»   » ಕೋಟ್ಯಾಧಿಪತಿಗೆ ನಿರೂಪಕನಾಗಿ ಕನ್ನಡದ ಪ್ರಕಾಶ್ ರೈ?

ಕೋಟ್ಯಾಧಿಪತಿಗೆ ನಿರೂಪಕನಾಗಿ ಕನ್ನಡದ ಪ್ರಕಾಶ್ ರೈ?

Posted By:
Subscribe to Filmibeat Kannada
 Prakash Rai to host Crorepati Tamil version
ಕನ್ನಡ, ಮಲಯಾಳಂ ಮತ್ತು ತಮಿಳಿನಲ್ಲಿ ಹೆಚ್ಚುಕಮ್ಮಿ ಏಕಕಾಲದಲ್ಲಿ ಶುರುವಾದ ಕೋಟ್ಯಾಧಿಪತಿ ರಿಯಾಲಿಟಿ ಶೋ ಗೆದ್ದಿದ್ದು ಕನ್ನಡ ಮತ್ತು ಮಲಯಾಳಂನಲ್ಲಿ ಮಾತ್ರ.

'ಕನ್ನಡದ ಕೋಟ್ಯಾಧಿಪತಿ' ಎಂದು ಪುನೀತ್ ರಾಜಕುಮಾರ್ ಸುವರ್ಣ ಟಿವಿಯಲ್ಲಿ, 'ನೀನ್ಗಲಂ ವೆಲ್ಲಲಾಂ ಒರು ಕೋಟಿ' ಎಂದು ತಮಿಳಿನಲ್ಲಿ ನಟ ಸೂರ್ಯ ವಿಜಯ್ ಟಿವಿಯಲ್ಲಿ ಮತ್ತು ಮಲಯಾಳಂನಲ್ಲಿ 'ನಿನ್ಗಲ್ಕಕುಂ ಆಕಾಂ ಕೊಡೇಶ್ವರನ್' ಎನ್ನುವ ಹೆಸರಿನಲ್ಲಿ ನಟ ಸುರೇಶ್ ಗೋಪಿ ಏಷ್ಯಾ ನೆಟ್ ವಾಹಿನಿಯಲ್ಲಿ ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಆದರೆ ತಮಿಳು ಚಿತ್ರರಂಗದಲ್ಲಿ ನಟ ಸೂರ್ಯನಿಗೆ ಅಪಾರ ಜನಪ್ರಿಯತೆ ಇದ್ದರೂ ಈ ರಿಯಾಲಿಟಿ ಶೋ ಮೂಲಕ ವಿಜಯ್ ಟಿವಿಯ TRP ಹೆಚ್ಚಿಸುವಲ್ಲಿ ಸೂರ್ಯ ವಿಫಲರಾಗಿದ್ದರು.

ಹಾಗಾಗಿ, ತಮಿಳಿನಲ್ಲಿ ಮತ್ತೆ ಶುರುವಾಗಲಿರುವ ಕೋಟ್ಯಾಧಿಪತಿ ಶೋ ನಡೆಸಿಕೊಡಲು ಕನ್ನಡದ ಪ್ರಕಾಶ್ ರೈ ಬರಲಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ.

ವಿಜಯ್ ಟಿವಿಯವರು ಮುಂದಿನ ಸೀಸನ್ ನಡೆಸಿಕೊಡಲು ಪ್ರಕಾಶ್ ರೈ ಅವರನ್ನು ಸಂಪರ್ಕಿಸಿದ್ದಾರೆ ಎನ್ನುವ ಸುದ್ದಿ ತಮಿಳು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ.

ಪ್ರಕಾಶ್ ರೈಗಿರುವ ಸದ್ಯದ ಟೈಟ್ ಸೆಡ್ಯೂಲ್ ಮಧ್ಯೆ ಈ ಕಾರ್ಯಕ್ರಮ ಒಪ್ಪಿಕೊಳ್ಳಲು ಅವರು ಕೊಂಚ ಬಿಡುವು ಮಾಡಿಕೊಳ್ಳಬೇಕಾಗುತ್ತದೆ. ಅದು ಏನಾಗುತ್ತೋ ಎನ್ನುವುದು ಪ್ರಕಾಶ್ ರೈಗೆ ಬಿಟ್ಟ ವಿಚಾರ.

ಬಿಗ್ ಸಿನರ್ಜಿ ಪ್ರೊಡಕ್ಷನ್ ಹೌಸ್ ಮೂಲಕ ಮೂಡಿ ಬಂದ ಈ ರಿಯಾಲಿಟಿ ಶೋ ಕನ್ನಡದಲ್ಲಂತೂ ಭಾರೀ ಜನಪ್ರಿಯಗೊಂಡಿತ್ತು ಅಲ್ಲದೆ ನಿರೂಪಕರಾಗಿದ್ದ ಪುನೀತ್ ರಾಜಕುಮಾರ್ ಅವರ ಸ್ಟಾರ್ ವ್ಯಾಲ್ಯೂ ಮತ್ತಷ್ಟು ಮೇಲಕ್ಕೇರಿತ್ತು.

English summary
Report says, for the next season of Tamil version of 'Crorepati' Vijay TV approached Prakash Rai/Prakash Raj.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada