್ರತಿಷ್ಠಿತ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ಅನಾರೋಗ್ಯದಿಂದ 2010 ರಲ್ಲಿ ನಿಧನರಾದರು. ಪ್ರಭಾಸ್ ಗೆ ಆರಂಭದಲ್ಲಿ ನಟನೆಯಲ್ಲಿ ಆಸಕ್ತಿಯೇ ಇರಲಿಲ್ಲ. ಇಂಜಿನಿಯರಿಂಗ್ ಪದವೀಧರನಾದ ಪ್ರಭಾಸ್ ವ್ಯಾಪಾರದತ್ತ ಹೆಜ್ಜೆ ಇಡಲು ಬಯಸಿದ್ದರು. ಪ್ರಭಾಸ್ ಅವರ ದೊಡ್ಡಪ್ಪ ಖ್ಯಾತ ನಟ ರೆಬಲ್ ಸ್ಟಾರ್ ಕೃಷ್ಣಂರಾಜು ಅವರ ಒತ್ತಾಸೆಯ ಮೇರೆಗೆ ಚಿತ್ರರಂಗ ಪ್ರವೇಶಿಸಿದರು. 'ಈಶ್ವರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಭಾಸ್ ಆ ನಂತರ ರಾಘವೇಂದ್ರ, ವರ್ಷಂ, ಚಕ್ರಂ, ಅಡವಿರಾಮುಡು, ಛತ್ರಪತಿ, ಬಿಲ್ಲ, ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್, ಮಿರ್ಚಿ ಚಿತ್ರಗಳಲ್ಲಿ ನಟಿಸಿ ತೆಲುಗು ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಸಂಪಾದಿಸಿಕೊಂಡರು.

ರಾಜಮೌಳಿ ಜೊತೆ ಮೊದಲು ಮಾಡಿದ್ದು 'ಛತ್ರಪತಿ'

ರಾಜಮೌಳಿ ಜೊತೆ ಮೊದಲು ಮಾಡಿದ್ದು 'ಛತ್ರಪತಿ'

' ವರ್ಷಂ' ಸಿನಿಮಾ ಪ್ರಭಾಸ್ ಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಚಕ್ರಂ, ಛತ್ರಪತಿ, ಮಿಸ್ಟರ್ ಪರ್ಫೆಕ್ಟ್ ಮತ್ತು ಮಿರ್ಚಿಯಂತಹ ಚಿತ್ರಗಳು ಪ್ರಭಾಸ್‌ನಲ್ಲಿರುವ ವೈವಿಧ್ಯಮಯ ನಟನನ್ನು ಬೆಳಕಿಗೆ ತಂದಿವೆ. ಎಸ್ ಎಸ್ ರಾಜಮೌಳಿ ನಿರ್ದೇಶನದ 'ಛತ್ರಪತಿ' ಚಿತ್ರದ ಮೂಲಕ ಪ್ರಭಾಸ್ ಸ್ಟಾರ್ ನಟನಾಗಿ ಬೆಳಕಿಗೆ ಬಂದರು. ಅದೇ ಸಮಯದಲ್ಲಿ ಪ್ರಭಾಸ್ ಅವರ ಡೆಡಿಕೇಶನ್ ನೋಡಿದ ರಾಜಮೌಳಿ 'ಮುಂದೆ ನಿನ್ನ ಜೊತೆ ಭಾರಿ ಚಿತ್ರ ಮಾಡುತ್ತೇನೆ' ಅಂತ ಹೇಳಿದ್ದರಂತೆ. ಸುಮಾರು ಹತ್ತು ವರ್ಷಗಳ ನಂತರ ರಾಜಮೌಳಿ ಕರೆದು 'ಬಾಹುಬಲಿ' ಚಿತ್ರದಲ್ಲಿ ಅವಕಾಶ ಕೊಟ್ಟರು. ಎಸ್.ಎಸ್. ರಾಜಮೌಳಿ ನಿರ್ದೇಶನದ 'ಛತ್ರಪತಿ' ಚಿತ್ರ ಪ್ರಭಾಸ್ ಅವರನ್ನು ತೆಲುಗಿನಲ್ಲಿ ಪ್ರಸಿದ್ಧ ನಟನನ್ನಾಗಿ ಮಾಡಿತು. ಪೂರಿ ಜಗನ್ನಾಥ್ ನಿರ್ದೇಶನದ 'ಬುಜ್ಜಿಗಾಡು' ಚಿತ್ರದಲ್ಲಿ ಪ್ರಭಾಸ್ ಡೈಲಾಗ್‌ಗಳ ವೈವಿಧ್ಯದಿಂದ ಪ್ರಸಿದ್ಧರಾದರು.

ಏಕಾಂತ ಜೀವನ ಬಯಸುವ ನಟ

ಏಕಾಂತ ಜೀವನ ಬಯಸುವ ನಟ

ಸಾಧಾರಣವಾಗಿ ನಟ-ನಟಿಯರು ಹೆಚ್ಚಾಗಿ ಹೊರಗೆ ಸುತ್ತಾಡಲು, ಪಾರ್ಟಿ ಮಾಡಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಪ್ರಭಾಸ್ ಒಂಟಿಯಾಗಿರಲು ಇಷ್ಟಪಡುತ್ತಾರೆ.

