For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್ ನೀಲ್-ಎನ್.ಟಿ.ಆರ್ ಚಿತ್ರಕ್ಕೆ ಬ್ರೇಕ್: ಇದು ಹೊಸ ಸುದ್ದಿ.!

  |

  ಕೆಜಿಎಫ್ ಚಿತ್ರದ ಮೂಲಕ ದೇಶಾದ್ಯಂತ ಪ್ರಚಾರ ಪಡೆದುಕೊಂಡ ನಿರ್ದೇಶಕ ಪ್ರಶಾಂತ್ ನೀಲ್, ಚಾಪ್ಟರ್ 2 ಪ್ರಾಜೆಕ್ಟ್ ನಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಯಾವ ಚಿತ್ರ ಎಂಬುದು ಈಗಲೇ ಚರ್ಚೆಯಾಗುತ್ತಿದೆ.

  ಸದ್ಯ ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಪ್ರಶಾಂತ್ ನೀಲ್ ತಮ್ಮ ಮುಂದಿನ ಚಿತ್ರವನ್ನ ಎನ್.ಟಿ.ಆರ್ ಜೊತೆಯಲ್ಲಿ ಮಾಡಬಹುದು ಎನ್ನಲಾಗುತ್ತಿದೆ. ಆದರೆ, ಇದು ಅಧಿಕೃತವಾಗಿಲ್ಲ.

  ಆ ಕಡೆ ರಾಜಮೌಳಿ ಜೊತೆ ಆರ್.ಆರ್.ಆರ್ ಮುಗಿಸಿದ ಬಳಿಕ ಪ್ರಶಾಂತ್ ಜೊತೆ ಮೆಗಾ ಸಿನಿಮಾಗೆ ತಾರಕ್ ಸೈ ಎಂದಿದ್ದು, ಮೈತ್ರಿ ಪ್ರೊಡಕ್ಷನ್ ಈ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದೆಯಂತೆ. ಈ ವಿಷ್ಯ ಕೇಳಿ ಥ್ರಿಲ್ ಆಗಿದ್ದ ಫ್ಯಾನ್ಸ್ ಗೆ ಈಗ ನಿರಾಸೆ ಸುದ್ದಿ ಎದುರಾಗಿದೆ.

  ಎನ್.ಟಿ.ಆರ್ ಕಟ್ಟಿಬೆಳೆಸಿದ ಪಕ್ಷದ ಉಳಿವು ಈ ಒಬ್ಬ ನಟನಿಂದ ಮಾತ್ರ ಸಾಧ್ಯ.!ಎನ್.ಟಿ.ಆರ್ ಕಟ್ಟಿಬೆಳೆಸಿದ ಪಕ್ಷದ ಉಳಿವು ಈ ಒಬ್ಬ ನಟನಿಂದ ಮಾತ್ರ ಸಾಧ್ಯ.!

  ಆರ್.ಆರ್.ಆರ್ ಮುಗಿಸಿದ ಬಳಿಕ ಎನ್.ಟಿ.ಆರ್ ತೆಲುಗು ನಿರ್ದೇಶಕ ತ್ರಿವಿಕ್ರಮ ಜೊತೆ ಇನ್ನೊಂದು ಚಿತ್ರ ಮಾಡಲು ಚಿಂತನೆ ನಡೆಸಿದ್ದಾರಂತೆ. ಈ ಹಿಂದೆ ತ್ರಿವಿಕ್ರಮ ಶ್ರೀನಿವಾಸ್ ಮತ್ತು ಎನ್.ಟಿ.ಆರ್ ಜೋಡಿಯಲ್ಲಿ ಬಂದಿದ್ದ 'ಅರವಿಂದ ಸಮೇತ ರಾಘವ' ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು.

  ತೆಲುಗಿನ ಸ್ಟಾರ್ ನಟನಿಗೆ 'ಕೆಜಿಎಫ್' ನಿರ್ದೇಶಕ ಆಕ್ಷನ್ ಕಟ್? ತೆಲುಗಿನ ಸ್ಟಾರ್ ನಟನಿಗೆ 'ಕೆಜಿಎಫ್' ನಿರ್ದೇಶಕ ಆಕ್ಷನ್ ಕಟ್?

  ಈ ಯಶಸ್ಸಿನ ಬಳಿಕ ಈಗ ಈ ಜೋಡಿ ಮತ್ತೆ ಒಂದಾಗುವ ಸೂಚನೆ ನೀಡಿದೆ. ಸದ್ಯ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಜೋಡಿಯ ಚಿತ್ರವನ್ನ ತ್ರಿವಿಕ್ರಮ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಎನ್.ಟಿ.ಆರ್ ಜೊತೆ ಕೈ ಜೋಡಿಸಲಿದ್ದಾರೆ.

  Prashanth Neel and NTR Movie Is Doubt

  ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಪ್ರಶಾಂತ್ ಮತ್ತು ಎನ್.ಟಿ.ಆರ್ ಕಾಂಬಿನೇಷನ್ ಚಿತ್ರಕ್ಕೆ ಜೀವ ಪಡೆದುಕೊಳ್ಳುತ್ತಾ ಅಥವಾ ಬರಿ ವದಂತಿ ಅಷ್ಟೇ ಎಂದುಕೊಂಡು ಸೈಲೆಂಟ್ ಆಗುತ್ತಾ ಕಾದುನೋಡಬೇಕಿದೆ.

  English summary
  Telugu actor junior ntr next movie with trivikram srinivas. then, what happened about prashanth neel project. it's confirmed or just gossip?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X