Don't Miss!
- News
ಬಿಬಿಎಂಪಿ ವಾರ್ಡ್ ರಚನೆ ವಿವಾದ: ಮೀಸಲು ನಿಗದಿ ಅಂತಿಮಗೊಳಿಸದಂತೆ ಹೈಕೋರ್ಟ್ ತಾಕೀತು
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
'ಸಲಾರ್' ಮರು ಚಿತ್ರೀಕರಣ, 12 ಕೋಟಿ ನಷ್ಟ?
'ಕೆಜಿಎಫ್ 2' ಚಿತ್ರ ರಿಲೀಸ್ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಸಲಾರ್' ಸಿನಿಮಾ ಅಂದುಕೊಂಡಿದ್ದಕ್ಕಿಂತೂ ಹೆಚ್ಚು ತಡವಾಗಿದೆ. ಈ ಚಿತ್ರದ ಮೇಲೆ ದಿನೇ ದಿನೆ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ. ಚಿತ್ರದ ಒಂದಷ್ಟು ಚಿತ್ರೀಕರಣ ಇನ್ನೂ ಬಾಕಿ ಇದೆ.
ಸದ್ಯ 'ಸಲಾರ್' ತಂಡ ಮುಂದಿನ ಹಂತದ ಚಿತ್ರೀರಣಕ್ಕೆ ಸಿದ್ಧವಾಗಿದೆಯಂತೆ. ಟಾಲಿವುಡ್‌ನಲ್ಲಿ 'ಸಲಾರ್' ಚಿತ್ರದ ಬಗ್ಗೆಯೇ ಚರ್ಚೆ. ಯಾಕೆಂದರೆ 'ಸಲಾರ್' ಚಿತ್ರೀಕರಣವೆ ಗೊಂದಲಮಯವಗಿದೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಬರದೇ ಇರುವ ಕಾರಣ ಸಿನಿಮಾ ರಿಲೀಸ್ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.
ಇತಿಹಾಸ
ಬರೆದ
'ಬಾಹುಬಲಿ'ಗೆ
7
ವರ್ಷ:
ಹಲವು
ಸ್ವಾರಸ್ಯಕರ
ಸಂಗತಿ
ಇಲ್ಲಿವೆ!
ಇನ್ನು ಈಗ ಶೂಟಿಂಗ್ ಬಗ್ಗೆ ಮತ್ತೊಂದು ವಿಚಾರ ಹಬ್ಬಿದೆ. ಸಲಾರ್ ಸಿನಿಮಾದ ಚಿತ್ರೀಕರಣ ಶುರುವಾಗಲು ತಯಾರಿ ನಡೆದಿದೆ. ಆದರೆ ಚಿತ್ರದ ಮುಂದಿನ ಹಂತದ ಚಿತ್ರೀಕರಣ ಇದಲ್ಲ. ಬದಲಿಗೆ ಚಿತ್ರದ ಹಲವು ದೃಶ್ಯಗಳನ್ನು ಮತ್ತೆ ಮರು ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

'ಸಲಾರ್' ಮರು ಚಿತ್ರೀಕರಣ!
ನೂರಾರು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸಾಲಾರ್ ಚಿತ್ರದ ಶೂಟಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಪ್ರಶಾಂತ್ ನೀಲ್ ಸಲಾರ್ ಚಿತ್ರದಲ್ಲಿ ಕೊಂಚ ಬದಲಾವಣೆ ಮಾಡಲು ನಿರ್ಧರಿಸಿದ್ದಾರಂತೆ. ಚಿತ್ರದ ಸಾಹಸ ದೃಶ್ಯಗಳಲ್ಲಿ ಕೆಲವನ್ನು ರೀ ಶೂಟ್ ಮಾಡಲು ಆಲೋಚಿಸಿದ್ದಾರಂತೆ. ಆ್ಯಕ್ಷನ್ ದೃಶ್ಯಗಳ ಔಟ್‌ಪುಟ್ ನೋಡಿದಾಗ ಅವು ಸರಿ ಇಲ್ಲ ಎನಿಸಿದ ಕಾರಣ ಮತ್ತೇ ರೀ ಶೂಟ್ ಮಾಡುವ ನಿರ್ಧಾರ ಮಾಡಿದ್ದಾರಂತೆ.
ಪ್ರಭಾಸ್
'ಸ್ಪಿರಿಟ್'ಗೆ
ಕರೀನಾ
ಕಪೂರ್
ಸಹಿ!