'ಚಕ್ರಂ' ಚಿತ್ರದಲ್ಲಿನ 'ಜಗಮಂತ ಕುಟುಂಬ ನಾದಿ ಏಕಾಕಿ ಜೀವಿತಂ ನಾದಿ' ಹಾಡು ಅವರ ಜೀವನಕ್ಕೆ ತುಂಬಾ ಹತ್ತಿರದಲ್ಲಿದೆ ಎಂದು ಹಲವರು ಭಾವಿಸುತ್ತಾರೆ. ಪ್ರಭಾಸ್ ತನ್ನ ಆತ್ಮೀಯ ಸ್ನೇಹಿತರನ್ನು ಹೊರತಾಗಿ ಹೆಚ್ಚಿಗೆ ಇತರರ ಜೊತೆ ಹೆಚ್ಚಿಗೆ ಕಾಲ ಕಳೆಯುವುದಿಲ್ಲ. ಅವರು ಹೆಚ್ಚಾಗಿ ಏಕಾಂಗಿಯಾಗಿರಲು ಬಯಸುತ್ತಾರೆ. ಸದ್ಯ ಪ್ರಭಾಸ್ ತಮ್ಮ ತಾಯಿ ಶಿವಕುಮಾರಿ ಜೊತೆ ಹೈದರಾಬಾದ್ ನಲ್ಲಿ ವಾಸವಾಗಿದ್ದಾರೆ. ಟಾಲಿವುಡ್ ನಲ್ಲಿ ಗೋಪಿಚಂದ್, ಅಲ್ಲು ಅರ್ಜುನ್, ರಾಣಾ ಮತ್ತು ಮಂಚು ಮನೋಜ್ ಪ್ರಭಾಸ್ ಗೆ ಒಳ್ಳೆಯ ಸ್ನೇಹಿತರು.

ಪ್ರಭಾಸ್ ಮದುವೆ ಯಾವಾಗ?

ಪ್ರಭಾಸ್ ಮದುವೆ ಯಾವಾಗ?

ಕಟ್ಟಪ್ಪ, ಬಾಹುಬಲಿ ಅನ್ನು ಯಾಕೆ ಕೊಂದ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಆದರೆ ಈ 42 ವರ್ಷದ ಪ್ಯಾನ್ ಇಂಡಿಯಾ ಸ್ಟಾರ್ ಮದುವೆ ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಪ್ರಭಾಸ್ ಮದುವೆ ಬಗ್ಗೆ ಹಲವು ವದಂತಿಗಳಿವೆ. ಈ ಹಿಂದೆ ಒಂದಿಬ್ಬರು ನಾಯಕಿಯರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಎಂಬ ಗಾಸಿಪ್ ಗಳು ಬಂದಿತ್ತು. ಪ್ರಭಾಸ್ ಬೆಂಗಳೂರಿನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೂಡ ಬಂದಿತ್ತು. ಆನಂತರ ಭೀಮಾವರಂ ಹುಡುಗಿ ಜೊತೆ ಎಂಗೇಜ್ಮೆಂಟ್ ಆಗಿದೆ ಎಂಬ ಸುದ್ದಿ ಕೂಡ ಬಂತು. ಮದುವೆ ಬಗ್ಗೆ ಎಷ್ಟೇ ಪ್ರಶ್ನೆ ಮಾಡಿದ್ರೂ ಪ್ರಭಾಸ್ ಆಗಲಿ, ಕುಟುಂಬಸ್ಥರಾಗಲಿ ಇದುವರೆಗೂ ಸ್ಪಷ್ಟನೆ ನೀಡಿಲ್ಲ.ಬಾಹುಬಲಿ ಚಿತ್ರಕ್ಕಾಗಿ ಪ್ರಭಾಸ್ ಮಿಸ್ಟರ್ ವರ್ಲ್ಡ್ 2010 ಲಕ್ಷ್ಮಣ್ ರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಅವರು ಕೆಲವೇ ತಿಂಗಳುಗಳಲ್ಲಿ 80 ಕೆಜಿಯಿಂದ 102 ಕೆಜಿಗೆ ಏರಿದರು. ಚಿತ್ರಕ್ಕಾಗಿ ಪ್ರಭಾಸ್ ತಮ್ಮ ಮನೆಯಲ್ಲಿ 1.5 ಕೋಟಿ ರೂಪಾಯಿಗೆ ವಿಶೇಷ ಜಿಮ್ ಸ್ಥಾಪಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ಬಾಲಿವುಡ್‌ನಲ್ಲಿ ಪ್ರಭಾಸ್ ಅವರ ನೆಚ್ಚಿನ ನಿರ್ದೇಶಕ, ಅವರ ನಿರ್ದೇಶನದ ಮುನ್ನಾಭಾಯ್ ಎಂಬಿಬಿಎಸ್ ಮತ್ತು 3 ಈಡಿಯಟ್ಸ್ ಸಿನಿಮಾಗಳನ್ನು 20 ಬಾರಿ ನೋಡಿದ್ದೇನೆ ಎಂದು ಪ್ರಭಾಸ್ ಹೇಳಿದ್ದಾರೆ. ಪ್ರಭಾಸ್‌ಗೆ ವಾಲಿಬಾಲ್, ಕತ್ತಿವರಸೆ ಮತ್ತು ರಾಕ್ ಕ್ಲೈಂಬಿಂಗ್ ಇಷ್ಟ.

