KGF 3 ನಲ್ಲಿ ಯಶ್ ಜೊತೆ ಪ್ರಭಾಸ್ ನಟಿಸೋದು ಫಿಕ್ಸ್!

ರಾಕಿಭಾಯ್ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅಭಿನಯದ 'KGF2' ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತಿದೆ. ಒಂದಾದ ಮೇಲೆ ಒಂದು ದಾಖಲೆ ಬರೆಯುತ್ತಿರುವ 'KGF2' ಅಬ್ಬರದ ನಡುವೆ 'KGF 3' ಯಲ್ಲಿ ಟಾಲಿವುಡ್ ಸ್ಟಾರ್ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ. ಹೌದು, ಡಾರ್ಲಿಂಗ್ ಪ್ರಭಾಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸದ್ಯ ಸ್ಟಾರ್ ನಟರ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇವರಿಗೆ ಇವರದೆ ಆದ ದೊಡ್ಡ ಫ್ಯಾನ್ಸ್ ಬಳಗ ಕೂಡ ಇದೆ. ಇವರಿಬ್ಬರು 'KGF' ಹಾಗೂ 'ಬಾಹುಬಲಿ' ಚಿತ್ರದ ಅಭಿನಯದಿಂದ ಅದೆಷ್ಟೋ ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ.

ಸದ್ಯ ಫ್ಯಾನ್ಸ್ ಗಳು ಇವರನ್ನು ದೊಡ್ಡ ಪರದೆಯ ಮೇಲೆ ನೋಡಲು ಕಾತುರದಿಂದ ಕಾದುಕುಳಿತ್ತಿದ್ದಾರೆ. ಪ್ರಭಾಸ್ , ಯಶ್ ಯಾವಾಗ ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ 'KGF2' ಚಿತ್ರ ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಸದ್ಯ ಪ್ರಶಾಂತ್ ನೀಲ್ ಅವರ ಬಹು ನಿರೀಕ್ಷಿತ ಚಿತ್ರ 'ಸಲಾರ್' ನಲ್ಲಿ ಪ್ರಭಾಸ್ ಜೊತೆ ಕೆಲಸ ಮಾಡುತ್ತಿದ್ದಾರೆ.

ಇದರ ಜೊತೆ 'KGF 3' ಬರುತ್ತೆ ಎಂದು ಪ್ರಶಾಂತ್ ನೀಲ್ ಈಗಾಗಲೇ ಖಚಿತಪಡಿಸಿದ್ದಾರೆ. 'KGF 3' ಸಿನಿಮಾ ಮಾಡಬೇಕಾದರೆ ಏನಿಲ್ಲವಾದರೂ ಬರೋಬ್ಬರಿ ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಈ ಎಲ್ಲದರ ನಡುವೆ ಡಾರ್ಲಿಂಗ್ ಪ್ರಭಾಸ್ ಕೆಜಿಎಫ್ 3ನಲ್ಲಿ ನಟಿಸುವ ಸಾಧ್ಯತೆಯಿದೆಯಂತೆ. ಪ್ರಭಾಸ್ ಬಹುಶಃ ಯಶ್ ಅವರ ಕೆಜಿಎಫ್ 3 ನಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.

Prabhas will be seen in Cameo In KGF 3?

ಸದ್ಯ ಯಶ್ ಅಭಿನಯದ 'KGF 3' ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. 'KGF 3' ಸಿನಿಮಾವನ್ನು ಪ್ರಶಾಂತ್ ನೀಲ್ ಹೇಗೆ ಮಾಡುತ್ತಾರೆ ಎಂದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿದೆ. 'KGF 3' ನಲ್ಲಿ ಪ್ರಭಾಸ್ ಮತ್ತು ಯಶ್ ಒಟ್ಟಿಗೆ ಕಾಣಿಸಿಕೊಂಡರೆ ಚಿತ್ರವನ್ನು ಊಹಿಯಿಸಿಕೊಳ್ಳೊಕ್ಕೆ ಆಗೊದಿಲ್ಲ. ಯಾಕಂದ್ರೆ ಬಾಕ್ಸ್ ಆಫೀಸ್ ಕಲೆಕ್ಷನ್ ಸುನಾಮಿ ಸೃಷ್ಟಿಸುತ್ತದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

Prabhas will be seen in Cameo In KGF 3?

ಇಲ್ಲಿ ಮತ್ತೊಂದು ಗಾಸಿಪ್ ಕೂಡ ಕೇಳಿ ಬರುತ್ತಿದೆ. ಅದೇನು ಅಂದರೆ 'KGF2' ಸಿನಿಮಾದಲ್ಲಿ ಅಧೀರನ ಎಂಟ್ರಿ ಸೀನ್​ನಲ್ಲಿ ಒಂದು ಹುಡುಗ ಹೆಚ್ಚು ಕಾಟ ಕೊಡುತ್ತಾನೆ. ತಮಿಳು ನಟ ಶರಣ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಕಿ ಭಾಯ್​ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಾನೆ. ಆಗ ಅಧೀರನ ಪಡೆ ಆತನನ್ನು ಕೊಲ್ಲುವ ಹಾಗೆ ತೋರಿಸಲಾಗಿದೆ. ಆದರೆ, ಆ ಹುಡುಗನೇ 'ಸಲಾರ್'​ ಸಿನಿಮಾದ ಪ್ರಭಾಸ್​ ಎಂದು ಹೇಳಲಾಗುತ್ತಿದೆ.

Prabhas will be seen in Cameo In KGF 3?

ಯಾಕೆಂದರೆ ಆ ಹುಡುಗ ಸತ್ತಿದ್ದಾನೆ ಎಂದಷ್ಟೇ ತೋರಿಸಲಾಗಿದೆ. ಆದರೆ, ಆತನ ಮೃತದೇಹವನ್ನು ನೋಡಲು ಅವರ ತಾಯಿಗೂ ಬಿಡುವುದಿಲ್ಲ. ಹೀಗಾಗಿ ಆ ಹುಡುಗನೇ ದೊಡ್ವನಾಗಿ 'ಸಲಾರ್'​ ಸಿನಿಮಾದಲ್ಲಿ ಪ್ರಭಾಸ್​ ಆಗಿ ಬರ್ತಾನೆ ಎಂದು ಹೇಳಲಾಗುತ್ತಿದೆ. ಅಂದರೆ 'ಸಲಾರ್' ಚಿತ್ರ ಮತ್ತು 'ಕೆಜಿಎಫ್​ 3' ಸಿನಿಮಾ ಎರಡೂ ಒಂದೇ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಆದರೇ ಈ ಸುದ್ದಿಗಳು ಎಷ್ಟು ನಿಜ ಅನ್ನೋದನ್ನು ಚಿತ್ರತಂಡವೇ ಖಚಿತಪಡಿಸಬೇಕಿದೆ.

More from Filmibeat

English summary
Rebel star Prabhas is likely to make in cameo KGF 3. Rumor mills suggest that Prabhas will probably make a guest appearance in Yash's KGF 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X