For Quick Alerts
  ALLOW NOTIFICATIONS  
  For Daily Alerts

  ಸದ್ದಿಲ್ಲದೇ ಆ ನಟನನ್ನು ಭೇಟಿ ಮಾಡಿದ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್?

  |

  ಕೆಜಿಎಫ್ ಚಾಪ್ಟರ್ 1 ಸಿನಿಮಾ ಮೂಲಕ ಇಡೀ ದೇಶವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 2 ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಿದ್ದಾರೆ.

  ಈ ಸಿನಿಮಾ ಮುಗಿಸಿದ ಬಳಿಕ ಮುಂದಿನ ಚಿತ್ರವನ್ನು ಯಾವ ನಟನ ಜೊತೆ ಮಾಡಲಿದ್ದಾರೆ ಎಂಬ ಕುತೂಹಲ ಚಿತ್ರಪ್ರೇಮಿಗಳನ್ನು ಕಾಡುತ್ತಿದೆ.

  ತೆಲುಗು ನಟರಾದ ಪ್ರಭಾಸ್, ಜೂನಿಯರ್ ಎನ್ ಟಿ ಆರ್ ಅವರ ಜೊತೆ ಮಾತುಕತೆ ಆಗ್ತಿದೆ ಎಂಬ ಸುದ್ದಿಗಳು ಚರ್ಚೆಯಲ್ಲಿದೆ. ಇಲ್ಲ, ಕನ್ನಡ ನಟರ ಜೊತೆಯೇ ಮುಂದಿನ ಸಿನಿಮಾ ಆಗಬಹುದು ಎಂದು ಹೇಳಲಾಗ್ತಿದೆ. ಆದ್ರೆ, ಪ್ರಶಾಂತ್ ನೀಲ್ ಹೊಸ ಚಿತ್ರದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

  ಪ್ರಭಾಸ್ 'ಅದಿಪುರುಷ್' ಸಿನಿಮಾಗೆ ನಾಯಕಿ ಫಿಕ್ಸ್; ಯಾರಾಗ್ತಿದ್ದಾರೆ ಸೀತೆ?

  ಇದೀಗ, ಬಾಹುಬಲಿ ಸ್ಟಾರ್ ಪ್ರಭಾಸ್ ಅವರನ್ನು ಪ್ರಶಾಂತ್ ನೀಲ್ ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇವರಿಬ್ಬರು ಭೇಟಿ ಮಾಡಿರುವ ಫೋಟೋ ಯಾವುದು ಬಹಿರಂಗವಾಗಿಲ್ಲ, ಆದರೆ, ಇಬ್ಬರು ಮುಖಾಮುಖಿಯಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

  ಸದ್ಯ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಯಶ್, ಸಂಜಯ್ ದತ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

  ಪ್ರಭಾಸ್ ಮುಂದಿನ ಮೂರು ಚಿತ್ರಗಳ ಬಜೆಟ್ 1000 ಕೋಟಿ!

  ಮತ್ತೊಂದೆಡೆ ಪ್ರಭಾಸ್ ನಟಿಸಿರುವ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದಾದ ಬಳಿಕ ನಾಗ್ ಅಶ್ವಿನ್ ಹಾಗೂ ಆದಿಪುರುಷ್ ಪ್ರಾಜೆಕ್ಟ್ ಸಾಲಿನಲ್ಲಿದೆ.

  English summary
  Kannada Director Prashanth neel has meet telugu actor Prabhas at hyderabad said source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X