ಪವನ್ ಕಲ್ಯಾಣ್ ನಟನೆ ಬಿಗ್‌ ಬಜೆಟ್ ಸಿನಿಮಾಕ್ಕೆ ಕನ್ನಡತಿ ನಾಯಕಿ?

ಖ್ಯಾತ ನಟ ಪವನ್ ಕಲ್ಯಾಣ್ ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಎರಡು ವರ್ಷಗಳ ಬಳಿಕ ಪವನ್ ನಟಿಸಿರುವ ವಕೀಲ್ ಸಾಬ್ ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಅದರ ನಂತರ ಐತಿಹಾಸಿಕ ಕತೆಯುಳ್ಳ ವಿರೂಪಾಕ್ಷ ಸಿನಿಮಾದಲ್ಲಿ ನಟಿಸಲಿದ್ದಾರೆ ಪವನ್.

ಪವನ್ ಕಲ್ಯಾಣ್ ನಟನೆಯ ವಿರೂಪಾಕ್ಷ ಸಿನಿಮಾದ ಬಗ್ಗೆ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿದೆ. ಪವನ್ ನಟಿಸುತ್ತಿರುವ ಮೊದಲ ಐತಿಹಾಸಿಕ ಸಿನಿಮಾ ಇದು.

ಭಾರಿ ಬಜೆಟ್‌ ನ ವಿರೂಪಾಕ್ಷಾ ಸಿನಿಮಾದಲ್ಲಿ ಪವನ್ ಎದುರಾಗಿ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಸಹ ಅಭಿಮಾನಿಗಳಲ್ಲಿ ಎದ್ದಿದ್ದು. ಕನ್ನಡದ ನಟಿಯೊಬ್ಬರು ವಿರೂಪಾಕ್ಷ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಗಟ್ಟಿಯಾಗಿಯೇ ಕೇಳಿಬರುತ್ತಿದೆ.

ಪವನ್ ಸಿನಿಮಾದಲ್ಲಿ ಪ್ರಣಿತಾ ನಾಯಕಿ?

ಪವನ್ ಸಿನಿಮಾದಲ್ಲಿ ಪ್ರಣಿತಾ ನಾಯಕಿ?

ಹೌದು, ಕನ್ನಡತಿ ಪ್ರಣಿತಾ ಸುಭಾಷ್, ವಿರೂಪಾಕ್ಷ ಸಿನಿಮಾದಲ್ಲಿ ಪವನ್ ಕಲ್ಯಾಣ್ ಗೆ ಜೊತೆಯಾಗಿ ನಟಿಸಲಲು ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಪವನ್ ಕಲ್ಯಾಣ್ ಜೊತೆಗೆ 'ಅತ್ತಾರಿಂಟಿಕಿ ದಾರೇದಿ' ಸಿನಿಮಾದಲ್ಲಿ ಪ್ರಣಿತಾ ನಟಿಸಿದ್ದರು.

ಪ್ರಣಿತಾ ಜೊತೆಗೆ ಮತ್ತೊಬ್ಬ ನಾಯಕಿ?

ಪ್ರಣಿತಾ ಜೊತೆಗೆ ಮತ್ತೊಬ್ಬ ನಾಯಕಿ?

ಪ್ರಣಿತಾ ಸುಭಾಶ್ ಅವರೊಟ್ಟಿಗೆ ಸಿನಿಮಾದಲ್ಲಿ ಮತ್ತೊಬ್ಬ ನಟಿಯೂ ಇರಲಿದ್ದಾರೆ ಎನ್ನಲಾಗುತ್ತಿದೆ. ಆ ನಟಿ ಯಾರೆಂಬುದು ಇನ್ನೂ ಖಾತ್ರಿಯಾಗಿಲ್ಲ. ಆದರೆ ಪ್ರಣಿತಾ ಹೆಸರು ಬಹುತೇಕ ಅಂತಿಮವಾಗಿಯೆಂಬ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕ್ರಿಶ್

ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕ್ರಿಶ್

'ವಿರೂಪಾಕ್ಷ' ಸಿನಿಮಾವನ್ನು ಗಮ್ಯಂ, ವೇದಂ, ವಾನಂ, ಗಬ್ಬರ್ ಇಸ್ ಬ್ಯಾಕ್, ಕೃಷ್ಣಂ ವಂದೇ ಜಗದ್ಗುರು, ಗೌತಮಿ ಪುತ್ರ ಶಾತಕರ್ಣಿ, ಎನ್‌ಟಿಆರ್ ಕಥಾನಾಯಕುಡು, ಕಂಗನಾ ನಟಿಸಿದ್ದ ಮಣಿಕರ್ಣಿಕಾ ಸಿನಿಮಾಗಳನ್ನು ಕ್ರಿಶ್ ನಿರ್ದೇಶಿಸಿದ್ದಾರೆ.

Recommended Video

ACT-1978 : ಇದು ನನ್ ಸಿನಿಮಾನ ಅಂತ ನಂಗೆ ಕನ್ಫ್ಯೂಸ್ ಆಯ್ತು | Director Mansore | Filmibeat Kannada
ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ರೀಮೇಕ್

ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ರೀಮೇಕ್

ವಕೀಲ್ ಸಾಬ್, ವಿರೂಪಾಕ್ಷ ನಂತರ ಮಲಯಾಳಂ ನ ಸೂಪರ್ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ರೀಮೇಕ್‌ನಲ್ಲಿ ಪವನ್ ನಟಿಸಲಿದ್ದಾರೆ. ಆ ಸಿನಿಮಾದಲ್ಲಿ ಸುದೀಪ್ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದರ ನಂತರ ಸಾಗರ್ ಚಂದ್ರ, ಸುರೇಂದ್ರ ರೆಡ್ಡಿ ನಿರ್ದೇಶನದ ಸಿನಿಮಾಗಳಲ್ಲಿ ಸಹ ನಟಿಸಲಿದ್ದಾರೆ.

More from Filmibeat

English summary
Pranitha Subhash may act in Pawan Kalyan's Virupaksha movie as leading lady. Both were acted in Atharintiki Daredi movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X