ಮತ್ತೆ 'ಲವ್ ಗುರು' ಜೊತೆ ಬರ್ತಾರಂತೆ ಪ್ರಶಾಂತ್.!
'ಲವ್ ಗುರು' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ತನ್ನದೇ ಸ್ಟೈಲ್ ನ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರುವ ನಿರ್ದೇಶಕ ಪ್ರಶಾಂತ್ ರಾಜ್ ಈಗ ಸರ್ಪ್ರೈಸ್ ವಿಷ್ಯವೊಂದನ್ನ ಬಿಟ್ಟುಕೊಟ್ಟಿದ್ದಾರೆ.
ಪ್ರಶಾಂತ್ ರಾಜ್ ಗೆ ಮೊದಲ ಹೆಜ್ಜೆಯಲ್ಲೇ ಸಕ್ಸಸ್ ತಂದುಕೊಟ್ಟಿದ್ದ ಲವ್ ಗುರು ಚಿತ್ರದ ಸೀಕ್ವೆಲ್ ಶುರು ಮಾಡಲಿದ್ದಾರಂತೆ. ಹೊಸ ಪ್ರತಿಭೆಗಳ ಜೊತೆ ಸೇರಿ ಪಾರ್ಟ್ 2 ಮಾಡಲು ನಿರ್ಧರಿಸಿದ್ದು, ಈಗಾಗಲೇ ಸ್ಕ್ರಿಪ್ಟ್ ಕೆಲಸ ಕೂಡ ಶುರು ಮಾಡಿದ್ದಾರಂತೆ.

ಲವ್ ಗುರು ಸಿನಿಮಾದ ನಂತರ ಗಾನ ಬಜಾನ, ವಿಸಿಲ್, ಜೂಮ್, ದಳಪತಿ, ಆರಂಜ್ ಅಂತಹ ಚಿತ್ರಗಳನ್ನ ಪ್ರಶಾಂತ್ ರಾಜ್ ನಿರ್ದೇಶಿಸಿದ್ದರು. ಈ ಚಿತ್ರಗಳ ಪೈಕಿ ಲವ್ ಗುರು ಸಿನಿಮಾ ಅತಿ ದೊಡ್ಡ ಯಶಸ್ಸು ಕಂಡಿತ್ತು. ಹೀಗಾಗಿ, ಸಹಜವಾಗಿ ಸೀಕ್ವೆಲ್ ಅಂದ್ರೆ ಕುತೂಹಲ ಹೆಚ್ಚಾಗಿದೆ.
2009ರಲ್ಲಿ ರಿಲೀಸ್ ಆಗಿದ್ದ ಲವ್ ಗುರು ಚಿತ್ರದಲ್ಲಿ ರಾಧಿಕಾ ಪಂಡಿತ್ ಮತ್ತು ತರುಣ್ ಚಂದ್ರ, ದಿಲೀಪ್ ರಾಜ್ ನಟಿಸಿದ್ದರು.
English summary
Director Prashanth Raj is all set to start a new film called 'Love Guru 2'. This time, Prashanth Raj intends to start the film with newcomers.


Click it and Unblock the Notifications