For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಚಿತ್ರದಲ್ಲಿ ಇಬ್ಬರು ನಾಯಕಿಯರು, ಒಬ್ಬರು ಬಾಲಿವುಡ್, ಇನ್ನೊಬ್ಬರು?

  |

  ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಪ್ರಭಾಸ್ ಜೊತೆ ಮಾಡುತ್ತಿದ್ದಾರೆ. ಸಲಾರ್ ಎಂದು ಈ ಚಿತ್ರಕ್ಕೆ ಹೆಸರಿಟ್ಟಿದ್ದು ಹೊಂಬಾಳೆ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಕೆಜಿಎಫ್ ಚಿತ್ರೀಕರಣ ಸಂಪೂರ್ಣವಾಗಿ ಮುಗಿಯುತ್ತಿದ್ದು, ಜನವರಿಯಿಂದ ಸಲಾರ್ ಶೂಟಿಂಗ್ ಆರಂಭವಾಗಲಿದೆಯಂತೆ.

  ಬಹುದೊಡ್ಡ ಬಜೆಟ್‌ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಈಗಾಗಲೇ ಬಾಲಿವುಡ್ ನಟಿ ದಿಶಾ ಪಟಾನಿ ಹೆಸರು ಮುಂಚೂಣಿಯಲ್ಲಿದೆ. ಆದ್ರೆ, ನಾಯಕಿ ಬಗ್ಗೆ ಅಧಿಕೃತ ಮಾಡಿಲ್ಲ. ಈ ನಡುವೆ ಮತ್ತೊಬ್ಬ ನಾಯಕಿ ಯಾರೆಂದು ಸದ್ದು ಮಾಡ್ತಿದೆ. ಮುಂದೆ ಓದಿ...

  ದಿಶಾ ಪಟಾನಿ ಪಕ್ಕಾ ಆಗಿಲ್ಲ?

  ದಿಶಾ ಪಟಾನಿ ಪಕ್ಕಾ ಆಗಿಲ್ಲ?

  ಸಲಾರ್ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ದಿಶಾ ಪಟಾನಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ, ನಾಯಕಿ ಕುರಿತು ನಿರ್ದೇಶಕ ಅಥವಾ ನಿರ್ಮಾಣ ಸಂಸ್ಥೆಯಾಗಲಿ ಖಚಿತಪಡಿಸಿಲ್ಲ. ದಿಶಾ ಪಟಾನಿಯ ಹೆಸರು ಮುಂಚೂಣಿಯಲ್ಲಿರಬಹುದು ಅಷ್ಟೇ.

  'ಸಲಾರ್' ಸಿನಿಮಾ; ಈ ಇಬ್ಬರು ಸ್ಟಾರ್ ನಟಿಯರಲ್ಲಿ ಯಾರಾಗಲಿದ್ದಾರೆ ಪ್ರಭಾಸ್ ಗೆ ನಾಯಕಿ?'ಸಲಾರ್' ಸಿನಿಮಾ; ಈ ಇಬ್ಬರು ಸ್ಟಾರ್ ನಟಿಯರಲ್ಲಿ ಯಾರಾಗಲಿದ್ದಾರೆ ಪ್ರಭಾಸ್ ಗೆ ನಾಯಕಿ?

  ಇಬ್ಬರು ನಾಯಕಿಯರು ಎನ್ನಲಾಗಿದೆ!

  ಇಬ್ಬರು ನಾಯಕಿಯರು ಎನ್ನಲಾಗಿದೆ!

  ಮತ್ತೊಂದು ವರದಿ ಪ್ರಕಾರ ಸಲಾರ್ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಒಬ್ಬರು ಬಾಲಿವುಡ್ ನಟಿ ದಿಶಾ ಪಟಾನಿ ಹೆಸರು ಕೇಳಿ ಬಂದಿದ್ದರೆ, ಮತ್ತೊಬ್ಬ ನಾಯಕಿ ಯಾರು ಎನ್ನುವುದು ಪಕ್ಕಾ ಆಗಿಲ್ಲ. ಎರಡನೇ ನಾಯಕಿಯಾಗಿ ಹುಡುಕಾಟ ನಡೆಯುತ್ತಿದೆ ಎಂದಷ್ಟೇ ಸುದ್ದಿಯಾಗಿದೆ.

  ರಾಧೇ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್!

  ರಾಧೇ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್!

  ಸಾಹೋ ಸಿನಿಮಾ ನಿರೀಕ್ಷೆಯಂತೆ ಪ್ರಭಾಸ್‌ಗೆ ಸಕ್ಸಸ್ ತಂದುಕೊಟ್ಟಿಲ್ಲ. ಈ ಚಿತ್ರದ ನಂತರ ರಾಧೇ ಶ್ಯಾಮ್ ಸಿನಿಮಾ ಮಾಡಿದ್ದು, ಈ ಚಿತ್ರದ ಅಂತಿಮ ಕೆಲಸದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಜೊತೆ ಪೂಜಾ ಹೆಗಡೆ ನಾಯಕಿಯಾಗಿದ್ದಾರೆ.

  ಆದಿಪುರುಷ್ ಆರಂಭಿಸಬೇಕಿದೆ

  ಆದಿಪುರುಷ್ ಆರಂಭಿಸಬೇಕಿದೆ

  ರಾಧೇಶ್ಯಾಮ್ ಮುಗಿದ ಬಳಿಕ ನಾಗ್ ಅಶ್ವಿನ್ ನಿರ್ದೇಶನದ 21ನೇ ಚಿತ್ರವನ್ನು ಪ್ರಭಾಸ್ ಕೈಗೆತ್ತಿಕೊಳ್ಳಲಿದ್ದಾರೆ. ಇದರ ಜೊತೆ ಜೊತೆಗೆ ಸಲಾರ್ ಹಾಗೂ ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾವೂ ಆರಂಭಿಸಬೇಕಿದೆ. ಒಟ್ನಲ್ಲಿ ಮುಂದಿನ ಎರಡು ವರ್ಷ ಪ್ರಭಾಸ್ ಸಂಪೂರ್ಭ ಬ್ಯುಸಿಯಾಗಿದ್ದಾರೆ.

  English summary
  Bollywood actress Disha Patani is first heroine for Salaar movie. who will playing second heroine in this project?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X