ನೀಲ್- ತಾರಕ್ 'NTR31' ಬಗ್ಗೆ ಸ್ವೀಟ್ ಗಾಸಿಪ್: ಸ್ಯಾಂಡಲ್‌ವುಡ್‌ಗೆ ಜ್ಯೂ. ಎನ್‌ಟಿಆರ್ ಡೈರೆಕ್ಟ್ ಎಂಟ್ರಿ ಫಿಕ್ಸ್!
'KGF' ಸರಣಿ ನಂತರ ಪ್ರಶಾಂತ್ ನೀಲ್ 'ಸಲಾರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಜ್ಯೂ. ಎನ್‌ಟಿಆರ್ ಜೊತೆಗೂ ಒಂದು ಸಿನಿಮಾ ಘೋಷಿಸಿದ್ದಾರೆ. ಇನ್ನು ಹೆಸರಿಡದ ಈ ಚಿತ್ರವನ್ನು 'NTR31' ಎನ್ನುವ ಟೆಂಟಿಟಿವ್ ಟೈಟಲ್‌ನಿಂದ ಕರೆಯಲಾಗ್ತಿದೆ. ಸದ್ಯ ಈ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ನ್ಯೂಸ್ ಒಂದು ಹರಿದಾಡುತ್ತಿದೆ.
ಪ್ರಶಾಂತ್ ನೀಲ್ ನಾನು ಜ್ಯೂ. ಎನ್‌ಟಿಆರ್ ಅಭಿಮಾನಿ. ಅವರೊಟ್ಟಿಗೆ ಸಿನಿಮಾ ಮಾಡುವುದು ನನ್ನ ಕನಸು ಎಂದು ಹೇಳಿಕೊಂಡು ಬರುತ್ತಿದ್ದಾರೆ. 'KGF' ಸರಣಿ ಸಿನಿಮಾಗಳಲ್ಲಿ ನೀಲ್ ಟೇಕಿಂಗ್, ಎಲಿವೇಷನ್ ಸೀನ್ಸ್ ನೋಡಿದ ಮೇಲೆ 'NTR31' ಸಿನಿಮಾ ಮೇಲಿನ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೇರಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಕಾರಣಾಂತರಗಳಿಂದ ಕೊರಟಾಲ ಶಿವ ನಿರ್ದೇಶನದಲ್ಲಿ ಜ್ಯೂ. ಎನ್‌ಟಿಆರ್ ನಟಿಸಬೇಕಿರುವ ಸಿನಿಮಾ ತಡವಾಗುತ್ತಿದೆ. ಈ ವರ್ಷ ಬರಬೇಕಿದ್ದ 'ಸಲಾರ್' ಕೂಡ ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಿದೆ. ಯಾವಾಗ ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ಸೆಟ್ಟೇರುತ್ತೋ ಗೊತ್ತಿಲ್ಲ.
ಇತ್ತೀಚೆಗಿನ ಒಂದಷ್ಟು ಬೆಳವಣಿಗೆಗಳನ್ನು ಗಮನಿಸಿ ನಿರ್ದೇಶಕ ಪ್ರಶಾಂತ್ ನೀಲ್ 'NTR31' ಚಿತ್ರದ ವಿಚಾರದಲ್ಲಿ ಒಂದು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರಂತೆ. ಆ ಮೂಲಕ ತಾರಕ್ ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ಗೆ ಎಂಟ್ರಿ ಕೊಡುವ ಸುಳಿವು ಸಿಗುತ್ತಿದೆ.

ಕನ್ನಡದಲ್ಲೂ 'NTR31' ಚಿತ್ರ ನಿರ್ಮಾಣ?
ಹೌದು ಇಂತಾದೊಂದು ಗುಸುಗುಸು ಫಿಲ್ಮ್ ನಗರ್‌ನಲ್ಲಿ ಶುರುವಾಗಿದೆ. 'RRR' ಸಿನಿಮಾ ಮೂಲಕ ಜ್ಯೂ. ಎನ್‌ಟಿಆರ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. 'NTR31' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ. ಇದರಲ್ಲಿ ಏನು ವಿಶೇಷ ಇದೆ ಎಂದು ನಿಮಗೆ ಅನ್ನಿಸಬಹುದು. ಖಂಡಿತ ವಿಶೇಷ ಇದೆ. 'NTR31' ಕನ್ನಡಕ್ಕೆ ಬರೀ ಡಬ್ ಮಾಡದೇ ತೆಲುಗು ಜೊತೆಗೆ ಕನ್ನಡದಲ್ಲೇ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೀತಿದೆಯಂತೆ.

