For Quick Alerts
  ALLOW NOTIFICATIONS  
  For Daily Alerts

  ಎನ್‌ಟಿಆರ್ 31ನೇ ಚಿತ್ರಕ್ಕಾಗಿ ಪ್ರಶಾಂತ್ ನೀಲ್ ಪಡೆದ ಸಂಭಾವನೆ ಇಷ್ಟೇನಾ?

  |

  ಜೂನಿಯರ್ ಎನ್‌ ಟಿ ಆರ್ ಜೊತೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ತಮ್ಮ ಮುಂದಿನ ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದು ಯಂಗ್ ಟೈಗರ್ ನಟಿಸಲಿರುವ 31ನೇ ಪ್ರಾಜೆಕ್ಟ್. ಬಹುಶಃ ಮುಂದಿನ ವರ್ಷದಲ್ಲಿ ಈ ಚಿತ್ರ ಸೆಟ್ಟೇರಬಹುದು. ಏಕಂದ್ರೆ ಇದಕ್ಕೂ ಮುಂಚೆ ಕೊರಟಲಾ ಶಿವ ನಿರ್ದೇಶನದ ಸಿನಿಮಾವೊಂದರಲ್ಲಿ ಎನ್‌ಟಿಆರ್ ನಟಿಸಬೇಕಿದೆ.

  ತೆಲುಗಿನಲ್ಲಿ ಪ್ರಶಾಂತ್ ನೀಲ್ ಗೆ ಸಿಕ್ತಿದೆ ಕೋಟಿ ಕೋಟಿ ಸಂಭಾವನೆ | Filmibeat Kannada

  ಈ ಕಡೆ ಪ್ರಶಾಂತ್ ನೀಲ್ ಸಹ ಪ್ರಭಾಸ್ ಜೊತೆಗಿನ ಸಲಾರ್ ಸಿನಿಮಾ ಮುಗಿಸಬೇಕಿದೆ. ಎನ್‌ಟಿಆರ್-ನೀಲ್ ಕಾಂಬಿನೇಷನ್‌ನಲ್ಲಿ ಸಿನಿಮಾ ಪ್ರಕಟಿಸುತ್ತಿದ್ದಂತೆ ಅದರ ಸುತ್ತ ಒಂದಿಷ್ಟು ಚರ್ಚೆಗಳು ಇಂಡಸ್ಟ್ರಿಯಲ್ಲಿ ನಡೆಯುತ್ತಿದೆ. ಕಥೆ ಹೇಗಿರಬಹುದು, ನಾಯಕಿ ಯಾರಾಗಬಹುದು ಹಾಗೂ ಪ್ರಶಾಂತ್ ನೀಲ್ ಸಂಭಾವನೆ ಎಷ್ಟಿರಬಹುದು ಎಂಬ ಕುತೂಹಲ ಕಾಡ್ತಿದೆ. ಇದೀಗ, ನೀಲ್ ಸಂಭಾವನೆ ವಿಚಾರವಾಗಿ ಮಾಹಿತಿಯೊಂದು ಹೊರಬಿದ್ದಿದೆ. ಮುಂದೆ ಓದಿ....

  ವದಂತಿಗಳನ್ನು ನಿಜ ಮಾಡಿದ ಪ್ರಶಾಂತ್ ನೀಲ್: ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ವದಂತಿಗಳನ್ನು ನಿಜ ಮಾಡಿದ ಪ್ರಶಾಂತ್ ನೀಲ್: ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್

  ಸ್ಟಾರ್ ನಿರ್ದೇಶಕರಿಗಿಂತ ಕಡಿಮೆ ಸಂಭಾವನೆ?

  ಸ್ಟಾರ್ ನಿರ್ದೇಶಕರಿಗಿಂತ ಕಡಿಮೆ ಸಂಭಾವನೆ?

  ಪ್ರಸ್ತುತ ಟಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಿರ್ದೇಶಕರು ಎನಿಸಿಕೊಂಡಿರುವ ಮುಂದೆ ಪ್ರಶಾಂತ್ ನೀಲ್ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ರಾಜಮೌಳಿ, ಸುಕುಮಾರ್, ತ್ರಿವಿಕ್ರಮ್ ಶ್ರೀನಿವಾಸ್, ಕೊರಟಲಾ ಶಿವ ಅವರಿಗಿಂತೂ ನೀಲ್ ಕಡಿಮೆ ಮೊತ್ತ ತೆಗೆದುಕೊಳ್ಳುತ್ತಿದ್ದಾರೆ ಎಂಬ ವಿಚಾರ ಚರ್ಚೆಯಾಗ್ತಿದೆ.

