For Quick Alerts
  ALLOW NOTIFICATIONS  
  For Daily Alerts

  ದಿಶಾನೂ ಇಲ್ಲ, ಕತ್ರಿನಾ ಕೈಫ್ ಅಲ್ಲ....ಸಲಾರ್ ಚಿತ್ರದ ನಾಯಕಿ ಪಾತ್ರಕ್ಕೆ ಹೊಸ ಹೆಸರು?

  |

  ಪ್ರಭಾಸ್ ನಟನೆಯ ಸಲಾರ್ ಚಿತ್ರ ಸೆಟ್ಟೇರಿದ್ದು, ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಹೊಂಬಾಳೆ ಫಿಲಂಸ್ ಬಂಡವಾಳ ಹಾಕುತ್ತಿದ್ದಾರೆ.

  ಬಾಹುಬಲಿ ಖ್ಯಾತಿಯ ನಟ, ಕೆಜಿಎಫ್ ಖ್ಯಾತಿಯ ತಂತ್ರಜ್ಞರ ಕಾಂಬಿನೇಷನ್‌ನಲ್ಲಿ ಸಲಾರ್ ಸಿನಿಮಾ ಮೂಡಿಬರುತ್ತಿದ್ದು, ಈ ಎರಡು ಚಿತ್ರಗಳನ್ನು ಮೀರಿಸುವಂತಹ ಪ್ರಾಜೆಕ್ಟ್ ಇದಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಹಾಗಾಗಿ, ಈ ಚಿತ್ರದ ಉಳಿದ ಕಲಾವಿದರ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಕೊಂಡಿದೆ. ಸದ್ಯಕ್ಕೆ ಪ್ರಭಾಸ್ ಬಿಟ್ಟರೆ ಬೇರೆ ಯಾವ ಕಲಾವಿದರು ಅಧಿಕೃತವಾಗಿ ಈ ಚಿತ್ರಕ್ಕೆ ಎಂಟ್ರಿಯಾಗಿಲ್ಲ. ಆದರೂ ನಾಯಕಿಯರು ವಿಚಾರ ಮಾತ್ರ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮುಂದೆ ಓದಿ....

  ಸಲಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ: ವಿಲನ್ ಪಾತ್ರದಲ್ಲಿ ಖ್ಯಾತ ಹೀರೋ?ಸಲಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ: ವಿಲನ್ ಪಾತ್ರದಲ್ಲಿ ಖ್ಯಾತ ಹೀರೋ?

  ದಿಶಾ, ಕತ್ರಿನಾ ಕೈಫ್ ಹೆಸರು!

  ದಿಶಾ, ಕತ್ರಿನಾ ಕೈಫ್ ಹೆಸರು!

  ಸಲಾರ್ ಚಿತ್ರದಲ್ಲಿ ನಾಯಕಿಯರಾಗಿ ಬಾಲಿವುಡ್ ನಟಿಯರು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಸಲಾರ್ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ದಿಶಾ ಪಟಾನಿ ಹಾಗೂ ಕತ್ರಿನಾ ಕೈಫ್ ಹೆಸರು ಚರ್ಚೆಯಲ್ಲಿದೆ. ಈ ಇಬ್ಬರ ಬಳಿಯೂ ಸಲಾರ್ ಚಿತ್ರತಂಡ ಮಾತುಕತೆ ನಡೆಸಿದ್ದು, ಬಹುಶಃ ಆಯ್ಕೆಯಾಗಬಹುದು ಎನ್ನಲಾಗಿದೆ.

  ಹೊಸ ನಾಯಕಿಯ ಪರಿಚಯ!

  ಹೊಸ ನಾಯಕಿಯ ಪರಿಚಯ!

  ಈ ನಡುವೆ ಸ್ಟಾರ್ ನಟಿಯರನ್ನು ಪಕ್ಕಕ್ಕಿಟ್ಟು ಹೊಸಬರಿಗೆ ಅವಕಾಶ ನೀಡಲು ಪ್ರಶಾಂತ್ರ ನೀಲ್ ನಿರ್ಧರಿಸಿದ್ದಾರಂತೆ. ಮಾಡೆಲ್ ಅಥವಾ ಹೊಸ ನಟಿಯನ್ನು ಕರೆತರಲು ಚಿಂತಿಸಿದ್ದಾರೆ ಎನ್ನಲಾಗಿದೆ. ಪಾತ್ರಕ್ಕೆ ಸೂಕ್ತ ಹಾಗೂ ನ್ಯಾಯ ಒದಗಿಸುವ ಹೊಸ ಕಲಾವಿದೆಯನ್ನು ಹುಡುಕಿ ಬರುವುದು ಉತ್ತಮ ಎಂಬ ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿದೆ.

  'ಸಲಾರ್' ಚಿತ್ರಕ್ಕೆ ನಾಯಕಿ ಆಗ್ತಾರಾ ಬಾಲಿವುಡ್‌ನ ಆಕ್ಷನ್ ಕ್ವೀನ್?'ಸಲಾರ್' ಚಿತ್ರಕ್ಕೆ ನಾಯಕಿ ಆಗ್ತಾರಾ ಬಾಲಿವುಡ್‌ನ ಆಕ್ಷನ್ ಕ್ವೀನ್?

  ವಿಜಯ್ ಸೇತುಪತಿ-ಜಾನ್ ಅಬ್ರಾಹಂ ಹೆಸರು!

  ವಿಜಯ್ ಸೇತುಪತಿ-ಜಾನ್ ಅಬ್ರಾಹಂ ಹೆಸರು!

  ಸಲಾರ್ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಇಬ್ಬರು ಸ್ಟಾರ್ ನಟರ ಹೆಸರು ಮುಂಚೂಣಿಯಲ್ಲಿದೆ. ತಮಿಳು ನಟ ವಿಜಯ್ ಸೇತುಪತಿ ಹಾಗೂ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರನ್ನು ಅಪ್ರೋಚ್ ಮಾಡಲಾಗಿದೆಯಂತೆ. ಈ ಇಬ್ಬರಲ್ಲಿ ಒಬ್ಬರು ಸಲಾರ್ ಟಿಕೆಟ್ ಪಡೆಯಬಹುದು ಎನ್ನಲಾಗಿದೆ.

  ಕೆಜಿಎಫ್ ತಂತ್ರಜ್ಞರು!

  ಕೆಜಿಎಫ್ ತಂತ್ರಜ್ಞರು!

  ಪ್ರಶಾಂತ್ ನೀಲ್ ನಿರ್ದೇಶನ, ಭುವನ್ ಗೌಡ ಅವರ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ನಿರ್ದೇಶನ ಸಲಾರ್ ಚಿತ್ರದಲ್ಲಿದೆ. ಇನ್ನು ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸದ್ಯ ಪೂರ್ವ ತಯಾರಿ ನಡೆಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಫೆಬ್ರವರಿಯಿಂದ ಚಿತ್ರೀಕರಣ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  English summary
  Prashanth Neel planning to introduce newcomers to play female lead opposite Prabhas in Salaar. official confirmation soon stay tuned to hombale films and prashanth neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X