ಕನ್ನಡದಲ್ಲಿ ಡಬ್ ಮಾಡಲಿರುವ ತಾರಕ್
ಜ್ಯೂ. ಎನ್‌ಟಿಆರ್ ತಾಯಿ ಕುಂದಾಪುರದವರು. ಈ ಬಗ್ಗೆ ಸಾಕಷ್ಟು ಬಾರಿ ತಾರಕ್ ಹೇಳಿಕೊಂಡಿದ್ದಾರೆ. ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ರಾಜಮೌಳಿ ನಿರ್ದೇಶನದ 'RRR' ಚಿತ್ರಕ್ಕೆ ಜ್ಯೂ. ಎನ್‌ಟಿಆರ್ ಹಾಗೂ ರಾಮ್ ಚರಣ್ ತಮ್ಮ ತಮ್ಮ ಪಾತ್ರಗಳಿಗೆ ತಾವೇ ಡಬ್ ಮಾಡಿದ್ದರು. ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದ ಕಾರ್ಯಕ್ರಮಕ್ಕೆ ತಾರಕ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅಪ್ಪು ನೆನೆದು ಕನ್ನಡದಲ್ಲಿ ಅವರ ಭಾಷಣ ಕೇಳಿದವರು ಮೆಚ್ಚಿಕೊಂಡಿದ್ದರು.

ದ್ವಿಭಾಷೆಯಲ್ಲಿ 'NTR31' ನಿರ್ಮಾಣ
ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಡೆಡ್ಲಿ ಕಾಂಬಿನೇಷನ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕಿದೆ. ಫಸ್ಟ್ ಲುಕ್ ಪೋಸ್ಟರ್‌ನಿಂದಲೇ ನೀಲ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಇದೀಗ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತದೆ ಅನ್ನುವುದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ. 'RRR' ಕನ್ನಡ ವರ್ಷನ್‌ಗೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಪ್ರಶಾಂತ್ ನೀಲ್ ಸಿನಿಮಾ ಅಂದಮೇಲೆ ಬಹುತೇಕ ಕನ್ನಡ ತಂತ್ರಜ್ಞರೇ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ. ಹಾಗಾಗಿ ದ್ವಿಭಾಷೆಯಲ್ಲಿ ಸಿನಿಮಾ ಮೂಡಿ ಬಂದರೂ ಅಚ್ಚರಿಪಡಬೇಕಿಲ್ಲ.

ತಡವಾಗುತ್ತಿದೆ ಜ್ಯೂ. ಎನ್‌ಟಿಆರ್ ಚಿತ್ರ
'RRR' ಸಿನಿಮಾ ರಿಲೀಸ್ ಆಗಿ ಆರೇಳು ತಿಂಗಳು ಕಳೆದರೂ ಜ್ಯೂ. ಎನ್‌ಟಿಆರ್ ಹೊಸ ಸಿನಿಮಾ ಶುರುವಾಗಿಲ್ಲ. ಕೊರಟಾಲ ಶಿವ ನಿರ್ದೇಶನದ 'NTR30' ಸಿನಿಮಾ ತಡವಾಗುತ್ತಲೇ ಇದೆ. ಸದ್ಯ ಹೈದರಾಬಾದ್‌ನಲ್ಲಿ ಪ್ರಶಾಂತ್ ನೀಲ್ 'ಸಲಾರ್' ಚಿತ್ರದ ಹೊಸ ಶೆಡ್ಯೂಲ್ ಆರಂಭಿಸಿದ್ದಾರೆ. ತಾರಕ್, ಕೊರಟಾಲ ಶಿವ ಸಿನಿಮಾ ಮುಗಿಸಿದ ಮೇಲೆ ನೀಲ್ ನಿರ್ದೇಶನದಲ್ಲಿ ನಟಿಸಲಿದ್ದಾರೆ.


Click it and Unblock the Notifications