ಡಾರ್ಲಿಂಗ್ ಹೊಸ ಮನೆ 320 ಕೋಟಿ!

ಡಾರ್ಲಿಂಗ್ ಹೊಸ ಮನೆ 320 ಕೋಟಿ!

ಅಭಿಮಾನಿಗಳಿಂದ 'ಡಾರ್ಲಿಂಗ್' ಅಂತ ಪ್ರೀತಿಯಿಂದ ಕರೆಸಿಕೊಳ್ಳುವ ಪ್ರಭಾಸ್ ಪ್ರಸ್ತುತ ತನ್ನ ತಾಯಿಯೊಂದಿಗೆ ಹೈದರಾಬಾದ್ ನ ಪ್ರತಿಷ್ಠಿತ ಜುಬ್ಲಿಹಿಲ್ಸ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆದರೆ ಈಗ ಪ್ರಭಾಸ್ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅದು ಕೂಡ ಹೈದರಾಬಾದ್ ನ ಹೊರವಲಯದಲ್ಲಿರುವ ನಾನಕ್ ರಾಮ್ ಗೂಡ ದಲ್ಲಿ, ಪ್ರಭಾಸ್ ತನ್ನ ಕನಸಿನ ಮನೆಯ ನಿರ್ಮಾಣಕ್ಕೆಂದು ಇಲ್ಲಿ ಎರಡು ಎಕರೆ ಪ್ರದೇಶವನ್ನು ಖರೀದಿ ಮಾಡಿದ್ದಾರೆ. ಅದು ಕೂಡ ಬರೋಬ್ಬರಿ 120 ಕೋಟಿ ರೂಪಾಯಿ ಕೊಟ್ಟು. ಇನ್ನು ಮನೆ ನಿರ್ಮಾಣಕ್ಕೆ ಅಂತಲೇ 200ಕೋಟಿ ವ್ಯಯಸುತ್ತಿದ್ದಾರೆ. ಅಲ್ಲಿಗೆ ಒಟ್ಟು ವೆಚ್ಚ 320 ಕೋಟಿ. ಪ್ರಸ್ತುತ ಇರುವ ಜೂಬ್ಲಿಹಿಲ್ಸ್ ಪ್ರದೇಶ ಜನದಟ್ಟಣೆಯಿಂದ ಕೂಡಿದ್ದು, ಏಕಾಂತದ ಜೀವನಕ್ಕೆ ಅಡಚಣೆಯಾಗುತ್ತಿದೆ ಅಂತ ಡಾರ್ಲಿಂಗ್ ಭಾವಿಸಿದ್ದು ಅದಕ್ಕಾಗಿ ಹೊರವಲಯಕ್ಕೆ ಶಿಫ್ಟ್ ಆಗುತ್ತಿದ್ದಾರೆ ಅಂತ ಹೇಳಲಾಗುತ್ತಿದೆ.ಅಲ್ಲದೆ ಈಗ ಖರೀದಿ ಮಾಡಿರುವ ಜಾಗ ಕೂಡ ಹೈದರಾಬಾದ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಗೆ ಹತ್ತಿರದಲ್ಲಿದೆಯಂತೆ. ಸುತ್ತಲೂ ಸುಂದರವಾದ ಮತ್ತು ಏಕಾಂತದಿಂದ ಕೂಡಿರುವ ಪ್ರದೇಶವಾಗಿದ್ದು ಎಲ್ಲತರದ ಅನುಕೂಲಗಳು ಇಲ್ಲಿದೆ ಅಂತ ಭಾವಿಸಿ ಇಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಪ್ರಭಾಸ್ ಅಂತ ಹೇಳಲಾಗುತ್ತಿದೆ. ಮನೆ ಕಟ್ಟಿದ ಮೇಲಾದರೂ ಮದುವೆಗೆ ಮನಸ್ಸು ಮಾಡಬಹುದೇ ಪ್ರಭಾಸ್ ಅಂತ ಅವರ ಅಭಿಮಾನಿಗಳು ಯೋಚಿಸುತ್ತಿದ್ದಾರೆ.

More from Filmibeat

English summary
Prabhas to build his dream house worth of 320 cores, He has bought two acres of land on the outskirts of Hyderabad for Rs 120 crores. 200 crores to build the house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X