12 ಕೋಟಿ ನಷ್ಟ!
'ಕೆಜಿಎಫ್ 2' ನಂತರ, ಪ್ರಶಾಂತ್ ನೀಲ್ ಚಿತ್ರಗಳಲ್ಲಿನ ಸಾಹಸ ದೃಶ್ಯಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಹಾಗಾಗಿಯೇ ಈ ಸಿನಿಮಾದ ಸಾಹಸ ದೃಶ್ಯಗಳನ್ನು ಅದ್ಭುತವಾಗಿ ನೀಡಲು ಪ್ರಶಾಂತ್ ನೀಲ್ ಮುಂದಾಗಿದ್ದಾರೆ. ಹಾಗಾಗಿ ಸಲಾರ್ ಚಿತ್ರದ ಕೆಲವು ಆ್ಯಕ್ಷನ್ ದೃಶ್ಯಗಳನ್ನು ರೀ ಶೂಟ್ ಮಾಡಲಿದ್ದಾರಂತೆ. ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ 12 ಕೋಟಿ ರೂ. ವರೆಗೆ ಖರ್ಚು ಮಾಡಿದ್ದ ಸಾಹಸ ದೃಶ್ಯವನ್ನು ಮತ್ತೆ ರೀ ಶೂಟ್ ಮಾಡಲು ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಾಹಸ ದೃಶ್ಯಗಳನ್ನು ಮತ್ತೊಮ್ಮೆ ಚಿತ್ರೀಕರಿಸುವ ಸಾಧ್ಯತೆಗಳಿವೆ. ಸದ್ಯ ವಿದೇಶದಲ್ಲಿರುವ ಪ್ರಭಾಸ್ ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ. ನಂತರ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ಫೈಟ್‌ಗಾಗಿ ಪ್ರಭಾಸ್ ರೆಡಿ!
ಇನ್ನು ಈ ಚಿತ್ರದಲ್ಲಿ ಸಹ ದೃಶ್ಯಗಳೇ ಪ್ರಧಾನ. ಈ ಸಿನಿಮಾ ಫುಲ್ ಆಕ್ಷನ್ ಪ್ಯಾಕ್ಡ್ ಆಗಿರಲಿದೆ. ಯಾಕೆಂದರೆ ಸಿನಿಮಾದ ಅತ್ಯಂತ ಮುಖ್ಯ ಅಂಶವೇ ಆ್ಯಕ್ಷನ್ ಎನ್ನಲಾಗಿದೆ. ಆ್ಯಕ್ಷನ್ ದೃಶ್ಯಕ್ಕಾಗಿ ನಟ ಪ್ರಭಾಸ್ ಕೂಡ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ. ಈ ಹಿಂದೆ ತೂಕ ಹೆಚ್ಚಿಸಿಕೊಂಡು ದಪ್ಪಗೆ ಕಾಣುತ್ತಿದ್ದ ಪ್ರಭಾಸ್, ತೂಕವನ್ನು ಇಳಿಸಿಕೊಂಡಿದ್ದಾರೆ. ನಟ ಪ್ರಭಾಸ್ ಕೂಡ ಈ ಸಾಹಸ ದೃಶ್ಯಕ್ಕಾಗಿ ಹೆಚ್ಚಿನ ಸರ್ಕಸ್ ಮಾಡಬೇಕಾಗುತ್ತದೆ.

ಸಲಾರ್ ಚಿತ್ರದಲ್ಲಿ ಆ್ಯಕ್ಷನ್ ಪ್ರಧಾನ!
ಸಲಾರ್ ಸಿನಿಮಾದಲ್ಲಿ ಹೆಚ್ಚಾಗಿ ಆಕ್ಷನ್ ಇರುತ್ತಂತೆ. ಸಿನಿಮಾದಲ್ಲಿ ಬೇರೆಲ್ಲಾ ಅಂಶಗಳಿಗಿಂತ ಆ್ಯಕ್ಷನ್ ಪ್ರಮುಖವಾಗಿರುತ್ತದೆಯಂತೆ. ಹಾಗಾಗಿ ವಿಭಿನ್ನ ರೀತಿಯ ಆ್ಯಕ್ಷನ್ ಸಿಕ್ವೆನ್ಸ್‌ಗಳನ್ನು ಈ ಚಿತ್ರಕ್ಕಾಗಿ ಕಂಪೋಸ್ ಮಾಡಲಾಗುತ್ತಿದೆ. ಕೆಜಿಎಫ್ ಸಿನಿಮಾದಲ್ಲಿ ಆ್ಯಕ್ಷನ್ ಬೇರೇಯದ್ದೇ ರೀತಿಯಲ್ಲಿ ತೋರಿಸಿ ದೊಡ್ಡ ಇಂಪಾಕ್ಟ್ ಮಾಡಿದ್ದರೂ ಪ್ರಶಾಂತ್ ನೀಲ್. ಈಗ ಸಲಾರ್ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಸದ್ಯದಲ್ಲೇ ರಿಲೀಸ್ ದಿನಾಂಕ!
ಇನ್ನು ಸಲಾರ್ ಶೂಟಿಂಗ್ ತಡವಾಗುತ್ತಿರುವ ಕಾರಣ, ಚಿತ್ರದ ರಿಲೀಸ್ ದಿನಾಂಕವನ್ನು ಹಲವು ಬಾರಿ ಮುಂದೂಡಲಾಗಿದೆ. ಇದೀಗ ಮತ್ತೆ ಚಿತ್ರದ ಶೂಟಿಂಗ್‌ಗೆ ಮುಂದಗಿದ್ದು, ವೇಗವಾಗಿ ಚಿತ್ರೀಕರಣ ಸಾಗಲಿದೆ. ಇನ್ನುಳಿದಂತೆ ಈ ಚಿತ್ರ 2023ರಲ್ಲೇ ತೆರೆಗೆ ಬರೋದು. ಆದರೆ ದಿನಾಂಕವನ್ನು ಮಾತ್ರ ಪ್ರಕಟ ಮಾಡಿಲ್ಲ.