  'ಸಲಾರ್' ಸಿನಿಮಾ: ಪ್ರಭಾಸ್ ಸಹೋದರಿ ಪಾತ್ರಕ್ಕೆ ಸ್ಟಾರ್ ನಟಿ ಎಂಟ್ರಿ?'ಸಲಾರ್' ಸಿನಿಮಾ: ಪ್ರಭಾಸ್ ಸಹೋದರಿ ಪಾತ್ರಕ್ಕೆ ಸ್ಟಾರ್ ನಟಿ ಎಂಟ್ರಿ?

  ಎನ್‌ಟಿಆರ್ ಚಿತ್ರಕ್ಕೆ ನೀಲ್ ಸಂಭಾವನೆ ಎಷ್ಟಿದೆ?

  ಎನ್‌ಟಿಆರ್ ಚಿತ್ರಕ್ಕೆ ನೀಲ್ ಸಂಭಾವನೆ ಎಷ್ಟಿದೆ?

  ಎನ್‌ಟಿಆರ್ ಜೊತೆ ಮಾಡಲಿರುವ 31ನೇ ಚಿತ್ರಕ್ಕಾಗಿ ಪ್ರಶಾಂತ್ ನೀಲ್ 10 ಕೋಟಿವರೆಗೂ ಪಡೆಯಲಿದ್ದಾರೆ ಎನ್ನಲಾಗಿದೆ. ಇತರೆ ನಿರ್ದೇಶಕರಿಗೆ ಹೋಲಿಸಿಕೊಂಡರೆ ಇದು ಕಡಿಮೆ ಸಂಭಾವನೆ ಎನ್ನುವುದು ತಿಳಿಯುತ್ತದೆ. ಕೆಜಿಎಫ್ ಚಾಪ್ಟರ್ 2 ಹಾಗೂ ಸಲಾರ್ ಸಿನಿಮಾಗಳು ಬಿಡುಗಡೆಯಾದ ಬಳಿಕ ನೀಲ್ ಸಂಭಾವನೆಯಲ್ಲಿ ಏರಿಕೆ ಕಂಡರೂ ಅಚ್ಚರಿ ಇಲ್ಲ ಎನ್ನುತ್ತಿವೆ ಮೂಲಗಳು.

  20 ಕೋಟಿ ಎನ್ನುವುದು ವಂದತಿ?

  20 ಕೋಟಿ ಎನ್ನುವುದು ವಂದತಿ?

  ಕೆಜಿಎಫ್ ಚಾಪ್ಟರ್ 2 ಸಿನಿಮಾ ಮುಗಿಸಿದ ಬಳಿಕ ಪ್ರಶಾಂತ್ ನೀಲ್ ತೆಲುಗು ನಟ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಕೈಗೆತ್ತಿಕೊಂಡರು. ಆಗಲೇ ನೀಲ್ ಸಂಭಾವನೆ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿ ಬಂದವು. ಎನ್‌ಟಿಆರ್ ಸಿನಿಮಾ ಓಕೆ ಆಗ್ತಿದ್ದಂತೆ ಈ ಚಿತ್ರಕ್ಕೆ 20 ಕೋಟಿ ಪಡೆದಿದ್ದಾರೆ ಎಂದು ಕೆಲವು ಫ್ಯಾನ್ಸ್ ಪ್ರಚಾರ ಮಾಡಿದರು. ಆದರೆ, ಇದು ಕೇವಲ ವದಂತಿ ಎಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡಿದೆ.

  ಸ್ಟಾರ್ ನಟರನ್ನು ಟಾರ್ಗೆಟ್ ಮಾಡಿದ ನೀಲ್

  ಸ್ಟಾರ್ ನಟರನ್ನು ಟಾರ್ಗೆಟ್ ಮಾಡಿದ ನೀಲ್

  ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಆದ್ಮೇಲೆ ನೀಲ್ ಹೆಸರು ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿತು. ಮತ್ತೊಬ್ಬ ರಾಜಮೌಳಿ ಎನ್ನುವ ಟ್ರೆಂಡ್ ಹುಟ್ಟಿಕೊಂಡಿತ್ತು. ಅದರ ಪರಿಣಾಮ ತೆಲುಗು ಸ್ಟಾರ್ ನಟರು ನೀಲ್ ಜೊತೆ ಸಿನಿಮಾ ಮಾಡಲು ಮುಂದಾದರು. ಪ್ರಭಾಸ್, ಎನ್‌ಟಿಆರ್ ಜೊತೆ ಡೀಲ್ ಆಗಿದೆ. ಮುಂದೆ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಬಹುದು ಎಂದು ಹೇಳಲಾಗಿದೆ.

  English summary
  KGF Director Prashanth Neel has take low remuneration for Jr Ntr's 31st movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X